ಆದಾಯ ಹೆಚ್ಚಳಕ್ಕೆ ದಶ ಸೂತ್ರಗಳು: ಮನಿಮಾತು

Money Mathu
Published on
ಪ್ರತಿಯೊಬ್ಬರಿಗೂ ಇರುವುದು ಒಂದೇ ಆಸೆ, ತಮ್ಮ ಆದಾಯ ಅಂದರೆ ಹಣವನ್ನು ಡಬ್ಬಲ್ ಮಾಡಬೇಕು ಎನ್ನುವುದು. ಅದಕ್ಕಾಗಿಯೇ ಸಾಕಷ್ಟು ಜನ ಸಿಕ್ಕಸಿಕ್ಕ ಕಡೆ ಹೂಡಿಕೆ ಮಾಡುವುದಕ್ಕೆ ಮುಂದಾಗುತ್ತಾರೆ. ಇದರಲ್ಲಿ ಕೆಲವರು ಯಶಸ್ಸು ಕಂಡರೆ, ಇನ್ನು ಕೆಲವರು ಇರುವ ಹಣವನ್ನೂ ಕಳೆದುಕೊಂಡು ಬೀದಿಗೆ ಬರುತ್ತಾರೆ. ಇನ್ನು ಕೆಲವರು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು? ಹೇಗೆ ಮಾಡಬೇಕು? ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ಸ್ ಬರುತ್ತೆ? ಅನ್ನುವುದನ್ನು ತಿಳಿಯದಾಗಿದ್ದಾರೆ. ಹಾಗಾದರೆ ಹಣ ಡಬ್ಬಲ್ ಮಾಡಿಕೊಳ್ಳುವುದು ಹೇಗೆ? ಸೂಕ್ತ ಮಾರ್ಗ ಯಾವುದು? ಇಂಥ ಗೊಂದಲ ನಿಮ್ಮಲ್ಲಿ ಇದ್ದರೆ ಇಂದೇ ಅದನ್ನು ಬಿಟ್ಟು ಬಿಡಿ, ನಾನು ಹೇಳುವಂಥ ಈ 10 ಮಾರ್ಗದಲ್ಲಿ ಹಣ ಹೂಡಿಕೆ ಮಾಡಿ ಕೆಲ ವರ್ಷದಲ್ಲಿ ನಿಮ್ಮ ಹಣವನ್ನು ಡಬ್ಬಲ್ ಮಾಡಿಕೊಳ್ಳಿ. ನೀವೂ ಶ್ರೀಮಂತರಾಗಿ.

10 ಮಾರ್ಗಗಳು ಯಾವುವು?

1. ಸ್ಟಾಕ್ ಮಾರ್ಕೆಟ್: ಸ್ಟಾಕ್ ಮಾರ್ಕೆಟ್​ನಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಹಣ ಡಬ್ಬಲ್ ಮಾಡಿಕೊಳ್ಳಬಹುದು. ಹಣ ಹೂಡಿಕೆ ಮಾಡಿ ಕಾಯುವ ತಾಳ್ಮೆ ಮತ್ತು ಸ್ಟಾಕ್ ಮಾರ್ಕೆಟ್ ಬಗ್ಗೆ ಜ್ಞಾನ ಇರುವವರಿಗೆ ಇದು ಸೂಕ್ತ.

2. ಸ್ಟಾರ್ಟಪ್ ಇನ್ವೆಸ್ಟ್​ಮೆಂಟ್: ಕೆಲವೊಂದಿಷ್ಟು ಜನರನ್ನು ‘ಏನು ಮಾಡ್ತಾ ಇದೀಯಾ?’ ಅಂಥ ಕೇಳಿದರೆ, ಸ್ಟಾರ್ಟಪ್ ಕಂಪನಿ ಮಾಡಿದ್ದೇನೆ ಅನ್ನುತ್ತಾರೆ. ಸಾಕಷ್ಟು ಜನರಿಗೆ ಹಣವನ್ನು ಸ್ಟಾರ್ಟಪ್ ಕಂಪನಿಗಳ ಮೇಲೆ ಹೂಡಿಕೆ ಮಾಡುವ ಆಸೆ ಇರುತ್ತದೆ. ನಾವು ಆಯ್ಕೆ ಮಾಡಿದ ಕಂಪನಿ ಮೇಲೆ ಹಣ ಡಬ್ಬಲ್ ಆಗುವುದು ನಿರ್ಧಾರವಾಗುತ್ತದೆ. ಕೆಲವೊಮ್ಮೆ ಕಂಪನಿಗಳು ಕ್ಲೋಸ್ ಕೂಡ ಆಗಬಹುದು. ಈ ಬಗ್ಗೆ ತಿಳಿದು ಹೂಡಿಕೆ ಮಾಡುವುದು ಒಳ್ಳೆಯದು.

