

| ಪ್ರವೀಣ್ ಕುಮಾರ್, ಬೆಂಗಳೂರು
ಸಾಲ ಪಡೆದಿರುವ ವ್ಯಕ್ತಿಯ ಹೆಸರು ತಪ್ಪಾಗುವುದು, ತಪ್ಪು ದಿನಾಂಕ ನಮೂದಿಸುವುದು, ಸಾಲದ ಮಾದರಿ ತಪ್ಪಾಗಿ ಸಮೂದಿಸುವುದು, ವಿಳಾಸ ಸರಿಯಿಲ್ಲದಿರುವುದು, ಸಾಲ ಪಡೆದಿರುವ ಬ್ಯಾಂಕ್ ಖಾತೆಯನ್ನು ತಪ್ಪಾಗಿ ಬರೆಯುವುದು, ಮಂಜೂರಾಗಿರುವ ಸಾಲದ ಮೊತ್ತವನ್ನು ತಪ್ಪಾಗಿ ನಮೂದಿಸುವುದು, ಸಾಲ ಮರುಪಾವತಿಯ ಕೊನೆ ಕಂತನ್ನು ರಿಪೋರ್ಟ್ ನಲ್ಲಿ ಬರೆಯದಿರುವುದು, ನೀವು ಸಾಲ ಪಡೆಯಲು ನೀಡಿರುವ ದಾಖಲೆಗಳು ತಾಳೆಯಾಗದಿರುವುದು ಸೇರಿದಂತೆ ಹತ್ತಾರು ಕಾರಣಗಳಿಂದ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ನಲ್ಲಿ ತಪ್ಪುಗಳು ಕಾಣಿಸಿಕೊಳ್ಳುತ್ತವೆ.
ಸರಿಪಡಿಸುವುದು ಹೇಗೆ? ಮೊದಲಿಗೆ ಕ್ರೆಡಿಟ್ ರಿಪೋರ್ಟ್ ನಲ್ಲಿ ಯಾವ ತಪ್ಪಿದೆ ಎನ್ನುವ ಮಾಹಿತಿಯನ್ನು ಭರ್ತಿ ಮಾಡಿ ಸಿಬಿಲ್ (CIBIL) ನ ಆನ್ ಲೈನ್ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ಸಲ್ಲಿಸಬೇಕು. ಆನ್ ಲೈನ್ ನಲ್ಲಿ ದೂರು ಸಲ್ಲಿಸಿದ ಕೂಡಲೇ ನಿಮಗೆ ವ್ಯಾಜ್ಯ ಪರಿಹಾರ ವೇದಿಕೆಯ ಕಂಪ್ಲೇಂಟ್ ಐಡಿ ನಂಬರ್ ಸಿಗುತ್ತದೆ.
| ಮಂಜುನಾಥ ರಾಯಚೂರು
ಸೂಕ್ತ ದಾಖಲೆಗಳನ್ನು ಸರಿಯಾಗಿ ಸಲ್ಲಿಕೆ ಮಾಡಿದ್ದಲ್ಲಿ ಸಾಮಾನ್ಯವಾಗಿ 4ರಿಂದ 6 ತಿಂಗಳ ಒಳಗಾಗಿ ಪ್ರಧಾನಮಂತ್ರಿ ಆವಾಜ್ ಯೋಜನೆ ಅಡಿಯಲ್ಲಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಲಭ್ಯವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಒಂದು ವರ್ಷದ ಒಳಗಾಗಿ ಪಿಎಂಎವೈ ಸಬ್ಸಿಡಿ ಬಂದಿರುವ ನಿದರ್ಶನಗಳಿವೆ. ನೀವು ಎಲ್ ಐಜಿ (ಲೋ ಇನ್ ಕಂ ಗ್ರೂಪ್) ಅಡಿಯಲ್ಲಿ ಅರ್ಜಿ ಸಲ್ಲಿಸಿರುವುದರಿಂದ ನಿಮಗೆ ರೂ. 2.67 ಲಕ್ಷ ಸಬ್ಸಿಡಿ ಲಭಿಸುತ್ತದೆ.
ಅರ್ಜಿಯ ಸ್ಥಿತಿಗತಿಯ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ನಲ್ಲಿ ವಿಚಾರಿಸಿ. ಅರ್ಜಿಯ ಸ್ಥಿತಿಗತಿಯನ್ನು ಪಿಎಂಎವೈ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು. https://pmaymis.gov.in/https://pmaymis.gov.in/ ಗೆ ಲಾಗಿನ್ ಆಗಿ ಸರ್ಚ್ ಬೆನಿಫಿಶಿಯರಿಗೆ ಹೋಗಿ ನಿಮ್ಮ ಆಧಾರ್ ಸಂಖ್ಯೆ ನೀಡಿದರೆ ಅರ್ಜಿಯ ಸ್ಥಿತಿ ಅರಿಯಬಹುದು. ಇದರಲ್ಲೂ ಅರ್ಜಿಯ ಸ್ಥಿತಿಗತಿಯ ಮಾಹಿತಿ ಸಿಗಲಿಲ್ಲ ಎಂದಾದಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆ ಸಹಾಯವಾಣಿ 1800-11-6446ಗೆ ಕರೆ ಮಾಡಬಹುದು. ಅಥವಾ ಠ್ಠsupport-pmayg@gov.insupport-pmayg@gov.inಗೆ ಇ- ಮೇಲ್ ಮೂಲಕ ದೂರು ಸಲ್ಲಿಸಬಹುದು.
| ಪರಶುರಾಂ ದಾವಣಗೆರೆ
ಇಂಡಿಯನ್ ಮನಿ ಡಾಟ್ ಕಾಂ ನ ಸಿಇಒ ಸಿ ಎಸ್ ಸುಧೀರ್ ಸಾರಥ್ಯದಲ್ಲಿ ಒಂದು ದಿನದ ಫೈನಾನ್ಶಿಯಲ್ ಫ್ರೀಡಂ ಕಾರ್ಯಾಗಾರ ಫೆಬ್ರವರಿ 9 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಾರ್ಯಾಗಾರದಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಹೂಡಿಕೆ, ತೆರಿಗೆ ನಿರ್ವಹಣೆ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸುವವರು 8655097256 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ.