ಜಾಗೃತ ಹಿಂದೂವನ್ನು ತಡೆಯೋದು ಈಗ ಸುಲಭವಲ್ಲ!

Hindu
Published on

ಭಾರತೀಯ ಸಂವಿಧಾನಕ್ಕೆ 1976ರಲ್ಲಿ 46ನೇ ತಿದ್ದುಪಡಿ ತಂದು "ಜಾತ್ಯತಿತ' ಎನ್ನುವ ಪದವನ್ನು ಸೇರಿಸಲಾಯ್ತು. ಅದಕ್ಕೂ ಮುನ್ನ ಈ ಪದದ ಮೂಲಕ ಭಾರತವನ್ನು ಗುರುತಿಸುವುದಕ್ಕೆ ಬಹುತೇಕ ಸಂವಿಧಾನ ರಚನಾಕಾರರ ವಿರೋಧವಿತ್ತು. ಇಂದಿರಾ ಗಾಂಧಿ ತನ್ನ ಪ್ರಭಾವವನ್ನು ಸ್ಥಾಪಿಸಲು ಹೀಗೊಂದು ಪದವನ್ನು ತುರುಕಿದ್ದು ನಿಜವಾದರೂ

ಮುಂದೊಮ್ಮೆ ನ್ಯಾಯಾಲಯ ಭಾರತ ಮೊದಲಿನಿಂದಲೂ ಜಾತ್ಯತಿತ ರಾಷ್ಟ್ರವೇ ಎಂಬುದನ್ನು ಪುನರುಚ್ಚರಿಸಿತ್ತು. ಸೆಕ್ಯುಲರ್​ ಎನ್ನುವ ಪದಕ್ಕೆ ಎಲ್ಲರನ್ನೂ ಸಮಾನವಾಗಿ ಕಾಣುವ ಎಂಬ ವಿಶಾಲ ಅರ್ಥವನ್ನು ಗಮನದಲ್ಲಿಟ್ಟುಕೊಳ್ಳುವುದಾದರೆ ವಾಸ್ತವವಾಗಿ ಭಾರತ ಆರಂಭದಿಂದಲೂ ಸೆಕ್ಯುಲರ್​ ರಾಷ್ಟ್ರವೇ. ಒಂದು ಮತವನ್ನು ಪಾಲಿಸುವ ರಾಜರು ಮತ್ತೊಂದು ಮತಕ್ಕೆ ಸೇರಿದವರನ್ನು ಕೊಂದ ಉದಾಹರಣೆಗಳು ಇಲ್ಲಿ ಹೆಚ್ಚು&ಕಡಿಮೆ ಇಲ್ಲವೇ ಇಲ್ಲ. ಸ್ವತಃ ರಾಜನೂ ಪಂಥವೊಂದರ ಚಿಂತನೆಗೆ ಒಳಗಾಗಿ ತಾನೂ ಬದಲಾದ ಉದಾಹರಣೆಗಳು ಇಲ್ಲಿ ಲೆಕ್ಕವಿಲ್ಲದಷ್ಟು ಸಿಗುತ್ತವೆ. ಯಾವುದಾದರೊಂದು ಪಥವನ್ನು ಆರಿಸಿಕೊಂಡು ಅಧ್ಯಾತ್ಮದ ಹಾದಿಯಲ್ಲಿ ನಡೆಯುವುದಕ್ಕೆ ಇಲ್ಲಿ ಪೂರ್ಣ ಸ್ವಾತಂತ್ರ್ಯ ಇತ್ತು. ಈ ಕಾರಣಕ್ಕಾಗಿಯೇ ಈ ದೇಶ ಮುಸಲ್ಮಾನರನ್ನು, ಕ್ರಿಶ್ಚಿಯನ್ನರನ್ನು ಅದಕ್ಕೂ ಮುನ್ನ ಪಾರ್ಸಿ, ಯಹೂದ್ಯರನ್ನು, ಶಕ&ಹೂಣರನ್ನು ಸಹಿಸಿಕೊಳ್ಳಲು ಸಾಧ್ಯವಾಗಿದ್ದು. ಪ್ರತಿ ಪಥವೂ ಭಗವಂತನೆಡೆಗೆ ಸಾಗುವ ಮಾರ್ಗವೇ ಎಂಬುದು ಹಿಂದೂವಿನ ದೃಢವಾದ ನಂಬಿಕೆ. ಅದೇ ನಮ್ಮ ಶಕ್ತಿ ಕೂಡ. ಇದಕ್ಕೆ ಪ್ರತಿಯಾಗಿ ಜಗತ್ತಿನ ಬಹುತೇಕ ಮತ&ಪಂಥಗಳು ತಮ್ಮ ಪಂಥದವರು ಮಾತ್ರ ಸ್ವರ್ಗಕ್ಕೆ ಹೋಗಬಲ್ಲರು ಎಂಬ ಮೂರ್ಖತನದ ವಾದ ಮಂಡಿಸುತ್ತಲೇ ಕಾಲ ಕಳೆದಿದ್ದಾರೆ. ಹೀಗಾಗಿ ಸೆಕ್ಯುಲರ್​ ಪದಪ್ರಯೋಗ ಮಾಡುವಾಗ ಹೆಚ್ಚು ಪೂರ್ವತಯಾರಿ ಮಾಡಿಕೊಳ್ಳಬೇಕಾದ್ದು ಹಿಂದೂ ಜನಾಂಗದವರನ್ನುಳಿದು ಬೇರೆಯವರೇ. ವಿಚಿತ್ರವೆಂದರೆ ಸಹಿಸಿಕೊಳ್ಳುವ ಶ್ರೇಷ್ಠ ಗುಣವನ್ನು ಹೊಂದಿರುವ ಹಿಂದೂವಿಗೆ ಎಲ್ಲರೂ ಪಾಠ ಮಾಡುತ್ತಾರೆಯೇ ಹೊರತು ಸಹಿಸಿಕೊಳ್ಳುವ ಲವಲೇಶದಷ್ಟೂ ಗುಣವಿಲ್ಲದ ಇತರರಿಗಲ್ಲ.

ಮುಸಲ್ಮಾನರ ಮೂಲ ಸಿದ್ಧಾಂತದಲ್ಲೇ ಸಮಸ್ಯೆ ಇದೆ. ಅಲ್ಲಾಹ್​ನನ್ನು ಒಪ್ಪದ ಪ್ರತಿಯೊಬ್ಬ ವ್ಯಕ್ತಿಯೂ ಅವರ ಪಾಲಿಗೆ ಕಾಫಿರನೆನಿಸಿಕೊಳ್ಳುತ್ತಾನೆ ಮತ್ತು ಇಂತಹ ಕಾಫಿರರನ್ನು ಒಂದೋ ಅಲ್ಲಾಹ್​ನ ಮಾರ್ಗಕ್ಕೆ ತರಬೇಕು, ಬರಲೊಪ್ಪದಿದ್ದರೆ ಅವರನ್ನು ಮುಗಿಸಿಯೇ ಬಿಡಬೇಕು. ಹಿಂದೂಗಳಲ್ಲಾದರೋ ಭಗವಂತನನ್ನು ಭಿನ್ನ&ಭಿನ್ನ ಸ್ವರೂಪಗಳಲ್ಲಿ ಆರಾಧಿಸುವ ಪ್ರಕ್ರಿಯೆಗೆ ಅವಕಾಶ ಇರುವುದರಿಂದ ಇಲ್ಲಿ ಸಹಜವಾಗಿಯೇ ಮುಸಲ್ಮಾನನಿಗೂ, ಕ್ರಿಶ್ಚಿಯನ್ನನಿಗೂ, ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ನಾಸ್ತಿಕನಿಗೂ ಬದುಕುವ ಸಮಾನ ಹಕ್ಕು ಇದ್ದೇ ಇದೆ. ಈಗ ಹೇಳಿ ಸಂವಿಧಾನದಲ್ಲಿ ಸೆಕ್ಯುಲರ್​ ಎನ್ನುವ ಪದ ಯಾರಿಗಾಗಿ? ಅದನ್ನು ಅನುಸರಿಸಬೇಕಾದದ್ದು ಯಾರು? ನಿಸ್ಸಂಶಯವಾಗಿ ಭಾರತೀಯ ಮತಗಳನ್ನು ಬಿಟ್ಟು ಉಳಿದವರಿಗಾಗಿಯೇ ಈ ಸಾಂವೈಧಾನಿಕ ಪದದ ಬಳಕೆ. ಅಚ್ಚರಿ ಎಂಬಂತೆ ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಇದನ್ನು ಹಿಂದೂಗಳಿಗೆ ಬೋಧಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿ ಬಾರಿ ಹಿಂದೂ ತನ್ನ ಹಕ್ಕುಗಳ ಬಗ್ಗೆ, ತನ್ನ ಮಂದಿರ, ಸಂಸತಿ ಬಗ್ಗೆ ಮಾತನಾಡಿದಾಗ ಈ ಪದವನ್ನು ಮುಂದಿರಿಸಿ ಹೀಯಾಳಿಸಲಾಗುತ್ತದೆ.

