

ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಅವರು ಬದುಕಿರುವಾಗಲೇ ನೋಂದಾಯಿತ ದಾನ ಪತ್ರದ ಮೂಲಕ ಯಾರಿಗಾದರೂ ದಾನ ಮಾಡಿದ್ದರೆ, ಆ ಆಸ್ತಿಯಲ್ಲಿ ನಿಮಗೆ ಹಕ್ಕು ಬರುವುದಿಲ್ಲ. ಯಾರಿಗೆ ದಾನ ಮಾಡಿದ್ದಾರೋ ಅವರಿಗೆ ಮಾತ್ರ ಹಕ್ಕು ಇರುತ್ತದೆ. ನಿಮ್ಮ ತಂದೆ ತೀರಿಕೊಂಡಾಗ ಅವರ ಹೆಸರಿನಲ್ಲಿ ಇದ್ದ ಎಲ್ಲ ಆಸ್ತಿಗಳೂ ನಿಮ್ಮ ತಂದೆಯ ಮೊದಲ ಹೆಂಡತಿಗೆ ಮತ್ತು ನಿಮ್ಮ ತಂದೆಯ ಎಂಟು ಮಕ್ಕಳಿಗೆ ಸೇರಿ ಒಟ್ಟು ಒಂಬತ್ತು ಭಾಗ ಆಗುತ್ತದೆ. ನಿಮ್ಮ ತಾಯಿಯನ್ನು , ಮೊದಲ ಹೆಂಡತಿ ಬದುಕಿರುವಾಗಲೇ ನಿಮ್ಮ ತಂದೆ ಮದುವೆ ಆಗಿರುವುದರಿಂದ ಆಕೆಗೆ ಭಾಗ ಬರುವುದಿಲ್ಲ.
ಆಸ್ತಿಯ ವಿಭಾಗ ಮೃತ ಹಿಂದೂ ಪುರುಷನ ಹೆಂಡತಿಯರ ಸಂಖ್ಯೆಯ ಮೇಲೆ ಆಗುವುದಿಲ್ಲ. ಹೀಗಾಗಿ ನಿಮ್ಮ ತಂದೆಯ ಮೊದಲ ಹೆಂಡತಿಯ ಮಕ್ಕಳಿಗೆ ಅರ್ಧ ಭಾಗ ಎರಡನೇ ಹೆಂಡತಿಯ ಮಕ್ಕಳಿಗೆ ಅರ್ಧ ಭಾಗ ಎಂದು ಆಸ್ತಿಯ ಹಂಚಿಕೆ ಆಗುವುದಿಲ್ಲ.
ನೀವು ಸ್ವಾಧೀನದಲ್ಲಿ ಇದ್ದ ಮಾತ್ರಕ್ಕೆ ಆಸ್ತಿಯ ಮಾಲೀಕತ್ವ ನಿಮ್ಮದಾಗುವುದಿಲ್ಲ. ನಿಮ್ಮ ತಂದೆಯ ಎಲ್ಲ ವಾರಸುದಾರರಿಗೂ ಆ ಆಸ್ತಿಯಲ್ಲಿ ಸಮಭಾಗ ಇರುತ್ತದೆ. ಯಾರಾದರೂ ಮಧ್ಯಸ್ಥಿಕೆಗಾರರನ್ನು ಸಂರ್ಪಸಿ ಮಾತುಕತೆಯ ಮೂಲಕ ನೀವು ಈಗ ಸ್ವಾಧೀನದಲ್ಲಿ ಇರುವ ಆಸ್ತಿಯನ್ನು ನಿಮ್ಮ ತಂದೆಯ ಮೊದಲ ಹೆಂಡತಿ ಮತ್ತು ಮಕ್ಕಳು ನಿಮಗೇ ಬಿಡಲು ಸಾಧ್ಯವೇ ಎಂದು ಪ್ರಯತ್ನ ಮಾಡುವುದು ಒಳ್ಳೆಯದು.
್ಝುದುವೆಯಾಗಿ ಮೂರು ವರ್ಷವಾದರೂ ನಮ್ಮ ನಡುವೆ ದೈಹಿಕ ಸಂಬಂಧ ಇಲ್ಲ. ನಿನ್ನನ್ನು ನೋಡಿದರೆ ನನಗೆ ಮಗುವನ್ನು ನೋಡಿದಂತೆ ಆಗುತ್ತದೆ ಎನ್ನುತ್ತಾಳೆ. ಡಾಕ್ಟರ ಹತ್ತಿರ ಹೋಗಿದ್ದೆವು. ಆದರೂ ಯಾವ ಪ್ರಯೋಜನವೂ ಆಗಿಲ್ಲ. ವಿಚ್ಛೇದನ ಕೊಡು ಎಂದರೆ ಅದಕ್ಕೂ ಒಪ್ಪುತ್ತಿಲ್ಲ. ಎಲ್ಲರ ಮುಂದೆ ಅವಳ ತಂದೆ ತಾಯಿ ನಾನೇ ನಪುಂಸಕ ಎನ್ನುತ್ತಿದ್ದಾರೆ. ನಾನು ಈಗ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ, ನ್ಯಾಯಾಲಯದಲ್ಲಿ ಎಲ್ಲರ ಮುಂದೆ ಈ ವಿಷಯಗಳನ್ನೆಲ್ಲ ಹೇಗೆ ವಿಚಾರಣೆ ಮಾಡಿಸುವುದು ಎನ್ನುವ ಹೆದರಿಕೆಯೂ ಆಗುತ್ತಿದೆ. ದಯವಿಟ್ಟು ಸಲಹೆ ಕೊಡಿ.
ವಿವಾಹದ ನಂತರ ಪತಿ ಅಥವಾ ಪತ್ನಿ ಯಾರೇ ಆಗಲೀ ದೈಹಿಕ ಸಂಬಂಧಕ್ಕೆ ಅವಕಾಶ ಮಾಡಿಕೊಡದೇ ಇರುವುದು ಕ್ರೂರತೆ ಆಗುತ್ತದೆ. ಈ ಕಾರಣವನ್ನು ಕೊಟ್ಟು ನೀವು ವಿಚ್ಛೇದನಕ್ಕೆ ನಿಮ್ಮ ಪತ್ನಿಯ ಮೇಲೆ ಪ್ರತ್ಯೇಕವಾಗಿ ಪ್ರಕರಣವನ್ನು ದಾಖಲಿಸಿ. ವಿವಾಹವಾದಾಗಲಿನಿಂದ ಈವರೆಗೆ ವಿವಾಹವನ್ನು ಫಲಪ್ರದವನ್ನಾಗಿ ಮಾಡಲು ನೀವು ಏನೆಲ್ಲ ಪ್ರಯತ್ನ ಪಟ್ಟಿದ್ದೀರಿ ಎನ್ನುವುದನ್ನು ವಿವರಿಸಿ, ಪ್ರಕರಣ ದಾಖಲಿಸಿ. ಸಾಮಾನ್ಯವಾಗಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಿರುವ ಯಾವುದೇ ಪ್ರಕರಣಗಳಲ್ಲೂ ವಿಚಾರಣೆ ತೆರೆದ ನ್ಯಾಯಾಲಯದಲ್ಲಿ ಆಗುವುದಿಲ್ಲ. ಬೇಕಿದ್ದರೆ ನೀವು ವಿಚಾರಣೆ ‘ಇನ್ ಕ್ಯಾಮೆರಾ ಪೊ›ಸೀಡಿಂಗ್ಸ್’ ಮೂಲಕ ಆಗಬೇಕೆಂದೂ ನ್ಯಾಯಾಲಯವನ್ನು ಕೇಳಿಕೊಳ್ಳಬಹುದು. ಆಗ ನಿಮಗೆ ಯಾವ ಸಂಕೋಚವೂ ಆಗದಂತಹ ವಾತಾವರಣದಲ್ಲಿ , ಮುಚ್ಚಿದ ಬಾಗಿಲ ಒಳಗೆ ವಿಚಾರಣೆ ನಡೆಯುತ್ತದೆ. ನಿಮಗೆ ನಪುಂಸಕತೆ ಇಲ್ಲ ಎನ್ನುವ ಬಗ್ಗೆ ಬೇಕಿದ್ದರೆ ನೀವು ಡಾಕ್ಟರರಿಂದ ಸರ್ಟಿಫಿಕೇಟ್ ಪಡೆದುಕೊಳ್ಳಿ. ಪ್ರಕರಣ ದಾಖಲಿಸುವಾಗಲೇ ಆ ಸರ್ಟಿಫಿಕೇಟನ್ನೂ ಹಾಕಿ. ಯಾವುದಕ್ಕೂ ಪ್ರಕರಣವನ್ನು ದಾಖಲಿಸಿದ ನಂತರ ನಿಮ್ಮ ಪತ್ನಿಗೆ ನೋಟಿಸ್ ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಮಧ್ಯಸ್ಥಿಕೆಗಾರರ ಸಹಾಯದಿಂದ ನೀವಿಬ್ಬರೂ ಒಂದು ರಾಜಿ ಸೂತ್ರಕ್ಕೆ ಬರಬಹುದು.