

ಮೊದಲೆಲ್ಲಾ ಮನೆ ಎದುರಲ್ಲಿ ಅಥವಾ ಹಿತ್ತಲಿನಲ್ಲಿ ಸಣ್ಣ ಕೈ ತೋಟ ಇರಲೇಬೇಕಿತ್ತು. ಮನೆಗೆ ಬೇಕಾದ ಸೊಪ್ಪು, ತರಕಾರಿ, ಪೂಜೆಗೆ ಬೇಕಾದ ಹೂವನ್ನು ಜನರು ತಾವೇ ಬೆಳೆದುಕೊಳ್ಳುತ್ತಿದ್ದರು. ಆದರೆ ಕಾಲ ಬದಲಾದಂತೆ ಕೈ ತೋಟ ಮಾಡಬೇಕು ಎನ್ನುವ ಆಸಕ್ತಿ ಇದ್ದರೂ ಜಾಗದ ಕೊರತೆ ಎದುರಾಯಿತು. ಅತಿಯಾದ ಜನದಟ್ಟಣೆಯಿಂದ ಮಹಾನಗರಗಳಲ್ಲಿ ಆಕಾಶದೆತ್ತರಕ್ಕೆ ಕಟ್ಟಡಗಳನ್ನು ಕಟ್ಟುವಂತಹ ಸ್ಥಿತಿ ನಿರ್ವಣವಾಯಿತು. ಇದೆಲ್ಲದರ ಪರಿಣಾಮ ಈಗ ಟೆರೇಸ್ ಗಾರ್ಡನ್ ಅಥವಾ ತಾರಸಿ ತೋಟದ ಪರಿಕಲ್ಪನೆ ಜೀವ ಪಡೆದುಕೊಂಡಿದೆ. ಮನೆಯ ಬಾಲ್ಕನಿ, ಟೆರೇಸ್ಗಳ ಮೇಲೆಯೇ ಕೈ ತೋಟ, ಕಿಚನ್ ಗಾರ್ಡನ್ಗಳು ಹುಟ್ಟಿಕೊಳ್ಳುತ್ತಿವೆ. ಟೆರೇಸ್ ಗಾರ್ಡನ್ ಹವ್ಯಾಸ ಎನ್ನುವುದರ ಜತೆಗೆ ಒಂದು ಉದ್ಯಮವಾಗಿಯೂ ರೂಪುಗೊಳ್ಳುತ್ತಿದೆ. ಕೆಲವರು ತಮಗೆ ಬೇಕಾದ ಹಣ್ಣು, ತರಕಾರಿ, ಹೂವುಗಳನ್ನು ಮನೆಯ ತಾರಸಿ ಮೇಲೆ ಬೆಳೆದುಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದರೆ ಮತ್ತೆ ಕೆಲವರು ಮನೆಯ ತಾರಸಿಯಲ್ಲಿ ಬೆಳೆದ ಸಾವಯವ ಪದಾರ್ಥಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ.
ಟೆರೇಸ್ ಗಾರ್ಡನ್ ಎಂದರೇನು?: ಮನೆಯ ತಾರಸಿಯ ಜಾಗದಲ್ಲಿ ವೈವಿಧ್ಯಮಯ ಹೂವು, ಹಣ್ಣು, ತರಕಾರಿ ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸಿ ತಾವೂ ಅನುಕೂಲ ಪಡೆಯುವ ಜತೆಗೆ ಸ್ವಚ್ಛ ಪರಿಸರಕ್ಕೂ ಕೊಡುಗೆ ನೀಡುವ ಪದ್ಧತಿಯೇ ಟೆರೇಸ್ ಗಾರ್ಡನ್. ತಾರಸಿ ತೋಟ, ಕಿಚನ್ ಗಾರ್ಡನ್, ಮಾಳಿಗೆ ತೋಟ, ತಾರಸಿ ತೋಟಗಾರಿಕೆ ಎಂಬೆಲ್ಲಾ ಹೆಸರುಗಳಿಂದ ಈ ಪರಿಕಲ್ಪನೆ ಪರಿಚಿತವಾಗುತ್ತಿದೆ. ಹಿಂದಿನ ಕಾಲದ ಹಿತ್ತಲು ಅಥವಾ ಕೈ ತೋಟವೇ ಹೊಸ ಜಮಾನದ ಟೆರೇಸ್ ಗಾರ್ಡನ್. ಈ ಪದ್ಧತಿ ಬಹಳ ಹಿಂದಿನಿಂದಲೂ ರೂಢಿಯಲ್ಲಿದ್ದರೂ 1995ರ ನಂತರದಲ್ಲಿ ಬೆಂಗಳೂರಿನಲ್ಲಿ ಮುನ್ನೆಲೆಗೆ ಬಂತು. ಸದ್ಯ ಗಾರ್ಡನ್ ಸಿಟಿಯಲ್ಲಿ 50 ಸಾವಿರಕ್ಕೂ ಹೆಚ್ಚು ಟೆರೇಸ್ ಗಾರ್ಡನ್ಗಳಿವೆ. ಸಣ್ಣ ಪಟ್ಟಣಗಳಲ್ಲೂ ಈ ಪದ್ಧತಿ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ಹವ್ಯಾಸದ ಜತೆ ವಾಣಿಜ್ಯವಾಗಿಯೂ ಟೆರೇಸ್ ಗಾರ್ಡನ್ಗಳು ರೂಪುಗೊಳ್ಳುತ್ತಿವೆ.
