

2 ರೀತಿ ಫಿಶ್ ರಿಟೇಲ್ ಬಿಸಿನೆಸ್ ಸಾಧ್ಯ: ಫಿಶ್ ಬಿಸಿನೆಸ್ ಅಂದಾಗ ಅದರ ವಿಧಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಯಾವ ಸಮಯದಲ್ಲಿ ಯಾವ ಮೀನಿಗೆ ಹೆಚ್ಚು ಬೇಡಿಕೆ ಇರುತ್ತೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ನಾವು 2 ರೀತಿ ಮಾಡಬಹುದು. 1. ನಾವೇ ಸಾಕಣೆ ಮಾಡಿ ಮಾರಾಟ ಮಾಡುವುದು. ಉದಾಹರಣೆಗೆ ಸೀ ಬಾಸ್, ಕಾಟ್ಲಾ, ರೋಹು, ಗೌರಿ, ತಿಲಾಫಿಯಾ ಇನ್ನಿತರ ಮೀನುಗಳು. 2. ಸಮುದ್ರ ಮೀನು (ಸೀ ಫಿಶ್). ಉದಾಹರಣೆಗೆ - ಬಂಗಡೆ, ಭೂತಾಯಿ, ಅಂಜಲ್, ಪಾಂಪ್ಲೆಟ್, ಕಾಣೆ ಮತ್ತು ಇನ್ನಿತರ ಮಿನುಗಳು. ಈ ಎರಡರಲ್ಲಿ ಯಾವುದೇ ಮೀನಿನ ಬಿಸಿನೆಸ್ ಮಾಡಿದರೂ ಲಾಭ ಗ್ಯಾರಂಟಿ. ಯಾಕಂದ್ರೆ ಇವೆರಡಕ್ಕೂ ಮಾರುಕಟ್ಟೆಯಲ್ಲಿ ಹೆಚ್ಚು ಡಿಮಾಂಡ್ ಇದೆ.
ಫಿಶ್ ಬಿಸಿನೆಸ್ ಮಾರುಕಟ್ಟೆ ಮೌಲ್ಯ: ದಿನದಿಂದ ದಿನಕ್ಕೆ ಹೆಚ್ಚು ಪ್ರಗತಿ ಯಾಗುತ್ತಿರುವ ಫಿಶ್ ಬಿಸಿನೆಸ್ಗೆ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಿದೆ. ಸಾಮಾನ್ಯವಾಗಿ ಫಿಶ್ ಜಾಗತಿಕ ಮಾರುಕಟ್ಟೆ ಮೌಲ್ಯ 113.2ಬಿಲಿಯನ್ ಡಾಲರ್ ಅಂದರೆ 11320 ಕೋಟಿ ರೂ. ಇದು 2027ಕ್ಕೆ 138 ಬಿಲಿಯನ್ ಡಾಲರ್ ಅಂದ್ರೆ 13800 ಕೋಟಿ ರೂ. ಆಗುವ ನಿರೀಕ್ಷೆಯಲ್ಲಿದೆ. ಹಾಗೆಯೇ ಭಾರತದ ಮಾರುಕಟ್ಟೆ ನೋಡುವುದಾದರೆ ಫಿಶ್ ಬಿಸಿನೆಸ್ ಇಲ್ಲಿನ ಬೇಡಿಕೆಗೆ ತಕ್ಕಂತೆ ಹೆಚ್ಚುತ್ತಿದ್ದು, ವಿದೇಶಕ್ಕೂ ರಫ್ತು ಆಗುವಷ್ಟು ಬೆಳೆದಿದೆ. ಫಿಶ್ ಎಕ್ಸ್ಪೋರ್ಟ್ನಲ್ಲಿ ಭಾರತ ನಾಲ್ಕನೇ ಅತಿ ದೊಡ್ಡ ದೇಶವಾಗಿದೆ. ದೇಶದಲ್ಲಿ 1.23 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದೆ. ಇಡೀ ಪ್ರಪಂಚದಲ್ಲಿ ಚೀನಾ ಹೆಚ್ಚು ಮೀನು ಉತ್ಪಾದನೆ ಮಾಡುವುದರ ಜತೆಗೆ ಬಳಕೆಯಲ್ಲಿಯೂ ಮೊದಲ ಸ್ಥಾನ ಹೊಂದಿದೆ. ನಮ್ಮ ಭಾರತದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಮೀನು ಉತ್ಪಾದನೆಯಾಗುತ್ತದೆ. ಅದರಲ್ಲಿ ಆಂಧ್ರಪ್ರದೇಶ 34 ಟನ್ನಷ್ಟು ಒಳನಾಡು ಮೀನು ಉತ್ಪಾದನೆ ಮಾಡಿದರೆ, ಗುಜರಾತ್ 7 ಟನ್ನಷ್ಟು ಸೀ ಫಿಶ್ ಉತ್ಪಾದನೆ ಮಾಡುತ್ತದೆ. ಇಷ್ಟು ದೊಡ್ಡ ಮಾರುಕಟ್ಟೆ ಹೊಂದಿರುವ ಈ ಬಿಸಿನೆಸ್ ಮಾಡಿದರೆ ಲಾಭ ಕಾಯಂ.
ಫಿಶ್ಗೆ ಹೆಚ್ಚು ಬೇಡಿಕೆ ಯಾಕೆ?: ಮೀನು ಹೆಚ್ಚು ಹೆಲ್ತ್ ಬೆನಿಫಿಟ್ ಹೊಂದಿರುವುರಿಂದ ಅವುಗಳ ಬಳಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಜತೆಗೆ ಮಾಂಸದ ಬೆಲೆ ಏರಿಕೆ ಆಗಿರೋದು ಫಿಶ್ ರಿಟೇಲ್ ಬಿಸಿನೆಸ್ನ ಡಿಮಾಂಡ್ ಹೆಚ್ಚಳಕ್ಕೆ ಕಾರಣವಾಗಿದೆ.
ಫಿಶ್ ಬಿಸಿನೆಸ್ ಲಾಭ: ಫಿಶ್ ಬಿಸಿನೆಸ್ ಆರಂಭಿಸುವುದಕ್ಕೆ ಜನಸಂದಣಿ ಇರುವಂತಹ ಸ್ಥಳ ಪ್ರಮುಖವಾಗಿರುತ್ತದೆ. ಇದನ್ನು ಸಣ್ಣ ಜಾಗದಲ್ಲಿ ಅಥವಾ ಕಂಟೇನರ್ನಲ್ಲಿ ಆರಂಭಿಸುವುದಕ್ಕೆ ಸಾಧ್ಯ. ಉದಾಹರಣೆಗೆ- ನಿಮ್ಮ ಬಳಿ 500 ಚದರ ಅಡಿ ಜಾಗವಿದ್ದರೂ ಅಲ್ಲಿ ಅಲ್ಪ ಬಂಡವಾಳದಲ್ಲಿಯೇ ಆರಂಭಿಸಬಹುದು. ಬಳಿಕ ಅದರ ನಿರ್ವಹಣೆ ಮೇಲೆ ಬಂಡವಾಳ ಆಧರಿಸಿರುತ್ತದೆ. ಫಿಶ್ ಮಾರಾಟದ ಬಳಿಕ ಶೇ.50 ಲಾಭ ಪಡೆಯುವುದಕ್ಕೆ ಅವಕಾಶವಿದೆ. ಉದಾಹರಣೆಗೆ, 10 ಕೆ.ಜಿ ಮೀನು ನೀವು 250 ರೂ. ಅಂತೆ ಗ್ರಾಹಕರಿಗೆ ಮಾರಾಟ ಮಾಡಿದರೆ 10 ಕೆ.ಜಿಗೆ 2500 ರೂ. ಆದಾಯ ಬರುತ್ತೆ. ಇದರಲ್ಲಿ ನಿಮಗೆ ಮೀನು ಖರ್ಚು, ಕಾರ್ವಿುಕರ ಖರ್ಚು ಸೇರಿ ಎಲ್ಲವೂ ಸೇರಿ ಶೇ. 