3. ಗೋಲ್ಡ್ / ಡಿಜಿಟಲ್ ಗೋಲ್ಡ್ ಮೇಲೆ ಹೂಡಿಕೆ: ಸಾಮಾನ್ಯವಾಗಿ ಗಮನಿಸಿದರೆ ಗೋಲ್ಡ್ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಾಗಂತ ಅಭರಣಗಳ ಮೇಲೆ ಹೂಡಿಕೆ ಅಲ್ಲ. ಇದರ ಬದಲಿಗೆ ಗೋಲ್ಡ್ ಕಾಯಿನ್ ಅಥವಾ ಡಿಜಿಟಲ್ ಗೋಲ್ಡ್ ಮೇಲೆ ಹೂಡಿಕೆ ಮಾಡಬೇಕು. ಕೆಲವು ವರ್ಷದಲ್ಲಿ ಹಣ ಡಬ್ಬಲ್ ಅಗುತ್ತದೆ.

4. ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ: ಇತ್ತೀಚಿನ ದಿನಗಳಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಉದ್ಯಮ ಅಂದರೆ ರಿಯಲ್ ಎಸ್ಟೇಟ್. ಇಲ್ಲಿಯೂ ಸಾಕಷ್ಟು ಜನರು ಹೂಡಿಕೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಆದರೆ ಒಂದು ನೆನಪಿನಲ್ಲಿರಲ್ಲಿ, ರಿಯಲ್ ಎಸ್ಟೇಟ್​ನಲ್ಲಿ ಪ್ಲಾಟ್ - ಮನೆಗೆ ಹೂಡಿಕೆ ಮಾಡಿದರೆ ಹಣ ಡಬ್ಬಲ್ ಆಗುವ ಸಾಧ್ಯತೆ ಕಡಿಮೆ. ಅದೇ ಸೈಟ್ ಮೇಲೆ ಹೂಡಿಕೆ ಮಾಡಿದರೆ ಶೀಘ್ರವಾಗಿ ಹಣ ಡಬ್ಬಲ್ ಅಗುತ್ತೆ. ಆದರೆ ನಾವು ಯಾವ ಸ್ಥಳದಲ್ಲಿ ಸೈಟ್ ಮೇಲೆ ಹೂಡಿಕೆ ಮಾಡಿದ್ದೇವೆ ಅನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ. ಹೆಚ್ಚು ಬೇಡಿಕೆ ಇರುವ ಕಡೆ ಸೈಟ್​ಗೆ ಹೂಡಿಕೆ ಮಾಡಿದರೆ ಗ್ಯಾರಂಟಿ ಹಣವನ್ನು ಡಬ್ಬಲ್ ಮಾಡಿಕೊಳ್ಳಬಹುದು.

5. ಫಿಕ್ಸೆಡ್ ಡೆಫಾಸಿಟ್: ಇದರಲ್ಲಿ ನಿಮ್ಮ ಹಣ ಡಬ್ಬಲ್ ಅಗಬೇಕು ಅಂದರೆ ನೀವು ಲೆಕ್ಕ ಹಾಕಬೇಕು. ನಿಮ್ಮ ಬಡ್ಡಿ ದರ ಎಷ್ಟು? ಒಂದು ವೇಳೆ ನೀವು ಹಿರಿಯ ನಾಗರಿಕರಾಗಿದ್ದರೆ ಸುಮಾರು ಶೇ.7.8 ರಿಂದ 8 ಬಡ್ಡಿ ದರ ಸಿಗುತ್ತೆ. ಶೇ.8 ಸಿಕ್ತು ಅಂದರೆ 9 ವರ್ಷಕ್ಕೆ ನಿಮ್ಮ ಹಣ ಡಬ್ಬಲ್ ಅಗುತ್ತೆ. ಇಲ್ಲಿ ನಿಮ್ಮ ಹೂಡಿಕೆ ಮೊತ್ತಕ್ಕೆ ಬರುವ ಬಡ್ಡಿದರದ ಮೇಲೆ ಹಣ ಡಬ್ಬಲ್ ಅಗುವ ಅವಧಿ ತೆಗೆದುಕೊಳ್ಳುತ್ತದೆ.

