ಅಂಕಣ, ಮನಿಮಾತು; ಪಿಎಂಎವೈ ಸಬ್ಸಿಡಿ, ಗೊಂದಲ ಬೇಡ..!

MONEY
Published on
  • ನಾನು ಸಣ್ಣ ಬಿಸೆನಿಸ್ ಆರಂಭಿಸಿ ಎರಡು ವರ್ಷವಾಗಿದೆ. ಬಿಸಿನೆಸ್ ಇನ್ಶೂರೆನ್ಸ್ ಯಾವ ಸಂದರ್ಭದಲ್ಲಿ ಅನುಕೂಲಕ್ಕೆ ಬರುತ್ತದೆ. ಈ ವಿಮೆ ಮಾಡಿಸುವುದರಿಂದ ನಿಜಕ್ಕೂ ಅನುಕೂಲವಿದೆಯೇ?

| ಸುಧಾಕರ ಶೆಟ್ಟಿ ಮಂಗಳೂರು

ಬಿಸಿನೆಸ್ ಇನ್ಶೂರೆನ್ಸ್ ವ್ಯವಹಾರಗಳಿಗೆ ಉಂಟಾಗುವ ನಷ್ಟವನ್ನು ತಪ್ಪಿಸುತ್ತದೆ. ಆಸ್ತಿ ಹಾನಿ, ಕಾನೂನು ಹೊಣೆಗಾರಿಕೆ ಮತ್ತು ಉದ್ಯೋಗಿ-ಸಂಬಂಧಿತ ವ್ಯಾಜ್ಯಗಳ ವ್ಯಾಪ್ತಿ ಸೇರಿದಂತೆ ವ್ಯವಹಾರಗಳಿಗೆ ಅನೇಕ ರೀತಿಯ ವಿಮೆಗಳಿವೆ.

ಸಂಭಾವ್ಯ ಅಪಾಯಗಳ ಆಧಾರದ ಮೇಲೆ ಕಂಪನಿಗಳು ತಮ್ಮ ವಿಮಾ ಅಗತ್ಯಗಳನ್ನು ಮೌಲ್ಯಮಾಪನ ಮಾಡುತ್ತವೆ. ಇದು ಕಂಪನಿಯು ಕಾರ್ಯನಿರ್ವಹಿಸುವ ಪರಿಸರದ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಹೆಚ್ಚಿನ ಸಣ್ಣ ವ್ಯವಹಾರಗಳಿಗೆ ಸಾಮಾನ್ಯ ಹೊಣೆಗಾರಿಕೆ ಮತ್ತು ಆಸ್ತಿ ವಿಮೆಯ ಅಗತ್ಯವಿರುತ್ತದೆ.

ನೀವು ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದ್ದರೆ, ನಿಮಗೆ ಬಹುಶಃ ಕಾರ್ವಿುಕರ ಪರಿಹಾರ ವಿಮೆಯ ಅಗತ್ಯವಿರುತ್ತದೆ. ಪ್ರತಿಯೊಂದು ಬಿಸಿನೆಸ್ ಸಹ ವೈವಿಧ್ಯಮಯವಾಗಿರುತ್ತದೆ. ನಿಮ್ಮ ವ್ಯವಹಾರದ ಸ್ವರೂಪ, ವ್ಯವಹಾರಕ್ಕೆ ಒಡ್ಡಿಕೊಳ್ಳುವ ಅಪಾಯಗಳು, ವಿಮಾದಾರ ಮತ್ತು ಉತ್ಪನ್ನದ ಸೇರ್ಪಡೆ ಮತ್ತು ಹೊರಗಿಡುವಿಕೆಗಳನ್ನು ಅವಲಂಬಿಸಿ ಪ್ರೀಮಿಯಂಗಳು ಬದಲಾಗುತ್ತವೆ. ಕಾಂಪ್ರಹೆನ್ಸಿವ್ ಥರ್ಡ್ ಪಾರ್ಟಿ ಕವರೇಜ್, ಆಗ್ನಿ ಆಕಸ್ಮಿಕ, ಕಳ್ಳತನದಂತಹ ಸಂದರ್ಭಗಳಿಂದ ರಕ್ಷಣೆ ಪಡೆಯಿರಿ. ಉದ್ಯೋಗಿಗಳಿಗೆ ಪರಿಹಾರ ನೀಡಲು ಒಪ್ಪುವ ವಿಮೆಯನ್ನು ಆಯ್ಕೆ ಮಾಡಿ. ವಿಮೆ ಕೊಳ್ಳುವಾಗ ವೃತ್ತಿಪರ ಪರಿಹಾರ ಧನ (ಪೊ›ಫೆಷನಲ್ ಇಂಡೆಮ್ನಿಟಿ) ಕಡೆಗಣಿಸಬೇಡಿ. ಪಿಎಂಎವೈ ಸಬ್ಸಿಡಿ, ಗೊಂದಲ ಬೇಡ..!