ನಿರಂತರ ಸಾವಿರ ವರ್ಷಗಳ ಕಾಲ ಮುಸಲರ ಆಕ್ರಮಣವನ್ನು ಈ ನಾಡು ಕಂಡಿದೆ. ಅಸಂಖ್ಯ ಮಂದಿರಗಳು ಧ್ವಂಸವಾಗಿಹೋಗಿವೆ. ಆ ಮಂದಿರಗಳ ಅವಶೇಷಗಳನ್ನು ಬಳಸಿಕೊಂಡೇ ಮಸೀದಿಗಳ ನಿರ್ಮಾಣವಾಗಿದೆ. ಮೂರ್ತಿಗಳನ್ನು ಒಡೆಯುವ, ನಮಾಜು ಮಾಡುವ ಸ್ಥಳದ ಕೆಳಗೆ ಹೂತು ಅದರ ಮೇಲೆ ನಡೆದಾಡುವ, ಸಿಂಹಾಸನವನ್ನೇರುವ ಮೆಟ್ಟಲಾಗಿಸುವ ವಿಕೃತ ಬುದ್ಧಿಗಳೂ ಇತಿಹಾಸದಲ್ಲಿ ಕಂಡುಬಂದಿವೆ. ಇಷ್ಟಕ್ಕೇ ನಿಲ್ಲದ ಈ ವಿಧ್ವಂಸಕಾರಿಗಳು ಹಿಂದೂ ಸಂಸತಿಯನ್ನು ಬುಡದಿಂದ ನಾಶಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ. ಜಾತಿ ಪದ್ಧತಿಗಳು ಇಂದಿನ ಸ್ವರೂಪಕ್ಕೆ ಬರಲು ಇಸ್ಲಾಮಿನ ಆಕ್ರಮಣವೂ ಒಂದು ಕಾರಣ ಎನ್ನುವುದನ್ನು ಇತಿಹಾಸದ ಅಧ್ಯಯನ ಮಾಡಿದವರು ಹೇಳಬಲ್ಲರು. ಆದರೆ ಇವೆಲ್ಲವನ್ನೂ ಮೀರಿ ಅವರ ಎಸಗಿದ ಆಘಾತವೆಂದರೆ ಭಾರತವನ್ನು ಹಂತ&ಹಂತವಾಗಿ ಚೂರುಮಾಡಿದ್ದು. ಅ್ಘಾನಿಸ್ತಾನ ನಮ್ಮಿಂದ ದೂರವಾದದ್ದು ನಮಗೆ ಗೊತ್ತೇ ಆಗಲಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಕಣ್ಣೆದುರಿಗೇ ಬೇರ್ಪಟ್ಟು ಮತ್ತೀಗ ಭಾರತವನ್ನು ಮತ್ತಷ್ಟು ಚೂರುಗೈಯ್ಯಲು ಇವರೆಲ್ಲ ಸಜ್ಜಾಗುತ್ತಿದ್ದಾರೆ. ಹಿಂದೂ ಸಹಿಸಿಕೊಳ್ಳುವುದಾದರೂ ಹೇಗೆ? ಹೀಗೆಲ್ಲ ಜೋರಾಗಿ ಮಾತನಾಡಿದೊಡನೆ ಸಜ್ಜನ ಮುಸಲ್ಮಾನರಿದ್ದಾರಲ್ಲ, ಎಂಬ ಕೂಗೊಂದು ಕೇಳಿಬರುತ್ತದೆ. ಅಚ್ಚರಿಯ ಸಂಗತಿ ಎಂದರೆ ಈ ಸಜ್ಜನ ಮುಸಲ್ಮಾನರು ದೇಶವಿಭಜನೆಯಾದಾಗಲೂ ದನಿ ಎತ್ತಿರಲಿಲ್ಲ, ಹಿಂದೂಗಳ ಹತ್ಯೆ ಮಾಡಿದಾಗಲೂ ವಿರೋಧ ದಾಖಲಿಸಿರಲಿಲ್ಲ.

