

ನಾನು 70 ವರ್ಷದ ನಿವೃತ್ತ ಕೋ- ಆಪರೇಟೀವ್ ಬ್ಯಾಂಕ್ ಅಧಿಕಾರಿ. ನನಗೆ ಇಬ್ಬರು ಗಂಡು ಮಕ್ಕಳಿದ್ದು ಅವರ ಅಮ್ಮನ ಜತೆ ಸಿಟಿಯಲ್ಲಿದ್ದಾರೆ. ನಾನು ಮಾತ್ರ ಹಳ್ಳಿಯಲ್ಲಿದ್ದೇನೆ. ನಾನು ಆರಂಭದಿಂದಲೂ ಜೂಜಾಡಿ ಸರ್ವಸ್ವವನ್ನೂ ಕಳೆದುಕೊಂಡೆ. ಆದರೂ ನಿವೃತ್ತನಾಗುವತನಕ ಹೆಂಡತಿ, ಮಕ್ಕಳಿಗೆ ಊಟಕ್ಕೆ ಕೊರತೆ ಮಾಡಲಿಲ್ಲ. ವಿದ್ಯಾಭ್ಯಾಸಕ್ಕೂ ತೊಂದರೆಯಾಗದಂತೆ ನೋಡಿಕೊಂಡೆ. ಈಗ ಮಕ್ಕಳು ವ್ಯಾಪಾರವನ್ನು ಮಾಡುತ್ತಾ ತಮ್ಮ ಕಾಲಮೇಲೆ ತಾವು ನಿಂತಿದ್ದಾರೆ. ತಾಯಿಯನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ನನಗೆ ಪೆನ್ಷನ್ ಇಲ್ಲ. ಆದ್ದರಿಂದ ದುಡಿಯಲೇಬೇಕು. ಅದಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಬದುಕುತ್ತಿದ್ದೇನೆ. ನಾನು ಆಗ ಮಾಡಿದ ತಪ್ಪಿಗೆ ಈಗ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ. ಮಕ್ಕಳು, ಹೆಂಡತಿ ಮನೆಗೆ ಸೇರಿಸುವುದಿಲ್ಲ. ಹಬ್ಬದ ದಿನಗಳಲ್ಲಿ ಒಮ್ಮೆ ಹೋಗಿಬರುತ್ತೇನೆ. ಅವರೊಂದಿಗೆ ಹೆಚ್ಚು ದಿನವಿರಲು ಅವರು ಅವಕಾಶ ಕೊಡುವುದಿಲ್ಲ. ಹೆಂಡತಿ ನನ್ನ ಜತೆ ಮಾತಾಡಿ 12 ವರ್ಷಗಳಾದವು. ನಾನು ಅಪರಾಧ ಮಾಡಿದ್ದೇನೆ. ಈಗ ಕಾಲ ಮಿಂಚಿಹೋಗಿದೆ ಮತ್ತು ಮನವರಿಕೆಯಾಗಿದೆ. ಆದರೆ ಅವರು ನನ್ನನ್ನು ನಂಬಲು ಮತ್ತು ಗೌರವಿಸಲು ತಯಾರಿಲ್ಲ. ನನಗೂ ವಯಸ್ಸಾಗುತ್ತಿದೆ. ಮುಂದೆ ಏನು ಮಾಡುವುದು ಎನ್ನುವ ಚಿಂತೆ ಕಾಡುತ್ತಿದೆ. ದಯವಿಟ್ಟು ಇದಕ್ಕೊಂದು ಪರಿಹಾರ ತಿಳಿಸಿ.
(ಶಾಂತಾ ನಾಗರಾಜ್ ಅವರಿಂದ ಉಚಿತ ಸಲಹೆಗಾಗಿ (ಸಂಜೆ 6ರಿಂದ8) ಈ ಕೆಳಗಿನ ವಿಳಾಸದಲ್ಲಿ ನೇರವಾಗಿ ಭೇಟಿ ಮಾಡಬಹುದು. ಮೊದಲೇ ಅಪಾಯಿಂಟ್ವೆುಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಪ್ರತಿ ಸೋಮವಾರ: ಅರುಣಚೇತನ, ಕ್ಲೂನಿ ಕಾನ್ವೆಂಟ್ ಎದುರು, ಎಂ.ಇ.ಎಸ್ ಕಾಲೇಜ್ ಹಿಂಭಾಗ, ಮಲ್ಲೇಶ್ವರ, ಬೆಂಗಳೂರು. ಪ್ರತಿ ತಿಂಗಳ ಕೊನೆಯ ಗುರುವಾರ: ನಚಿಕೇತ ಮನೋವಿಕಾಸ ಕೇಂದ್ರ, 14ನೇ ಕ್ರಾಸ್, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು ಪತ್ರ ಬರೆಯುವವರು ವಿಜಯವಾಣಿ ಲಲಿತಾ ಪುರವಣಿಗೆ ಬರೆಯಬೇಕು.)