

ಒಂದು ಸಾವಿರ ವರ್ಷದಷ್ಟು ಹಿಂದೆಯೇ ಸಮಾಜದಲ್ಲಿನ ಅಜ್ಞಾನ ತೊಡೆದುಹಾಕಲು ಬಯಸಿ ಸಮಾನತೆಯ ವಿಶಾಲ ಕಲ್ಪನೆಯ ತಳಹದಿ ಮೇಲೆ ಕ್ರಾಂತಿಕಾರಿ ಹೆಜ್ಜೆ ಇರಿಸಿದ ಶ್ರೀ ರಾಮಾನುಜಾಚಾರ್ಯರ ತತ್ವ ಬೋಧನೆಗಳು ಇಂದಿಗೂ ಪ್ರಸ್ತುತ. ಮೇ 5ರಂದು ಅವರ 1005ನೇ ಜಯಂತಿ. ಈ ಹಿನ್ನೆಲೆಯಲ್ಲಿ ಅವರ ಬದುಕು-ಬೋಧನೆ-ಜಯಂತ್ಯುತ್ಸವದ ಮಾಹಿತಿ ಇಲ್ಲಿದೆ.
| ಮೇಲುಕೋಟೆ ಸಂತಾನಂ ಆಚಾರ್ಯ ರಾಮಾನುಜರು ಸಾವಿರ ವರ್ಷಗಳ ಹಿಂದೆ ಹಾಕಿಕೊಟ್ಟ ಜಾತ್ಯತಿತ ಸಾಮರಸ್ಯದ ಬದುಕು, ಭಕ್ತಿಮಾರ್ಗದ ಮೆಲುಕು ಹಾಗೂ ದೇವಾಲಯಗಳನ್ನು ಸಮಾಜಮುಖಿಯನ್ನಾಗಿ ಮಾಡಿ ವ್ಯಕ್ತಿನಿಷ್ಠೆಯ ಬದಲಿಗೆ ಸಮಾಜಾಭಿವೃದ್ಧಿಗೆ ಕೇಂದ್ರೀಕರಿಸಿದ ಚಿಂತನೆಗಳು ಇಂದಿಗೂ ಪ್ರಸ್ತುತವೆನಿಸಿವೆ. ರಾಮಾನುಜರ ವಿಚಾರಧಾರೆ ಕೇವಲ ಒಂದು ವರ್ಗಕ್ಕೆ ಸೀಮಿತವಾಗದೇ ಇಡೀ ಸಮಾಜದ ಹಿತಕ್ಕೆ ಪೂರಕವಾಗಿತ್ತು. ಹನ್ನೊಂದನೇ ಶತಮಾನದಲ್ಲಿ ತೀವ್ರವಾದ ರಾಜಕೀಯ ಮತ್ತು ಧರ್ಮದಲ್ಲಿ ಏರುಪೇರುಗಳಾಗಿ ಜನಸಾಮಾನ್ಯರಿಗೆ ಭಾರತೀಯ ಸನಾತನ ಸಂಸತಿ ಆಚಾರ ವಿಚಾರಗಳ ಮತ್ತು ಸಂಸ್ಕಾರಗಳ ಅರಿವು ಬೇಕಾಗಿತ್ತು. ಈ ವೇಳೆ ಉದಯಿಸಿದ ರಾಮಾನುಜ ಎಂಬ ಸೂರ್ಯ ಆಧ್ಯಾತ್ಮಿಕ ಮತ್ತು ಭಕ್ತಿಸುಧೆಯ ಮಹತ್ವವನ್ನು ಸಾಮಾಜಿಕ ಸಾಮರಸ್ಯದ ಚಿಂತನೆಯೊಂದಿಗೆ ಸಾರುವ ಮೂಲಕ ನವಸಮಾಜದ ಉದಯಕ್ಕೆ ಕಾರಣವಾದರು. ಭಗವಂತನ ದೃಷ್ಟಿಯಲ್ಲಿ ಕಣದಿಂದ ಬ್ರಹ್ಮನವರೆಗೆ ಎಲ್ಲರೂ ಸಮಾನರು ಮತ್ತು ಭಗವಂತನ ಕೃಪೆಗೆ ಅರ್ಹರು ಎಂದ ರಾಮಾನುಜರು ಅಂದಿನ ಬಿಗಿಯಾದ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಹರಿಜನರಿಗೆ ದೇವಾಲಯ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿ ಪ್ರಮುಖ ದೇವಾಲಯಗಳಲ್ಲಿ ಸೇವೆಗೆ ಅವಕಾಶ ನೀಡಿದರು. ಅವರನ್ನು ತಿರುಕುಲತ್ತಾರ್ (ಹರಿಕುಲದವರು) ಎಂದು ಕರೆದು ಗೌರವಿಸಿದರು. ಹೀಗೆ ಸಮಾಜದ ಹಿತಕ್ಕೆ ಸಮಾನತೆ ಮುಖ್ಯ ಎಂದು ಸಾರಿದ ಪ್ರಮುಖ ಆಚಾರ್ಯರು ರಾಮಾನುಜರು.