ನೆನಪು ಮಾಡಿಕೊಳ್ಳಿ, ಕರೊನಾ ಆರಂಭಿಕ ಹಂತದಲ್ಲಿ ನಾವೆಲ್ಲರೂ ಮನೆಯೊಳಗೆ ಕುಳಿತಿದ್ದರೆ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಮುಸಲ್ಮಾನರು ಮಸೀದಿಗಳಿಗೆ ತೆರಳುತ್ತಿದ್ದರು. ಇತರ ಜನರೆಲ್ಲರೂ ಆರೋಗ್ಯದ ದೃಷ್ಟಿಯಿಂದ ಇದನ್ನು ವಿರೋಧಿಸಿದಾಗಲೂ ಮತಕ್ಕಿಂತ ದೊಡ್ಡದು ತಮಗ್ಯಾವುದೂ ಇಲ್ಲ ಎಂದುಬಿಟ್ಟರು. ಬುದ್ಧೀಜಿವಿಗಳ ದೃಷ್ಟಿಯಲ್ಲಿ ಇರುವ ಈ ಸಜ್ಜನ ಮುಸಲ್ಮಾನರು ಆಗ ಬೀದಿಗೆ ಬಂದು ಈ ದುಷ್ಟರ ವಿರುದ್ಧ ಕೂಗು ಹಾಕಿದ್ದು ನೆನಪಿದೆಯೇನು? ಖಂಡಿತ ಇಲ್ಲ. ಸ್ವಾತಂತ್ರ$್ಯ ಬಂದಾಗಲೂ ಹಾಗೆಯೇ. ಹೆಚ್ಚು&ಕಡಿಮೆ ಭಾರತದ ಮುಸಲ್ಮಾನರೆಲ್ಲರೂ ಏಕರಸವಾಗಿ ಪಾಕಿಸ್ತಾನದ ಬೇಡಿಕೆ ಮಂಡಿಸಿದ್ದರು. ಕೊನೆಗೆ ಇದನ್ನು ಸೂಕ್ಷ$್ಮವಾಗಿ ಗಮನಿಸಿದ ಅಂಬೇಡ್ಕರರು ಜನಸಂಖ್ಯೆಯನ್ನು ಹಂಚಿಕೊಳ್ಳುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಆಮೇಲೇನು ಗೊತ್ತೇ? ದೇಶ ವಿಭಜನೆಯಾಯ್ತು. ಶೇಕಡ 9ರಷ್ಟು ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗದೇ ತಮ್ಮ ಆಸ್ತಿ&ಪಾಸ್ತಿಯನ್ನು ಉಳಿಸಿಕೊಂಡು ಇಲ್ಲಿಯೇ ಉಳಿದುಬಿಟ್ಟರು. ಪ್ರತ್ಯೇಕ ಪಾಕಿಸ್ತಾನ ಬೇಕೆಂದವರು ಇಲ್ಲಿಯೇ ಉಳಿದರೆಂದ ಮಾತ್ರಕ್ಕೆ ರಾತೋ&ರಾತ್ರಿ ಅವರ ಪಾಕಿಸ್ತಾನ ಪ್ರೇಮ ಭಾರತ ದೇಶಭಕ್ತಿಯಾಗಿ ಬದಲಾಯಿತೆಂಬುದನ್ನು ನಂಬುವುದಾದರೂ ಹೇಗೆ? ಹಾಗೆಂದು ಸ್ವತ@ ಅಂದಿನ ಗೃಹ ಸಚಿವರಾದ ಸರ್ದಾರ್​ ಪಟೇಲರು ಪ್ರಶ್ನಿಸಿದ್ದರು. ಈ ಕಾರಣದಿಂದಲೇ ಮುಸಲ್ಮಾನರ ತಪ್ಪುಗಳನ್ನು