

ಕಳೆದ ಏಳು ದಶಕಗಳಲ್ಲಿ ಜಮ್ಮು&ಕಾಶ್ಮೀರ ಭಯೋತ್ಪಾದನೆ, ಹಿಂಸೆ, ರಕ್ತಪಾತ, ಅಸ್ಥಿರತೆಯನ್ನು ಕಂಡು ರೋಸಿ ಹೋಗಿದೆ. ಆ ರಾಜ್ಯಕ್ಕಿದ್ದ "ವಿಶೇಷ ಸ್ಥಾನಮಾನ'ವೇ ಕಣಿವೆ ಪ್ರದೇಶದ ಸಮಸ್ಯೆಯನ್ನು, ಪ್ರತ್ಯೇಕತೆಯನ್ನು ಹೆಚ್ಚಿಸಿತ್ತು. ಆದರೆ, 370ನೇ ವಿಧಿಯನ್ನು ಹಿಂಪಡೆ ಯುವುದು ಸುಲಭವಾಗಿರಲಿಲ್ಲ. ಹಾಗಾಗಿ, ಈ ಹಿಂದಿನ ಕೇಂದ್ರ ಸರ್ಕಾರಗಳು ಹಳೆಯ ನೀತಿಯನ್ನೇ ಮುಂದುವರಿಸಿಕೊಂಡು ಬಂದವು.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದಿಟ್ಟ ರ್ನಿಣಯ ಕೈಗೊಂಡು ಜಮ್ಮು&ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಹಿಂಪಡೆಯಲಾಯಿತು. ಇದೆಲ್ಲವೂ ಈಗ ಇತಿಹಾಸ. ಆದರೆ, ಇಂಥ ಸೂಕ್ಷ$್ಮ ವಿಷಯಗಳನ್ನು ಇರಿಸಿಕೊಂಡು ಮತ್ತೆ ವಿವಾದ ಸೃಷ್ಟಿಸಲು ಕೆಲ ನಾಯಕರು ಯತ್ನಿಸುತ್ತಿರುವುದು ಖಂಡನೀಯ. ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ "ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ ಜಮ್ಮು& ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಪರಿಶೀಲನೆ ನಡೆಸಲಾಗುವುದು' ಎಂದಿದ್ದಾರೆ.
ಇಂಥ ಹೇಳಿಕೆ ಈ ಹೊತ್ತಲ್ಲಿ ಬೇಕಿತ್ತಾ? ಕಣಿವೆ ರಾಜ್ಯವನ್ನು ಅಭಿವೃದ್ಧಿಯ ಮುಂಚೂಣಿಗೆ ತರಲು ಈಗ ಶ್ರಮಿಸಬೇಕಿದೆಯೇ ಹೊರತು ವಿವಾದ, ಅಶಾಂತಿ ಸೃಷ್ಟಿಸುವುದಲ್ಲ ಎಂಬುದನ್ನು ಎಲ್ಲ ನಾಯಕರೂ ಅರ್ಥಮಾಡಿಕೊಳ್ಳಬೇಕು.
> ವಿಕಾಸ್ ಬೆಂಗಳೂರು