  • ನಾನು ಆದಾಯ ತೆರಿಗೆ ಪಾವತಿದಾರ, ದಿನಾಂಕ 21/01/2020 ರಂದು 24,40,000 ರೂ.ಗಳಿಗೆ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಉದ್ದೇಶದ 15x40=600 ಚದುರ ಅಡಿ ವಿಸ್ತೀರ್ಣದ ಮನೆ ಖರೀದಿಸಿದ್ದೇನೆ. ಈ ಉದ್ದೇಶಕ್ಕಾಗಿ 1,36,640 ರೂಪಾಯಿಗಳನ್ನು ಸ್ಟಾಂಪ್ ಡ್ಯೂಟಿ ರೂಪದಲ್ಲಿ ಪಾವತಿಸಿದ್ದು ಆದಾಯ ತೆರಿಗೆಯ ಯಾವ ಸೆಕ್ಷನ್ ನಲ್ಲಿ ವಿನಾಯಿತಿ ಪಡೆಯಲು ಅವಕಾಶವಿದೆ ದಯಮಾಡಿ ತಿಳಿಸಿ.

| ಷರೀಫ್ ಕೆ ಎನ್ ದಾವಣಗೆರೆ

ಷರೀಫ್ ಅವರೆ ರಿಜಿಸ್ಟ್ರೇಷನ್ ಶುಲ್ಕ, ಸ್ಟಾ್ಯಂಪ್ ಡ್ಯೂಟಿ ಮತ್ತು ಆಸ್ತಿ ವರ್ಗಾವಣೆಗೆ ಒಳಪಟ್ಟಿರುವ ನೇರ ವೆಚ್ಚಗಳಿಗೆ ಆದಾಯ ತೆರಿಗೆಯ ಸಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. 80 ಸಿ ಅಡಿಯಲ್ಲಿ ರೂ. 1.5 ಲಕ್ಷದ ವರೆಗೆ ವಿನಾಯಿತಿಗೆ ಅವಕಾಶವಿದೆ. ಆದರೆ ನೆನಪಿರಲಿ ಆಸ್ತಿ ಖರೀದಿಸಿದ ವರ್ಷದಲ್ಲೇ ಇದನ್ನು ಕ್ಲೇಮ್ ಮಾಡಬೇಕು.

ನೀವು 21 ಜನವರಿ 2020 ರಲ್ಲಿ ಆಸ್ತಿ ಖರೀದಿಸಿ ಸ್ಟಾ್ಯಂಪ್ ಡ್ಯೂಟಿ ಇತ್ಯಾದಿಗಳನ್ನು ಪಾವತಿಸಿ ರುವುದರಿಂದ ಹಣಕಾಸು ವರ್ಷ 2019-20 ನೇ ಸಾಲಿನಲ್ಲೇ ನೀವು ಈ ಕ್ಲೇಮ್ ಪಡೆದುಕೊಳ್ಳಬೇಕು, ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ಮತ್ತು ಹಿಂದೂ ಅವಿಭಕ್ತ ಕುಟುಂಬದಲ್ಲಿರುವ (ಎಚ್ ಯುಎಫ್) ಆದಾಯ ತೆರಿಗೆ ಪಾವತಿದಾರರು ಕೂಡ ಈ ವಿನಾಯಿತಿ ಪಡೆಯಬಹುದು.