ಖಂಡಿಸದ ಇತರ ಮುಸಲ್ಮಾನರ ಬಗ್ಗೆ ಪ್ರತಿಯೊಬ್ಬ ಹಿಂದೂವಿಗೂ ಸಾತ್ವಿಕ ಅನುಮಾನವೊಂದು ಇದ್ದೇ ಇದೆ. ಅಲ್ಲದೇ ಮತ್ತೇನು? ಅಂದು ಶೇ.9ರಷ್ಟಿದ್ದ ಮಂದಿ ಇಂದು ದೇಶದ ಕಾಲುಭಾಗ ಜನಸಂಖ್ಯೆಯನ್ನು ಮೀರಿಬಿಟ್ಟಿದ್ದಾರೆ. ಅಧಿಕಾರವನ್ನು ಮತ್ತೆ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಭಾರತವನ್ನು ಬದಲಾಯಿಸುವ ತವಕದಲ್ಲಿದ್ದಾರೆ. ಹೀಗಿದ್ದಾಗ್ಯೂ ಸೆಕ್ಯುಲರ್​ ಪದದ ಅರ್ಥ ಬೋಧನೆ ಹಿಂದೂವಿಗೆ ಮಾತ್ರ ಎಂಬುದು ಎಷ್ಟು ಸರಿ?

ಮುಸಲ್ಮಾನರ ಈ ಪ್ರತ್ಯೇಕತೆಯ ಭಾವನೆಗಳನ್ನು ನೀರೆರೆದು ಪೋಷಿಸಿದ ಕೀರ್ತಿ ಕಾಂಗ್ರೆಸ್ಸಿಗೇ. ಅನೇಕ ಬಾರಿ ಆಕ್ರಮಣಕ್ಕೆ ಒಳಗಾಗಿ ಧ್ವಂಸಗೊಂಡಿದ್ದ ಸೋಮನಾಥ ಮಂದಿರವನ್ನು ಮರುನಿರ್ಮಿಸುವ ಪ್ರಯತ್ನ ಸ್ವಾತಂತ್ರಾ$್ಯನಂತರ ಹಿಂದೂಗಳು ಆರಂಭಿಸಿದಾಗ ಅಡ್ಡಗಾಲು ಹಾಕಿದ್ದು ತಥಾಕಥಿತ ಪಂಡಿತ ನೆಹರುರವರೇ. ವೋಟು ಪಡೆಯಲಿಕ್ಕಾಗಿ ಮುಸಲ್ಮಾನರನ್ನು ಬಡತನದಲ್ಲಿ, ಅನಕ್ಷರಸ್ಥರಾಗಿರಿಸುವ ಪ್ರಯತ್ನ ಮಾಡಿ ಅವರನ್ನು ಮುಖ್ಯವಾಹಿನಿಗೆ ಬರದಂತೆ ತಡೆದದ್ದೂ ಕಾಂಗ್ರೆಸ್ಸೇ. ಸ್ವಾತಂತ್ರ$್ಯಪೂರ್ವದಲ್ಲೇ ಇದನ್ನು ಗಮನಿಸಿದ ಹೆಡ್ಗೇವಾರರು ಸ್ವಾತಂತ್ರ್ಯಾನಂತರ ಹಿಂದೂಗಳ ರಕ್ಷಣೆಗೆಂದೇ ರಾಷ್ಟ್ರೀಯ ಸ್ವಯಂಸೇವಕ ಸಂ ನಿರ್ಮಿಸಿದ್ದು. ಅವರ ದೂರದೃಷ್ಟಿಯ ಲಾಭವನ್ನು ಈಗ ಹಿಂದೂಗಳು ಉಣ್ಣುತ್ತಿದ್ದಾರೆ. ಬಹುಶ@ ಸಂವೊಂದರ ಪ್ರಯತ್ನ ಇಷ್ಟು ತೀವ್ರವಾಗಿ ನಡೆಯದಿದ್ದಿದ್ದರೆ ಕಾಂಗ್ರೆಸ್ಸು ಜಾತಿ&ಜಾತಿಗಳಲ್ಲಿ ಹಿಂದೂಗಳನ್ನು ವಿಭಜಿಸಿರುತ್ತಿತ್ತು.