ರಾಮಾನುಜರ ದಿವ್ಯೇತ್ರಗಳು
ಆಚಾರ್ಯರು ಅವತಾರ ಎತ್ತಿದ ತಮಿಳುನಾಡಿನ ಶ್ರೀಪೆರಂಬೂದೂರು, ಅಭಿಮಾನ ಸ್ಥಳ ತಿರುಮಲೆ ತಿರುಪತಿ, ಕಾರ್ಯಸ್ಥಳ ಶ್ರೀರಂಗಂ ಮತ್ತು ಕರ್ನಾಟಕದ ಕರ್ಮಭೂಮಿ ಮೇಲುಕೋಟೆಯಲ್ಲಿರುವ ರಾಮಾನುಜರ ದಿವ್ಯಮೂರ್ತಿಗಳಲ್ಲಿ ವಿಶೇಷ ಜೀವಕಳೆಯಿದೆ. ರಾಮಾನುಜರೇ ಅನುಗ್ರಹಿಸಿರುವ ದಿವ್ಯ ಸ್ವರೂಪದಲ್ಲಿವೆ ಎಂಬ ಪ್ರತಿತಿ ಶ್ರೀವೈಷ್ಣವರಲ್ಲಿದೆ. ಈ ಮೂರ್ತಿಗಳು ಭಕ್ತರೊಂದಿಗೆ ಮಾನಸಿಕ ಸಂಭಾಷಣೆ ನಡೆಸಿ ಅನುಗ್ರಹ ಮಾಡುತ್ತವೆ ಎಂಬ ನಂಬಿಕೆಯಿದೆ.
ಜೀವನ ಚಿತ್ರಣ
ತಮಿಳುನಾಡಿನ ಶ್ರೀಪೆರಂಬೂದೂರಿನಲ್ಲಿ ಪಿಂಗಳನಾಮ ಸಂವತ್ಸರ ಆರಿದ್ರಾ ನಕ್ಷತ್ರದಂದು ಕ್ರಿ.ಶ. 1017ರಲ್ಲಿ ರಾಮಾನುಜರು ಜನಿಸಿದರು. ವಿದ್ಯಾಭ್ಯಾಸದ ನಂತರ ರಂಗನಾಥನ ಸೇವೆಯಲ್ಲಿ ನಿರತರಾಗಿ ವಿವಾಹವಾದ ಸ್ವಲ್ಪ ಕಾಲದಲ್ಲಿಯೇ ಸಾಂಸಾರಿಕ ಬಂಧನದಿಂದ ಹೊರಬಂದು ಕಂಚಿವರದರಾಜನ ಸನ್ನಿಧಿಯಲ್ಲಿ ಸನ್ಯಾಸ ಸ್ವೀಕರಿಸಿ ಯತಿರಾಜರಾದರು. ಕರ್ನಾಟಕದಲ್ಲಿ ಪಂಚನಾರಾಯಣಸ್ವಾಮಿ ದೇವಸ್ಥಾನಗಳು ಸೇರಿದಂತೆ ಮೇಲುಕೋಟೆ, ತಿರುಪತಿ, ಕಂಚಿ, ಶ್ರೀರಂಗಂ ದೇಗುಲಗಳನ್ನು ಜೀಣೋರ್ದ್ಧಾರಗೊಳಿಸಿದರು. ಭಾರತದಾದ್ಯಂತ 108 ದಿವ್ಯೇತ್ರಗಳಲ್ಲಿ ಭಗವಂತನ ಸಾನ್ನಿಧ್ಯ ಸಾಕರಿಸಿದರು. ಜೀವನದುದ್ದಕ್ಕೂ ಸಾಮಾಜಿಕ ಸಾಮರಸ್ಯಕ್ಕೆ ಚಿಂತಿಸಿ ಅದರಂತೆ ಬದುಕಿದರು.
ಕರ್ಮಭೂಮಿಯ ಅಭಿವೃದ್ಧಿ
ಪ್ರಮುಖ ಸೌಲಭ್ಯಗಳಿಂದ ವಂಚಿತ ವಾಗಿರುವ ಮೇಲುಕೋಟೆ ಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ ಎಂದು ವೈರಮುಡಿ ಉತ್ಸವ ದರ್ಶನಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ೂಷಿಸಿ ದ್ದರು. ಅದರಂತೆ, ಜಿಲ್ಲಾಧಿಕಾರಿ ಆಸಕ್ತಿ ವಹಿಸಿ ಭಾರತದ ನಾಲ್ಕು ಪ್ರಮುಖ ಶ್ರೀವೈಷ್ಣವ ಕ್ಷೇತ್ರಗಳಲ್ಲಿ ಒಂದಾದ ಮೇಲುಕೋಟೆಯ ಅಭಿವೃದ್ಧಿಗೆ ನೀಲಿನೆ ತಯಾರಿಸಿ ಅನುಮೋದನೆ ಪಡೆಯಬೇಕಿದೆ.