6. ಡೆಡ್ ಫಂಡ್ಸ್​ನಲ್ಲಿ ಹೂಡಿಕೆ: ಮ್ಯೂಚುವಲ್ ಫಂಡ್ಸ್​ನಲ್ಲಿ ಡೆಡ್ ಫಂಡ್ಸ್ ಇವೆ. ಇವು ಲಾಂಗ್ ಟೈಮ್ಲ್ಲಿ ಶೇ. 8.5 ರಿಂದ 9 ರಿಟರ್ನ್ಸ್ ಕೊಡುತ್ತವೆ. ಶೇ. 9 ರಿಟರ್ನ್ಸ್ ಕೊಟ್ರೂ 8 ವರ್ಷದಲ್ಲಿ ಹೂಡಿಕೆ ಮಾಡಿದ ಹಣ ಡಬ್ಬಲ್ ಅಗುತ್ತದೆ.

7. ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಪ್ರಸ್ತುತ ರಿಟರ್ನ್ಸ್ ಶೇ.7.9 ಇದೆ. ಈಗ ನೀವು ಹೂಡಿಕೆ ಮಾಡಿದರೂ ಸುಮಾರು 9 ವರ್ಷಕ್ಕೆ ಇಲ್ಲಿ ಹಣ ಡಬ್ಬಲ್ ಅಗುತ್ತದೆ. ಆದರೆ ಸಂಪೂರ್ಣ ತಿಳಿದು ಹೂಡಿಕೆ ಮಾಡುವುದು ಸೂಕ್ತ.

8. ನ್ಯಾಷನಲ್ ಪೆನ್ಷನ್ ಸ್ಕೀಮ್: ಇಲ್ಲಿ ನಿಮ್ಮ ಹಣ ಮತ್ತು ಹೂಡಿಕೆ ನಿಮ್ಮ ಇಕ್ವಿಟಿ ಎಕ್ಸೊ್ಪೕಷಲ್ ಆಧಾರದ ಮೇಲೆ ಇರುತ್ತದೆ. ಶೇ.9 ರಿಂದ 10 ರಿಟರ್ನ್ಸ್ ಸಿಕ್ತು ಅಂದ್ರೆ ಕನಿಷ್ಠ 7 ರಿಂದ 8 ವರ್ಷದಲ್ಲಿ ಹಣ ಡಬ್ಬಲ್ ಅಗುತ್ತದೆ.

9. ಇಕ್ವಿಟಿ ಲಿಂಕ್ ಸೇವಿಂಗ್ಸ್ ಸ್ಕೀಮ್ ​(ELSS): ಈ ಸ್ಕೀಮ್ಲ್ಲಿ ಒಳ್ಳೆ ಫಂಡ್ ಆಯ್ಕೆ ಮಾಡಿದರೆ ಶೇ.14 ರಿಂದ 15 ರಿಟರ್ನ್ಸ್ ಸಿಗುತ್ತದೆ. ಶೇ.12 ಸಿಕ್ಕಿದರೂ ಕೇವಲ 6 ವರ್ಷದಲ್ಲಿ ಹಣ ಡಬ್ಬಲ್ ಅಗುತ್ತದೆ. ಇದರಲ್ಲಿ ಹಣ ಶೀಘ್ರವಾಗಿ ಬೆಳೆಯುತ್ತೆ.

10. ಆರ್​ಡಿ (ಮರುಕಳಿಸುವ ಠೇವಣಿ): ಆರ್​ಡಿ ಮತ್ತು ಎಫ್​ಡಿಗೆ ಹೆಚ್ಚು ವ್ಯತ್ಯಾಸ ಇಲ್ಲ. ಎಫ್​ಡಿ ಅಂದರೆ One time investment.. ಆರ್​ಡಿಯಲ್ಲಿ ನಿರಂತರವಾಗಿ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಇರುತ್ತದೆ. ಇದರಲ್ಲಿಯೂ ಎಫ್​ಡಿಯಲ್ಲಿ ಸಿಗುವಷ್ಟೇ ರಿಟರ್ನ್ಸ್ ಸಿಗುತ್ತದೆ.

ನಿಮ್ಮ ಬಳಿ ಇರುವ ಹಣವನ್ನು ಈ ಹತ್ತು ಸೂತ್ರಗಳ ಆಧಾರದ ಮೇಲೆ ಹೂಡಿಕೆ ಮಾಡುವ ಮೂಲಕ ಡಬ್ಬಲ್ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಈ ಸೂತ್ರಗಳಿಗೆ ಸಂಬಂಧಪಟ್ಟಂತೆ ಹೂಡಿಕೆದಾರರಿಗೆ ಜ್ಞಾನ ಇರಬೇಕು. ಇಲ್ಲವಾದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯ ಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777

ffreedom appನಲ್ಲಿ ಫೈನಾನ್ಸಿಯಲ್ ಫ್ರೀಡಂ ಕೋರ್ಸ್: ಪ್ರತಿಯೊಬ್ಬರು ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ffreedom app ಹಣಕಾಸು ನಿರ್ವಹಣೆ ಕುರಿತು ‘ಫೈನಾನ್ಸಿಯಲ್ ಫ್ರೀಡಂ ಕೋರ್ಸ್ - ಇದು ಶ್ರೀಮಂತಿಕೆ ರಾಜ ಮಾರ್ಗ ಕೋರ್ಸ್’ ಸಿದ್ಧಪಡಿಸಿದೆ. ಈಗಲೇ ffreedom app ಡೌನ್ ಲೋಡ್ ಮಾಡಿ ಕೋರ್ಸ್ ವೀಕ್ಷಿಸಿ. ಜತೆಗೆ ನೀವು ffreedom appನಲ್ಲಿ ಬಿಸಿನೆಸ್, ಕೃಷಿ ಮತ್ತು ಹಣಕಾಸಿಗೆ ಸಂಬಂಧಿಸಿದ್ದಂತೆ 1000ಕ್ಕೂ ಹೆಚ್ಚು ಕೋರ್ಸ್​ಗಳನ್ನು ವೀಕ್ಷಿಸಬಹುದು

ಕೋರ್ಸ್​ನಲ್ಲಿ ಏನೇನಿದೆ?

  • ಶ್ರೀಮಂತಿಕೆಯ ಸೂತ್ರಗಳು
  • ಗಳಿಕೆ 10 ಪಟ್ಟು ಹೆಚ್ಚಿಸಲು ಸೂತ್ರಗಳು
  • ಖರ್ಚನ್ನು ನಿಯಂತ್ರಿಸಲು ಸರಳ ಸೂತ್ರಗಳು
  • ಉಳಿತಾಯ ಹೆಚ್ಚಿಸಲು ಶ್ರೀಮಂತರು ಬಳಸುವ ಮಾರ್ಗಗಳು
  • ಸಾಲದ ಬಗ್ಗೆ 
  • ರಿಸ್ಕ್ ಪ್ಲ್ಯಾನಿಂಗ್ 
  • ಹೂಡಿಕೆ ಯೋಜನೆ 
  • ತೆರಿಗೆ ಯೋಜನೆ 
  • ಎಸ್ಟೇಟ್ ಪ್ಲ್ಯಾನಿಂಗ್
  • ಫೈನಾನ್ಯಿಯಲ್ ಫ್ರೀಡಂ ಕೋರ್ಸ್ ಸಾರಾಂಶ
  • ಕೇಳಿದ್ದೆಲ್ಲವನ್ನೂ ಕೊಡುವ ದೇವರ ಪರಿಚಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net