ರಾಮ ಮಂದಿರವನ್ನು ಪುನರ್​ಪಡೆಯುವ ಸಂಕಲ್ಪ ಹಿಂದೂಗಳು ಮಾಡಿ ಪ್ರಖರವಾದ ಹೋರಾಟ ಸಂಟಿಸಿದರಲ್ಲ, ಆಗ ಖುಷಿಯಾಗಿದ್ದು ಕಾಂಗ್ರೆಸ್ಸಿಗೇ. ತಮ್ಮ ರಕ್ಷಣೆಗೆ ಮುಸಲ್ಮಾನರು ಕಾಂಗ್ರೆಸ್ಸಿನ ಸಹಕಾರವನ್ನೇ ಬೇಡಬೇಕು. ಹಿಂದೂಗಳು ಜಾತಿ&ಜಾತಿಗಳಲ್ಲಿ ಒಡೆದು ಹೋಗಿರುವುದರಿಂದ ಅವರು ಒಟ್ಟಾಗಲಾರರು ಎಂದು ಭಾವಿಸಿದರು. ಆದರೆ ಯಾವಾಗ ರಾಮನ ಹೆಸರಿನಲ್ಲಿ ಜನರು ಜಾತಿ&ಪಂಥಗಳನ್ನು ಮರೆತು ಒಟ್ಟಾಗಿಬಿಟ್ಟರೋ ಹಿಂದೂ ಏಕತೆಯ ಈ ವ್ಯಾಪಕತೆ ಕಂಡು ಕಾಂಗ್ರೆಸ್ಸು ದಂಗಾಗಿಹೋಯ್ತು. ಈ ರೀತಿಯ ಸಮಸ್ಯೆಗಳನ್ನು ಶಾಶ್ವತವಾಗಿ ಇಲ್ಲವಾಗಿಸಬೇಕೆಂದೇ ಅವರು 1991ರಲ್ಲಿ "ಪ್ಲೇಸಸ್​ ಆ್​ ವರ್ಷಿಪ್​ ಆ್ಯಕ್ಟ್​' ಜಾರಿಗೆ ತಂದರು. ಅವರ ದೃಷ್ಟಿಯಲ್ಲಿ ಮಥುರಾ, ಕಾಶಿ, ತಾಜ್​ಮಹಲ್​, ಕುತುಬ್​ ಮಿನಾರ್​ಗಳಲ್ಲದೆ ದೇಶದಲ್ಲಿ ಮುಸಲ್ಮಾನರಿಂದ ಧ್ವಂಸಕ್ಕೊಳಗಾದ 36 ಸಾವಿರಕ್ಕೂ ಹೆಚ್ಚು ಮಂದಿರಗಳಿದ್ದವು. ಒಂದಾದ ಮೇಲೊಂದರಂತೆ ಹಿಂದೂ ಸಮಾಜ ಎಲ್ಲವನ್ನೂ ಪಡೆಯಲು ನಿಂತುಬಿಟ್ಟರೆ ಅದು ಜಾತಿ&ಜಾತಿಗಳನ್ನು ಒಗ್ಗೂಡಿಸಬಹುದೆಂಬ ಭಯ ಅವರಿಗಿತ್ತು. ಏಕೆಂದರೆ ಮುಸಲ್ಮಾನರು ಧ್ವಂಸಗೊಳಿಸಿದ್ದು ಬ್ರಾಹ್ಮಣರ ಮಂದಿರ ಮಾತ್ರವಲ್ಲ, ಅವರು ದಲಿತರ, ಯಾದವರ, ಒಕ್ಕಲಿಗರ ಮಂದಿರವನ್ನೂ ಕೆಡವಿದ್ದಾರೆ, ವೀರಶೈವ&ಲಿಂಗಾಯತರ ಪವಿತ್ರ ಸ್ಥಳಗಳನ್ನೂ ಆಪೋಶನ ತೆಗೆದುಕೊಂಡಿದ್ದಾರೆ. ಹೀಗಾಗಿಯೇ ಈ ಹೊಸ ಕಾನೂನಿನ ಮೂಲಕ ಕಾಂಗ್ರೆಸ್ಸು 1947, ಆಗಸ್ಟ್​ 15ಕ್ಕೆ ಯಾವ ಯಾವ ಪೂಜಾಗೃಹಗಳ ಸ್ವರೂಪ ಹೇಗಿತ್ತೋ ಹಾಗೆಯೇ ಉಳಿಸಿಕೊಳ್ಳಬೇಕು ಎಂದಿತು. ನ್ಯಾಯಾಲಯದಲ್ಲಿ ಈ ಕುರಿತಂತೆ ನಡೆಯುತ್ತಿರುವ ಹೋರಾಟಗಳನ್ನೂ ಈ ಕಾನೂನಿನಡಿಯಲ್ಲಿ ಸ್ಥಗಿತಗೊಳಿಸಬೇಕು ಎಂದೂ ಹೇಳಿತು. ಆದರೆ ಈ ನಿಯಮ ಐತಿಹಾಸಿಕ ಸ್ಮಾರಕಗಳಿಗೆ ಅನ್ವಯವಾಗುವುದಿಲ್ಲ ಎಂದು ಸೇರಿಸಿತು. ಕಾನೂನು ತಂದ ಹೊತ್ತಲ್ಲಿ ಅವರು ಗಮನಿಸದೇ ಇದ್ದ ಸಂಗತಿಯೆಂದರೆ ಪುರಾತತ್ತ$$$್ವ ಇಲಾಖೆಗೆ ಸಂಬಂಧಪಟ್ಟ ಕಾನೂನಿನ ಪ್ರಕಾರ ನೂರು ವರ್ಷಗಳಿಗಿಂತಲೂ ಹಳೆಯದಾದ ಕೆತ್ತನೆಗಳು, ಗುಹೆಗಳು, ಶಾಸನಗಳು ಇವುಗಳನ್ನು ಪುರಾತತ್ತ$$$್ವ ಇಲಾಖೆಗೆ ಸಂಬಂಧಪಟ್ಟಿದ್ದು ಎಂದು ೂಷಿಸಬೇಕು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕಾಶಿಯಾಗಲೀ, ಮಥುರೆಯಾಗಲೀ ಅಲ್ಲಿರುವ ಕಟ್ಟಡಗಳ ಹಳೆತನದ ಆಧಾರದ ಮೇಲೆ ಅವು ಪುರಾತತ್ತ$$$್ವ ಇಲಾಖೆಗೆ ಸೇರಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಕಾಶಿಯಲ್ಲಂತೂ ಮಸೀದಿಯ ಗೋಡೆಯ ಮೇಲೆಲ್ಲ ಇರುವ ಹಿಂದೂ ಸಂಕೇತಗಳು ಈ ಮಸೀದಿಯನ್ನು ಮರಳಿ ಹಿಂದೂಧರ್ಮಕ್ಕೆ ಪಡೆದುಕೊಳ್ಳಲು ಬೆಟ್ಟದಷ್ಟು ಪುರಾವೆಯಾಯ್ತು. ಈ ಆಧಾರದ ಮೇಲೆಯೇ 1991ರ ಈ ಕಾನೂನನ್ನು ದಾಟಿಕೊಂಡು ಹೋಗುವುದು ಸಾಧ್ಯ.

ಅಚ್ಚರಿಯೇನು ಗೊತ್ತೇ? ಮುಸಲ್ಮಾನರು ಕಾಶಿಯ ವಿರುದ್ಧ ಹೋರಾಡುತ್ತಿರುವುದಕ್ಕೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಕಾಂಗ್ರೆಸ್​ ತಂದ ಈ ಕಾನೂನನ್ನೇ. ತಮಗೆ ಬೇಕಾದಾಗ, ತಮಗೆ ಅಗತ್ಯವಾಗಿರುವ ವಸ್ತುಗಳನ್ನು ಬಳಸಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ಸೆಕ್ಯುಲರ್​ ಚಿಂತನೆಯ ಪರವುಳ್ಳ ಹೋರಾಟಗಾರರು ಈಗೊಮ್ಮೆ ಮುಂದೆ ಬರಬೇಕಲ್ಲವೇ?

ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ಈ ಮಂದಿರಗಳನ್ನು ಒಡೆದು ಮಸೀದಿ ಕಟ್ಟಿರುವುದು ನಿಜವೆಂಬುದಕ್ಕೆ ಇಷ್ಟೆಲ್ಲ ಪುರಾವೆಗಳಿದ್ದಾಗ್ಯೂ ಅದನ್ನು ಬಿಟ್ಟುಕೊಡದೆ ಸಾಮಾಜಿಕ ಸ್ವಾಸ್ಥ$್ಯ ಹಾಳುಗೆಡವುತ್ತಿರುವ ಮಂದಿಗೆ ಬುದ್ಧಿ ಹೇಳಬೇಕಲ್ಲವೇ? ಸಜ್ಜನ ಮುಸಲ್ಮಾನರು ಒಮ್ಮೆ ಬೀದಿಗೆ ಬಂದು ತಮ್ಮ ಜನಾಂಗದ ಮಂದಿ ಮಾಡುತ್ತಿರುವ ಈ ಕೆಲಸ ತಪ್ಪೆಂದು ೂಷಿಸಬೇಕಲ್ಲವೇ? ಏಕೆಂದರೆ ಇದೇ ಸಜ್ಜನ ಮುಸಲ್ಮಾನರು ಸಿಐಎ ವಿರುದ್ಧದ ಹೋರಾಟಕ್ಕೆ ಬೀದಿಗೆ ಬಂದಿದ್ದರು. ಈ ಕಾನೂನಿನಿಂದ ದೇಶದ ಯಾವ ಮುಸಲ್ಮಾನನಿಗೂ ತೊಂದರೆ ಇಲ್ಲವೆಂದು ಗೊತ್ತಿದ್ದಾಗಲೂ ಪಕ್ಕದ ರಾಷ್ಟ್ರದಲ್ಲಿರುವ ಹಿಂದೂಗಳಿಗೆ ತೊಂದರೆಯಾಗಲೆಂದೇ ಪ್ರತಿಭಟನೆಗಿಳಿದಿದ್ದರು. ಆದರೀಗ ಮಾತ್ರ ಮಹಾಮೌನಕ್ಕೆ ಶರಣಾಗಿದ್ದಾರೆ. ಆದರೆ ಇವರೆಲ್ಲರಿಗೂ ಗೊತ್ತಿರದ ಒಂದೇ ಒಂದು ಸಂಗತಿ ಎಂದರೆ, ಹಿಂದೂ ಈಗ ಜಾಗೃತವಾಗಿದ್ದಾನೆ. ಮತ್ತು ಅವನ ಈ ಜಾಗೃತಿಗೆ ಯಾವುದೋ ಒಂದು ಸಂಟನೆ ಕಾರಣವಲ್ಲ, ಯಾರದ್ದೋ ಭಾಷಣವೂ ಕಾರಣವಲ್ಲ, ನೂರಾರು ವರ್ಷಗಳ ಆಕ್ರಮಣದಿಂದ ರೋಸಿಹೋದ ಅವನು ಈಗ ಸಿಡಿದು ನಿಂತಿದ್ದಾನೆ. ಅವನನ್ನು ತಡೆಯುವುದು ಮೊದಲಿನಷ್ಟು ಸುಲಭವಿಲ್ಲ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net