ಜಯಂತಿ ಕಾರ್ಯಕ್ರಮ
ರಾಮಾನುಜರ 1005ನೇ ಜಯಂತಿ ಅವರ ಕರ್ಮಭೂಮಿಯಾದ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಮೇ 4ರಂದು ಮಹಾರಥೋತ್ಸವ ರಾತ್ರಿ 4ನೇ ಸ್ಥಾನಿಕರ ಭಿಾಕೈಂಕರ್ಯ ನಡೆದಿದೆ. ಮೇ 5ರಂದು ರಾಮಾನುಜರ ತಿರುನಕ್ಷತ್ರ, ಬೆಳಗ್ಗೆ 8ಕ್ಕೆ ವಾಹನೋತ್ಸವ, 10ಕ್ಕೆ ಮಹಾಭಿಷೇಕ ಆರಂಭ ದ್ವಾದಶಾರಾಧನೆ ನಡೆಯಲಿವೆ. ಮಧ್ಯಾಹ್ನ ಶಾತ್ತುಮೊರೈ. ಸಂಜೆ 6ಕ್ಕೆ ರಾಮಾನುಜರಿಗೆ ಗಂಧದ ಅಲಂಕಾರದಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ, ರಾತ್ರಿ 11ಕ್ಕೆ ಶ್ರೀ ಚೆಲುವನಾಯಣನು ದಶಾವತಾರ ಅಲಂಕಾರದಲ್ಲಿ ಕಂಗೊಳಿಸಲಿದ್ದಾನೆ.
ಉತ್ಸವಗಳ ಹರಿಕಾರ
ಉತ್ತರದಿಂದ ಬೀಸಿದ ನಾಸ್ತಿಕ ವಾದದ ಗಾಳಿಯನ್ನು ಸಮರ್ಥವಾಗಿ ತಡೆಗಟ್ಟಿದ ರಾಮಾನುಜಾಚಾರ್ಯರು, ಧರ್ಮದ ಚೌಕಟ್ಟಿನಲ್ಲಿ ಕುಟುಂಬ, ಪರಿವಾರ, ಸಮಾಜದ ಅಭಿವೃದ್ಧಿಯ ಚಿಂತನೆಗಳನ್ನು ಮೂಡಿಸಿದ ಪರಿಣಾಮ ದೇವಾಲಯಗಳು ಸಮಾಜದ ಕೇಂದ್ರವಾದವು. ದೇವಾಲಯದಲ್ಲಿ ಎಲ್ಲ 18 ಜಾತಿಯವರ ಸೇವೆಗೆ ಸಮಾನ ಅವಕಾಶ ಕಲ್ಪಿಸಿದರು. ಉತ್ಸವ, ಮಹೋತ್ಸವ, ಬ್ರಹ್ಮೋತ್ಸವಗಳ ಪರಿಕಲ್ಪನೆ ಮೂಡಿಸಿ ಸಮಾಜದ ಪ್ರತಿಯೊಬ್ಬರೂ ಅವುಗಳಲ್ಲಿ ಪಾಲ್ಗೊಂಡು ಆತ್ಮಸಂತೋಷ ಹೊಂದುವ ಮಾರ್ಗವನ್ನು ತೋರಿಸಿಕೊಟ್ಟರು. ಇಂದಿಗೂ ನಾವು ಇದನ್ನು ನಾಡಿನೆಲ್ಲೆಡೆಯಲ್ಲೂ ಕಾಣುತ್ತಿದ್ದೇವೆ. ನಂತರ ಶಿಲ್ಪಕಲೆ, ಸಂಗೀತ, ಗುಡಿ ಕೈಗಾರಿಕೆ, ಕೃಷಿ, ನೀರಾವರಿ, ಮಾರುಕಟ್ಟೆ ವ್ಯವಸ್ಥೆ, ಧಾರ್ಮಿಕ ಚೌಕಟ್ಟಿನಲ್ಲಿ ನ್ಯಾಯದ ಹಂಚಿಕೆ, ಸೇವಾ ಮನೋಭಾವ, ಪರಸ್ಪರ ಸಹಕಾರ ಮುಂತಾದ ಎಲ್ಲ ವ್ಯವಸ್ಥೆಗಳಿಗೆ ದೊರೆತ ಪ್ರೋತ್ಸಾಹ ರಾಮಾನುಜರ ಸಮಾಜಮುಖಿ ಅಭಿವೃದ್ಧಿಯ ದೂರದೃಷ್ಟಿ ಎಂದೇ ಹೇಳಬಹುದು. ಪ್ರಾತಃಸ್ಮರಣೀಯ ಸಂತರಾದ ರಾಮಾನುಜರ ವಿಶಿಷ್ಟಾದ್ವೆತ ಸಿದ್ಧಾಂತದ ವಿಚಾರಧಾರೆಯನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಆಗಬೇಕಿದೆ.