

| ಎಸ್.ಎಸ್. ನಾಯಕ್, ಮಂಗಳೂರು
ಪ್ರತಿಯೊಬ್ಬರೂ ತಮ್ಮ ವಾರ್ಷಿಕ ಆದಾಯದ ಮೇಲೆ ತೆರಿಗೆ ಕಟ್ಟಲೇಬೇಕು. ಈ ತೆರಿಗೆಯನ್ನು ಪಾವತಿಸುವ ಮಾರ್ಗವೆಂದರೆ ಇನ್ಕಮ್ ಟ್ಯಾಕ್ಸ್ ರಿಟರ್ನ್. ಸಾಮಾನ್ಯವಾಗಿ ಈ ತೆರಿಗೆ ರಿಟರ್ನ್ ಅನ್ನು ಪ್ರತೀ ವಿತ್ತೀಯ ವರ್ಷ ಆದ ನಂತರ ಮುಂದಿನ ವರ್ಷದ ಜುಲೈ 31ರೊಳಗೆ ಪಾವತಿಸಬೇಕು. ಮೂಲ ಗಡುವನ್ನು ತಪ್ಪಿಸಿಕೊಂಡ ತೆರಿಗೆ ಪಾವತಿದಾರರು ತಡವಾದ ರಿಟರ್ನ್ ಅನ್ನು ಸೆಕ್ಷನ್ 139(4) ಪ್ರಕಾರ ಸಲ್ಲಿಸುತ್ತಾರೆ. ಇದನ್ನು ವಿಳಂಬಿತ ರಿಟರ್ನ್ (Belated return) ಎಂದು ಕರೆಯುತ್ತಾರೆ ಹಾಗೂ ಡಿಸೆಂಬರ್ 31ರ ತನಕ ಇದಕ್ಕೆ ಕಾಲಾವಕಾಶವಿದೆ. ಈ ಮೂಲ ರಿಟರ್ನ್ನಲ್ಲಿ ಯಾವುದೇ ಲೋಪ ಅಥವಾ ದೋಷ ಕಂಡುಬಂದಲ್ಲಿ ತೆರಿಗೆದಾರನು ಆದಾಯದ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಲು ಸೆಕ್ಷನ್ 139(5) ಅನುಮತಿಸುತ್ತದೆ. ಇದಕ್ಕೆ ಪರಿಷ್ಕೃತ ರಿಟರ್ನ್ (Revised Return) ಎಂದು ಹೆಸರು. ಪರಿಷ್ಕೃತ ರಿಟರ್ನ್ ಅನ್ನು ಮೌಲ್ಯಮಾಪನ ವರ್ಷದ ಅಂತ್ಯದವರೆಗೆ ಅಥವಾ ಮೌಲ್ಯಮಾಪನ ಪೂರ್ಣಗೊಳಿಸುವ ಮೊದಲು ಸಲ್ಲಿಸಬಹುದು. ಇದರರ್ಥ ತೆರಿಗೆ ಪಾವತಿದಾರರು ಆರ್ಥಿಕ ವರ್ಷದ ಅಂತ್ಯದಿಂದ ಒಂದು ವರ್ಷದವರೆಗೆ ಪರಿಷ್ಕೃತ ರಿಟರ್ನ್ ಸಲ್ಲಿಸಬಹುದು. ಹಣಕಾಸು ಕಾಯ್ದೆ -2022 ಆದಾಯದ ರಿಟರ್ನ್ ಅನ್ನು ಸಲ್ಲಿಸುವುದಕ್ಕೆ ಮೌಲ್ಯಮಾಪಕರಿಗೆ ದೀರ್ಘಾವಧಿಯನ್ನು ಅನುಮತಿಸಲು ನವೀಕರಿಸಿದ ರಿಟರ್ನ್ ಪರಿಕಲ್ಪನೆ ಪರಿಚಯಿಸಿದೆ. ಇದರ ಪ್ರಕಾರ ಸಂಬಂಧಿತ ಮೌಲ್ಯಮಾಪನ (Assessment) ವರ್ಷದ ಅಂತ್ಯದಿಂದ 24 ತಿಂಗಳೊಳಗೆ ನವೀಕರಿಸಿದ ರಿಟರ್ನ್ ಸಲ್ಲಿಸಬಹುದು. ಆದರೆ, ಇದಕ್ಕೆ ಕೆಲವು ಷರತ್ತುಗಳು ಅನ್ವಯವಾಗುತ್ತವೆ. ತಡವಾದ ರಿಟರ್ನ್ ಅಥವಾ ಆದಾಯದ ಪರಿಷ್ಕೃತ ರಿಟರ್ನ್ ಸಲ್ಲಿಸಲು ನಿಗದಿಪಡಿಸಿದ ಸಮಯ ಮುಕ್ತಾಯದ ನಂತರವೂ ನವೀಕರಿಸಿದ ರಿಟರ್ನ್ ಸಲ್ಲಿಸಬಹುದು. ಉದಾಹರಣೆಗೆ 2022-23ರ ಆರ್ಥಿಕ ವರ್ಷದಲ್ಲಿ ಒಬ್ಬ ವ್ಯಕ್ತಿಯು 2020-21 ಮತ್ತು 2021-22ರ ಮೌಲ್ಯಮಾಪನ ವರ್ಷಗಳಿಗೂ ನವೀಕರಿಸಿದ ರಿಟರ್ನ್ ಸಲ್ಲಿಸಬಹುದು.
ಎಲ್ಲ ತೆರಿಗೆದಾರರು ನವೀಕರಿಸಿದ ರಿಟರ್ನ್ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗಿದ್ದರೂ, ಈ ಕೆಳಗಿನ ಸಂದರ್ಭಗಳಲ್ಲಿ ರಿಟರ್ನ್ ಸಲ್ಲಿಸಲಾಗುವುದಿಲ್ಲ.