50 ಖರ್ಚಾದರೂ 2500 ರೂ. ಆದಾಯದಲ್ಲಿ 1250 ರೂ. ಲಾಭ ದೊರೆಯುತ್ತೆ. ದಿನಕ್ಕೆ 1250 ರೂ. ಅಂದರೆ ಅದೇ ತಿಂಗಳಿಗೆ ನಿಮಗೆ ಬೆಲೆ ಏರಿಕೆಯ ಮೇಲೆ 35-40 ಸಾವಿರ ರೂ. ಲಾಭ ದೊರೆಯುತ್ತದೆ. ಇದು ಸಣ್ಣ ಪ್ರಮಾಣದಲ್ಲಿ ಮಾಡಿದ್ರೆ. ಅದೇ ನೀವು ದೊಡ್ಡ ಮಟ್ಟದಲ್ಲಿ ಮಾಡುವುದಾದರೆ ಎಷ್ಟು ಆದಾಯ ಪಡೆಯಬಹುದು ನೀವೇ ಲೆಕ್ಕ ಹಾಕಿ.
ಫಿಶ್ ಬಿಸಿನೆಸ್ಗೆ ಅಗತ್ಯತೆಗಳು: ಫಿಶ್ ಬಿಸಿನೆಸ್ ಆರಂಭಿಸುವುದಕ್ಕೆ ಕೊಠಡಿ, ಕೋಲ್ಡ್ ಸ್ಟೋರೇಜ್, ನುರಿತ ಕಾರ್ವಿುಕರು, ಸಂಬಂಧಿಸಿದ ಇಲಾಖೆಯಿಂದ ಲೈಸೆನ್ಸ್, ನೆರೆಹೊರೆಯವರ ವಿಶ್ವಾಸ ಅಗತ್ಯವಾಗಿ ಬೇಕಾಗುತ್ತದೆ.
ffreedom appನಲ್ಲಿ ಫಿಶ್ ರಿಟೇಲ್ ಬಿಸಿನೆಸ್ ಕೋರ್ಸ್: ಪ್ರತಿಯೊಬ್ಬರು ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ ffreedom app ಫಿಶ್ ರಿಟೇಲ್ ಬಿಸಿನೆಸ್ ಕೋರ್ಸ್ ಸಿದ್ಧ್ದಡಿಸಿದೆ. ಈ ಕೋರ್ಸ್ ಅನ್ನು ಡಾಕ್ಟರ್ ಆಗಿದ್ದವರು 2016ರಲ್ಲಿ 350 ಚದರ ಅಡಿಯಲ್ಲಿ ಫಿಶ್ ರಿಟೇಲ್ ಆರಂಭಿಸಿ ಇಂದು 7 ಬ್ರ್ಯಾಂಚ್ ಹೊಂದಿರುವ ಯಶಸ್ವಿ ಫಿಶ್ ರಿಟೇಲ್ ಉದ್ಯಮಿಯಾಗಿರುವ ವಿವೇಕ್ ಶಾ ಅವರೇ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಜತೆಗೆ ನೀವು ffreedom appನಲ್ಲಿ ಕೃಷಿ, ಬಿಸಿನೆಸ್ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ 820ಕ್ಕೂ ಹೆಚ್ಚು ಕೋರ್ಸ್ಗಳನ್ನು ನೋಡಬಹುದು ಮತ್ತು ಪ್ರತಿಯೊಬ್ಬ ಯಶಸ್ವಿ ಮಾರ್ಗದರ್ಶಕರಿಂದ ನೀವು ಕೂಡ ಕಲಿತು ಅದನ್ನು ಅಳವಡಿಸಿ ಕೊಂಡು ಉತ್ತಮ ಜೀವನ ಸಾಗಿಸಬಹುದು.
ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಕೊಡಿ - 0226211677