ಒಂದು ಮುತ್ತಿನ ಕೃಷಿ-ರೈತರಿಗೆ ಖುಷಿ: ಮನಿಮಾತು

Money Mathu
Published on
‘ಮುತ್ತು’ ಈ ಪದವನ್ನು ಕೇಳಿದ ಕೂಡಲೇ ಪದ್ಮಭೂಷಣ ಡಾ.ರಾಜಕುಮಾರ್ ನಟನೆಯ ಶಂಕರ್​ನಾಗ್ ನಿರ್ದೇಶನದ ‘ಒಂದು ಮುತ್ತಿನ ಕಥೆ’ ಸಿನಿಮಾ ನೆನಪಿಗೆ ಬರುತ್ತೆ. ಇಷ್ಟೇ ಅಲ್ಲದೆ, ಸಮುದ್ರದಾಳದಲ್ಲಿರುವ ಮುತ್ತುಗಳು ಕಣ್ಮುಂದೆ ಬರುತ್ತೆ. ಆದರೆ ಇಂದು ಈ ಮುತ್ತುಗಳು ಕೃಷಿ ಕ್ಷೇತ್ರದಲ್ಲಿಯೂ ಕಾಲಿಟ್ಟು, ಕೃಷಿಕ ಲಕ್ಷ ಸಂಪಾದನೆ ಮಾಡುವಂತಾಗಿದೆ. ಹೌದು, ಇದು ಅಚ್ಚರಿ ಅನಿಸಿದ್ರು ಸತ್ಯ. ಹೆಂಗೆಳೆಯರ ಕೊರಳಲ್ಲಿ ಮಿಂಚುವ ಮುತ್ತಿನ ಹಾರಕ್ಕೆ ಎಲ್ಲಿಲ್ಲದ ಬೇಡಿಕೆ. ಆಭರಣಗಳ ತಯಾರಿಕೆಯಲ್ಲಿ ಮುತ್ತುಗಳದ್ದೇ ಮೇಲುಗೈ. ಹೀಗಾಗಿ ಒಂದುಕಾಲದಲ್ಲಿ ಸಮುದ್ರದ ಸ್ವತಾಗಿದ್ದಂತಹ ಮುತ್ತು ಇಂದು ಕೇವಲ ಸಮುದ್ರದ ಸಂಪತ್ತಾಗಿ ಉಳಿದಿಲ್ಲ. ಯಾಕೆಂದರೆ ನಿಮ್ಮ ಮನೆಯಂಗಳದಲ್ಲಿ, ಸಿಹಿನೀರಿನಲ್ಲೂ ಮುತ್ತಿನ ಕೃಷಿ ಮಾಡಬಹುದು.

ಮುತ್ತಿನ ಕೃಷಿ ಯಾಕೆ?: ಮುತ್ತಿನ ಕೃಷಿ ಬಲು ಸುಲಭ. ಇದರಲ್ಲಿ ಇತರೆ ಕೃಷಿಯಂತೆ ರಿಸ್ಕ್ ಇರುವುದಿಲ್ಲ. ಅಷ್ಟೇ ಅಲ್ಲದೇ ಸರ್ಕಾರಗಳು ಮುತ್ತಿನ ಕೃಷಿಗಾಗಿಯೇ ಹೆಚ್ಚು ಸಹಾಯಧನ ನೀಡುತ್ತಿದೆ. ಹೀಗಾಗಿ ಇದರಲ್ಲಿ ನಷ್ಟ ಅನುಭವಿಸುವ ಸಂಖ್ಯೆ ಬಹಳ ಕಡಿಮೆ. ಇಷ್ಟೇ ಅಲ್ಲದೇ ಭಾರತವೂ ಬೇರೆ ದೇಶಗಳಿಂದ ಮುತ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಮುತ್ತಿನ ಕೃಷಿ ಮಾಡಿದರೆ ಹೆಚ್ಚು ಆದಾಯ ಗ್ಯಾರಂಟಿ.

ಮಾರುಕಟ್ಟೆ ಹೇಗಿದೆ?: 20ನೇ ಶತಮಾನದಲ್ಲಿ ಜಪಾನಿನ ಸಂಶೋಧಕ ಕೊಕಿಚಿ ಮಿಕಿಮೊಟೊ ಸಮುದ್ರವನ್ನು ಹೊರತು ಪಡಿಸಿ ಸಿಹಿ ನೀರಿನಲ್ಲಿ ಮುತ್ತಿನ ಕೃಷಿ ಮಾಡಬಹುದು ಎಂಬುದನ್ನು ಕಂಡುಹಿಡಿಯುತ್ತಾರೆ. ಇಂದು ಈ ಕೃಷಿ ಜಪಾನ್, ಆಸ್ಟ್ರೇಲಿಯಾ, ಫಿಲಿಫೈನ್ಸ್ ಮತ್ತು ಚೀನಾದಲ್ಲಿ ಪ್ರಮುಖ ಉದ್ಯಮವಾಗಿದೆ. ಇಷ್ಟೇ ಅಲ್ಲದೇ ಮುತ್ತಿನ ಆಭರಣಗಳ ಮಾರುಕಟ್ಟೆಯ ಗಾತ್ರವೂ ಜಾಗತಿಕವಾಗಿ 2025ರ ವೇಳೆಗೆ 20 ಯುಎಸ್ ಬಿಲಿಯನ್ ಡಾಲರ್ ಅಂದರೇ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸರಿ ಸುಮಾರು 1,649 ಕೋಟಿ ರೂ.ಗೂ ಹೆಚ್ಚು ಪ್ರಗತಿಯಾಗುವ ನಿರೀಕ್ಷೆ ಮಾಡಲಾಗಿದ್ದು ಇಅಎ 13% ನಲ್ಲಿ ಬೆಳೆಯುತ್ತಿದೆ.

ಮಾರಾಟ ಹೇಗೆ?: 2 ರೀತಿಯಲ್ಲಿ ಮುತ್ತುಗಳ ಮಾರಾಟ ನಡೆಯುತ್ತದೆ. ಮೊದಲನೆಯದ್ದು ಒಪ್ಪಂದ ಮಾರುಕಟ್ಟೆ. ಇಲ್ಲಿ ಕೃಷಿಕರು ಕೇವಲ ಮುತ್ತುಗಳ ಕೃಷಿ ಮಾಡುವುದಷ್ಟೇ ಇರುತ್ತೆ. ಚಿಪು್ಪಗಳನ್ನು ಪಾಂಡ್​ಗೆ ಬಿಡುವುದರಿಂದ ಹಿಡಿದು ಕಟಾವು ಮಾಡಿ ತೆಗೆದುಕೊಂಡು ಹೋಗುವವರೆಗೂ ಕಂಪನಿಯೇ ಇರುತ್ತೆ. ಇಲ್ಲಿ ಕೃಷಿಕರಿಗೆ ರಿಸ್ಕ್ ಕಡಿಮೆ. ಆದರೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಸಾಕಷ್ಟು ಜಾಗೃತರಾಗಿರಬೇಕು. ಎರಡನೆಯದ್ದು ಸ್ವಂತ ಮಾರುಕಟ್ಟೆ. ಇದರಲ್ಲಿ ಚಿಪ್ಪುಗಳನ್ನು ತರುವುದರಿಂದ ಹಿಡಿದು ಅವುಗಳನ್ನು ಪಾಂಡ್​ಗೆ ಬಿಟ್ಟು ಕಟಾವು ಮಾಡುವರೆಗೂ ನೀವೇ ಇರುತ್ತೀರಿ. ಇಲ್ಲಿ ರಿಸ್ಕ್ ಹೆಚ್ಚು. ಸೂಕ್ತ ಅನುಭವ ಮತ್ತು ಜ್ಞಾನ ಮುಖ್ಯ. ಮಾರಾಟ ಮಾಡುವಾಗಲೂ ಕೂಡ ನೀವೂ ಮಾರ್ಕೆಟಿಂಗ್ ಮಾಡಬೇಕಾಗುತ್ತೆ. ಇಲ್ಲಿ ಕೃಷಿಕರೇ ನೇರವಾಗಿ ಪ್ರತಿಯೊಂದನ್ನು ಮಾಡುವುದರಿಂದ ಸಂಪೂರ್ಣ ಲಾಭಾಂಶ ಇವರ ಕೈ ಸೇರುತ್ತೆ.

ಸರ್ಕಾರದ ಸಹಾಯ: ದೇಶದಲ್ಲಿ ಮುತ್ತಿನ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿ ಮಾಡಿದೆ. ಸಿಹಿನೀರಿನ ಮುತ್ತುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸರ್ಕಾರ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಪಾಂಡ್ ನಿರ್ವಣಕ್ಕೆ ಶೇ.50 ಸಹಾಯಧನ ನೀಡುತ್ತಿದೆ. ಇದಕ್ಕೆ ಸೂಕ್ತ ದಾಖಲೆಗಳನ್ನ ನೀಡಬೇಕು.