ಐಟಿಆರ್-ಯು ಯಾರು ಫೈಲ್ ಮಾಡಬಹುದು?: ಆದಾಯದ ಮೂಲ ರಿಟರ್ನ್, ತಡವಾದ ರಿಟರ್ನ್ ಅಥವಾ ಪರಿಷ್ಕೃತ ರಿಟರ್ನ್ ದಾಖಲಿಸುವಾಗ ಯಾವುದೇ ತಪು್ಪ ಮಾಹಿತಿ ಸೇರಿಕೊಂಡಿದ್ದರೆ ಅಥವಾ ಕೆಲವು ಆದಾಯದ ವಿವರಗಳನ್ನು ಬಿಟ್ಟುಹೋಗಿದ್ದರೆ, ಅಂಥವರು ನವೀಕರಿಸಿದ ರಿಟರ್ನ್ ಸಲ್ಲಿಸಬಹುದು. ಪ್ರತ್ಯೇಕ ನಮೂನೆ ಇದೆಯೇ?: ನವೀಕರಿಸಿದ ರಿಟರ್ನ್ ಸಲ್ಲಿಸಲು ಯಾವುದೇ ಪ್ರತ್ಯೇಕ ಐಟಿಆರ್ ಫಾಮರ್್ಗಳನ್ನು ಸೂಚಿಸಲಾಗಿಲ್ಲ. ತೆರಿಗೆದಾರರು ಆಯಾ ಮೌಲ್ಯಮಾಪನ ವರ್ಷಕ್ಕೆ ನವೀಕರಿಸಿದ ರಿಟರ್ನ್ ಅನ್ನು ಒದಗಿಸಬೇಕು. ಅಂತಹ ಐಟಿಆರ್ ಫಾಮ್ರ್ ಅನ್ನು ಹೊಸದಾಗಿ ಸೂಚಿಸಲಾದ ಐಟಿಆರ್-ಯು ಜತೆಗೆ ಸಲ್ಲಿಸಬೇಕು.
ನವೀಕರಿಸಿದ ರಿಟರ್ನ್ ಸಲ್ಲಿಸಲು ಬಯಸುವ ವ್ಯಕ್ತಿಯ ಮೇಲೆ ಯಾವುದೇ ದಂಡ ಅಥವಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದಾಗ್ಯೂ, ಅವರು ಸೆಕ್ಷನ್ 140ಬಿ ಪ್ರಕಾರ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ. ಹೆಚ್ಚುವರಿ ತೆರಿಗೆಯು ನವೀಕರಿಸಿದ ರಿಟರ್ನ್ನ ಫೈಲಿಂಗ್ನಲ್ಲಿ ವ್ಯಕ್ತಿಯು ಪಾವತಿಸಬೇಕಾದ ಒಟ್ಟು ತೆರಿಗೆ ಮತ್ತು ಬಡ್ಡಿಯ ಶೇ.25ಕ್ಕೆ ಸಮನಾಗಿರುತ್ತದೆ, ಅಲ್ಲಿ ಅಂತಹ ರಿಟರ್ನ್ ಅನ್ನು ತಡವಾಗಿ ಅಥವಾ ಪರಿಷ್ಕೃತ ರಿಟರ್ನ್ ಸಲ್ಲಿಸುವ ದಿನಾಂಕದ ಮುಕ್ತಾಯದ ನಂತರ ಮತ್ತು ಮೌಲ್ಯಮಾಪನ ವರ್ಷದ ಅಂತ್ಯದಿಂದ 12 ತಿಂಗಳ ಅವಧಿ ಪೂರ್ಣಗೊಳ್ಳುವ ಮೊದಲು ಒದಗಿಸಬೇಕು. ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ 12 ತಿಂಗಳ ಅವಧಿ ಮುಗಿದ ನಂತರ ನವೀಕರಿಸಿದ ರಿಟರ್ನ್ ಅನ್ನು ಒದಗಿಸಿದ್ದೇ ಆದರೆ ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ 24 ತಿಂಗಳ ಅವಧಿಯನ್ನು ಪೂರ್ಣಗೊಳಿಸುವ ಮೊದಲು, ಪಾವತಿಸಬೇಕಾದ ಹೆಚ್ಚುವರಿ ತೆರಿಗೆಯು ತೆರಿಗೆ ಮತ್ತು ಬಡ್ಡಿಯ ಒಟ್ಟು ಮೊತ್ತದ ಶೇ. 50 ಆಗಿರುತ್ತದೆ. ಇದಲ್ಲದೆ, ಅಂತಹ ವ್ಯಕ್ತಿಯು ನವೀಕರಿಸಿದ ರಿಟರ್ನ್ ಅನ್ನು ಒದಗಿಸುವ ಆ ಮೌಲ್ಯಮಾಪನ ವರ್ಷಕ್ಕೆ ಆದಾಯದ ರಿಟರ್ನ್ ಅನ್ನು ಒದಗಿಸದಿದ್ದಲ್ಲಿ ಸೆಕ್ಷನ್ 234 ಎಫ್ ಅಡಿ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಅಪ್ಡೇಟೆಡ್ ರಿಟರ್ನ್ ಅಥವಾ ನವೀಕರಿಸಿದ ರಿಟರ್ನ್ ಯೋಜನೆ ಒಂದು ರೀತಿಯಲ್ಲಿ ಐಟಿಆರ್ ಫೈಲ್ ಮಾಡದವರಿಗೆ ಉತ್ತಮ ಯೋಜನೆಯಾಗಿದೆ.
(ಲೇಖಕರು- ಲೆಕ್ಕ ಪರಿಶೋಧಕರು)