  • ನಾನು ಸರ್ಕಾರಿ ಶಾಲೆ ಶಿಕ್ಷಕ. ನವೆಂಬರ್ 2015 ರಲ್ಲಿ 12 ಲಕ್ಷ ಗೃಹ ಸಾಲ ಪಡೆದಿದ್ದೇನೆ, ಮನಿ ಮಾತು ಅಂಕಣದಲ್ಲಿ ನಿಮ್ಮ ಉತ್ತರ ನೋಡಿ ಬ್ಯಾಂಕ್​ನಲ್ಲಿ ವಿಚಾರಿಸಿದೆ. ಆದರೆ 2017ರ ನಂತರದಲ್ಲಿ ಈ ಯೋಜನೆ ಅನ್ವಯವಾಗುತ್ತದೆ ಎಂದು ಬ್ಯಾಂಕ್ ನವರು ತಿಳಿಸಿದ್ದಾರೆ. ದಯವಿಟ್ಟು ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿ.

| ಸಂಜಯ್ ಶಿವಪುರ

ಸಂಜಯ್ ಅವರೆ ಪ್ರಧಾನಮಂತ್ರಿ ಆವಾಜ್ ಯೋಜನೆ ಬಗ್ಗೆ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಜನರು ಪ್ರಶ್ನೆ ಕೇಳುತ್ತಿದ್ದಾರೆ. ಅವರೆಲ್ಲರಿಗೂ ಮಾಹಿತಿ ಒದಗಿಸಿ ಗೊಂದಲ ಪರಿಹರಿಸುವ ಜತೆಗೆ ನಿಮ್ಮ ಪ್ರಶ್ನೆಗೂ ಸೂಕ್ತ ಉತ್ತರ ಸಿಗುವಂತಹ ಮಾಹಿತಿಯನ್ನು ಇಲ್ಲಿ ಒದಗಿಸಿದ್ದೇನೆ. ನಿಮ್ಮ ಪ್ರಶ್ನೆ ಪರಿಪೂರ್ಣವಾಗಿರದ ಕಾರಣ ಈ ಮಾಹಿತಿ ಆಧರಿಸಿ ನೀವು ಯಾವ ವರ್ಗದ ಯೋಜನೆಗೆ ಒಳಪಡುತ್ತೀರಾ ಎಂದು ತೀರ್ವನಿಸಿ ಬ್ಯಾಂಕ್ ನವರಲ್ಲಿ ಮಾಹಿತಿ ಕೇಳಬಹುದು.

ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ವಿಂಗಡಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗ(ಇಡಬ್ಲೂ್ಯಎಸ್- ವರ್ಗ1) , ಕಡಿಮೆ ಆದಾಯವಿರುವ ವರ್ಗ(ಎಲ್​ಐಸಿ), ಮಧ್ಯಮ ಆದಾಯ ಗುಂಪು- 1 (ಎಂಐಜಿ -1), ಮತ್ತು ಮಧ್ಯಮ ಆದಾಯ ಗುಂಪು 2(ಎಂಐಜಿ-2) . ಆರ್ಥಿಕವಾಗಿ ದುರ್ಬಲ ವರ್ಗ(ಇಡಬ್ಲೂ್ಯಎಸ್- ವರ್ಗ1) ಮತ್ತು ಕಡಿಮೆ ಆದಾಯವಿರುವ (ಎಲ್​ಐಸಿ) ವರ್ಗಕ್ಕೆ 2015 ರ ಜೂನ್ ನಿಂದಲೇ ಈ ಯೋಜನೆ ಜಾರಿಯಲ್ಲಿದೆ. ಮಧ್ಯಮ ಆದಾಯ ಗುಂಪು- 1 (ಎಂಐಜಿ -1), ಮತ್ತು ಮಧ್ಯಮ ಆದಾಯ ಗುಂಪು 2(ಎಂಐಜಿ-2) ಅನ್ನು 2017 , ಜನವರಿ 1 ರಿಂದ ಅನ್ವಯವಾಗುವಂತೆ ಯೋಜನೆಗೆ ಸೇರಿಸಲಾಗಿದೆ. (ಪಟ್ಟಿ ಗಮನಿಸಿ)

ಬೆಂಗಳೂರಿನಲ್ಲಿ ಕಾರ್ಯಾಗಾರ

ಇಂಡಿಯನ್ ಮನಿ ಡಾಟ್ ಕಾಂ ಸಿಇಒ ಸಿ ಎಸ್ ಸುಧೀರ್ ಸಾರಥ್ಯದಲ್ಲಿ ಒಂದು ದಿನದ ಫೈನಾನ್ಶಿಯಲ್ ಫ್ರೀಡಂ ಕಾರ್ಯಾಗಾರ ಮಾರ್ಚ್ 1 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಾರ್ಯಾಗಾರದಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಹೂಡಿಕೆ, ತೆರಿಗೆ ನಿರ್ವಹಣೆ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸುವವರು 8655097256 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net