ಮುತ್ತಿನ ಕೃಷಿಯಿಂದ ಲಕ್ಷ ಸಂಪಾದನೆ ಹೇಗೆ?: ಭಾರತದಲ್ಲಿ 52 ರೀತಿಯ ಕಪ್ಪೆ ಚಿಪ್ಪುಗಳು ಇದ್ದರೂ, ಅದರಲ್ಲಿ ಕೇವಲ 3 ಕಪ್ಪೆಚಿಪ್ಪುಗಳಿಂದ ಮಾತ್ರ ಸಿಹಿ ನೀರಿನಲ್ಲಿ ಮುತ್ತಿನ ಕೃಷಿ ಮಾಡಬಹುದು. ಅದರಲ್ಲಿ ರೌಂಡ್ ಮತ್ತು ಡಿಸೈನ್ ಮುತ್ತುಗಳನ್ನು ಕೃಷಿ ಮಾಡಬಹುದು. ಇದರಲ್ಲಿ ರೌಂಡ್ ಮುತ್ತು 3 ವರ್ಷಕ್ಕೆ ಡಿಸೈನ್ ಮುತ್ತುಗಳು 1 ವರ್ಷಕ್ಕೆ ಮಾರಾಟ ಮಾಡುವುದಕ್ಕೆ ಸಿದ್ಧವಾಗುತ್ತವೆ. ಕಡಿಮೆ ಜಾಗದಲ್ಲಿ ಕೃಷಿ ಮಾಡಿ ಹೆಚ್ಚು ಸಂಪಾದನೆ ಮಾಡಬಹುದಾದ ಕೃಷಿಗಳಲ್ಲಿ ಮುತ್ತಿನ ಕೃಷಿ ಕೂಡ ಒಂದು.

ಉದಾಹರಣೆಗೆ: 30 ಸಾವಿರ ಡಿಸೈನ್ ಮುತ್ತುಗಳ ಕೃಷಿ ಮಾಡುವುದಕ್ಕೆ ಮುಂದಾದ್ರೆ ಇಲ್ಲಿ ಪ್ರತಿ ಮುತ್ತಿಗೆ 90 ರೂ. ಖರೀದಿ ವೆಚ್ಚ ಇರುತ್ತೆ, ಒಟ್ಟು ಮುತ್ತುಗಳ ಖರೀದಿ ವೆಚ್ಚ 27 ಲಕ್ಷ ಆಗುತ್ತೆ. ಇದರಲ್ಲಿ ಮೋರ್ಟಾಲಿಟಿ ಸಂಖ್ಯೆ 50% ಅಂದ್ರೆ 15 ಸಾವಿರ ತೆಗೆದ್ರು 15 ಸಾವಿರ ಮುತ್ತುಗಳು ಉಳಿಯುತ್ತವೆ. ಇದರಲ್ಲಿ ಒಂದು ಮುತ್ತು 350 ರೂ.ಗೆ ಮಾರಾಟವಾದ್ರೂ 52.5 ಲಕ್ಷ ಬರುತ್ತೆ. ಇನ್ನು ಮೊರ್ಟಾಲಿಟಿಯ ಚಿಪ್ಪುಗಳಿಗೂ ಕೂಡ 50 ರೂ. ವಿಮೆ ಸಿಗುತ್ತೆ. ಇದರಲ್ಲಿ 15 ಸಾವಿರ ಚಿಪ್ಪುಗಳಿಗೆ 7.5ಲಕ್ಷ ದೊರೆಯುತ್ತೆ. ಒಟ್ಟು 30 ಸಾವಿರ ಮುತ್ತುಗಳಿಂದ ವರ್ಷಕ್ಕೆ 60 ಲಕ್ಷ ಆದಾಯ ಬರುತ್ತೆ. ಚಿಪ್ಪುಗಳಿಗೆ ಫುಡ್ ಆಗಿ ಸ್ಪಿರುಲೀನ ನೀಡಬೇಕು. ಅದರ ಖರ್ಚು 18,000. ಮುತ್ತುಗಳ ಚಿಪ್ಪುಗಳನ್ನು ಪರಿಶೀಲನೆ ಮಾಡಿಸಬೇಕು. ಅದಕ್ಕೆ ತಜ್ಞರಿಗೆ ತಗುಲುವ ಖರ್ಚು 30 ಸಾವಿರ. ಇನ್ನು ಓರ್ವ ಸ್ಥಿರ ಕಾರ್ವಿುಕ ಬೇಕು. ತಿಂಗಳ ಕೂಲಿ 10 ಸಾವಿರದಂತೆ ವರ್ಷಕ್ಕೆ 1,20,000 ನೀಡಬೇಕು. ಈ ಖರ್ಚು ತೆಗೆದ್ರು ವರ್ಷಕ್ಕೆ 31 ಲಕ್ಷದ 32 ಸಾವಿರ ಲಾಭ. ಇನ್ನು ರೌಂಡ್ ಮುತ್ತುಗಳು ಅಂಥ ಬಂದಾಗ ಅವುಗಳಿಗೆ ಬೇಡಿಕೆ ಹಾಗೂ ಬೆಲೆ ಜಾಸ್ತಿ ಇರುತ್ತೆ. ಕಟಾವು ಮಾಡುವುದಕ್ಕೆ 3 ವರ್ಷ ಕಾಯಬೇಕು. ಡಿಸೈನ್ ಮುತ್ತುಗಳ ಜೊತೆಗೆ ಅದನ್ನು ಅಲ್ಪ ಪ್ರಮಾಣದಲ್ಲಿ ಮಾಡಿಕೊಂಡರೆ ರೈತರಿಗೆ ಉತ್ತಮ ಆದಾಯ ಫಿಕ್ಸ್.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸು ವವರಿಗೆ ffreedom appನಲ್ಲಿ ಸುವರ್ಣ ಅವ ಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಕೊಡಿ - 02262116777

ffreedom appನಲ್ಲಿ ಮುತ್ತಿನ ಕೃಷಿ ಕೋರ್ಸ್: ಪ್ರತಿಯೊಬ್ಬರು ಆರ್ಥಿಕ ಸ್ವಾತಂತ್ರ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ ffreedom app ಮುತ್ತಿನ ಕೃಷಿ ಸಂಬಂಧಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ಮುತ್ತಿನ ಕೃಷಿ ಕೋರ್ಸ್ ಸಿದ್ಧಪಡಿಸುತ್ತಿದೆ. ಈ ಕೋರ್ಸ್ ಅನ್ನು ಹಲವು ವರ್ಷಗಳಿಂದ ಮುತ್ತಿನ ಕೃಷಿ ಮಾಡುತ್ತಿರುವ ವಿಜಯಪುರ ಜಿಲ್ಲೆಯ ತಿಕೋಟಾ ನಿವಾಸಿ ಡಾ. ಬಾಬುಸಾಬ್ ಇಸ್ಮಾಯಿಲ್ ಜತ್ತಿ ಮಾರ್ಗದರ್ಶನ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಕೋರ್ಸ್ ಅನ್ನು ಅನಾವರಣ ಮಾಡುತ್ತಿದೆ. ಕೋರ್ಸ್ ವೀಕ್ಷಿಸಲು ಈಗಲೇ ffreedom app ಡೌನ್​ಲೋಡ್ ಮಾಡಿ. ಇದರ ಜೊತೆಗೆ ನೀವು ಬಿಸಿನೆಸ್, ಕೃಷಿ ಮತ್ತು ಹಣಕಾಸಿಗೆ ಸಂಬಂಧಿಸಿದ 1000ಕ್ಕೂ ಹೆಚ್ಚು ಕೋರ್ಸ್​ಗಳನ್ನು 6 ಭಾಷೆಯಲ್ಲಿ ವೀಕ್ಷಿಸಬಹುದು.

ಕೋರ್ಸ್​ನಲ್ಲಿ ಏನೇನಿದೆ?

  • ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ
  • ಅಗತ್ಯ ಬಂಡವಾಳ, ನೋಂದಣಿ, ಪರವಾನಗಿ ಮತ್ತು ಸ್ಥಳ
  • ಸೆಟ್ ಅಪ್ ಪರ್ಲ್ಸ್ ಫಾರಂ ಸಲಕರಣೆ ಮತ್ತು ನೀರು
  • ಸಿಂಪಿ ಆಯ್ಕೆ ಮತ್ತು ಸಂತಾನೋತ್ಪತ್ತಿ
  • ಆಹಾರ ಮತ್ತು ರೋಗ ನಿರ್ವಹಣೆ
  • ಮುತ್ತಿನ ಕಟಾವು ಮತ್ತು ಮಾರ್ಕೆಟಿಂಗ್
  • ಮುತ್ತಿನ ಕೃಷಿಯಲ್ಲಿ ಯಾವೇಲ್ಲಾ ಸವಾಲುಗಳಿವೆ
  • ಯುನಿಟ್ ಎಕನಾಮಿಕ್ಸ್
  • ಮಾರ್ಗದರ್ಶಕರ ಕಿವಿಮಾತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net