ಹೆಚ್ಚು ಬಂಡವಾಳ ಬೇಕಿಲ್ಲ: ಸಾಕಷ್ಟು ಬಂಡವಾಳವೇನೂ ಬೇಕಿರದ ಈ ಟೆರೇಸ್ ಗಾರ್ಡನ್ಗಳು ಉತ್ತಮ ಆರೋಗ್ಯ ನೀಡುವುದರ ಜತೆಗೆ ಹಣ ಗಳಿಕೆಯಲ್ಲೂ ಸಾಥ್ ನೀಡ್ತಿವೆ. ಹೇಗೆ ಎಂದಿರಾ? ನಿಮ್ಮದೇ ಟೆರೇಸ್ನಲ್ಲಿ ಪ್ಲಾಸ್ಟಿಕ್ ಬಕೆಟ್ಗಳು, ಪಾಲಿಥಿನ್ ಕವರ್ಗಳು ಅಥವಾ ಪಾಟ್ಗಳಲ್ಲಿ ಗಿಡ ಬೆಳೆಸಬಹುದು. ನೀವು ಗೊಬ್ಬರದ ತಲೆಬಿಸಿ ಮಾಡ್ಕೊಳ್ಳೋ ಅಗತ್ಯಾನೂ ಇಲ್ಲ. ಕಾರಣ, ಉಳಿದ ತರಕಾರಿ, ಕೊಳೆತ ಹಣ್ಣು, ಸೊಪ್ಪು ಅಥವಾ ಅಡುಗೆ ಮನೆಯ ತ್ಯಾಜ್ಯದಿಂದ ಟೆರೇಸ್ ಗಾರ್ಡನ್ಗೆ ಬೇಕಾಗುವ ಗೊಬ್ಬರ ರೆಡಿಯಾಗುತ್ತೆ. ಹೀಗಾಗಿ ಬಹಳ ಕಡಿಮೆ ಅಥವಾ ಯಾವುದೇ ಬಂಡವಾಳವಿಲ್ಲದೆ ನೀವೂ ಕೂಡ ಸುಲಭವಾಗಿ ಟೆರೇಸ್ ಗಾರ್ಡನ್ ಆರಂಭಿಸಬಹುದು.
ದುಡಿಮೆಗೂ ಇದೆ ಅವಕಾಶ: ಟೆರೇಸ್ ಗಾರ್ಡನ್ ಹವ್ಯಾಸಕ್ಕಷ್ಟೇ ಅಲ್ಲ, ಇದರಲ್ಲಿ ದುಡಿಮೆಗೂ ಅವಕಾಶವಿದೆ. ರಾಸಾಯನಿಕ ಇಲ್ಲದೆ ಬೆಳೆಯುವ ತರಕಾರಿಗೆ ಮಾರ್ಕೆಟ್ನಲ್ಲಿ ಒಳ್ಳೆಯ ಡಿಮ್ಯಾಂಡ್ ಇದೆ. ನಿಮ್ಮ ಮನೆಗೆ ಸಾಕಾಗುವಷ್ಟು ಬೆಳೆಯುವ ಜತೆಗೆ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ವಾಣಿಜ್ಯ ರೂಪದಲ್ಲಿ ನೀವು ಟೆರೇಸ್ ಗಾರ್ಡನ್ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದಿಸಬಹುದು. ಇನ್ನು ಟೆರೇಸ್ ಗಾರ್ಡನ್ ಮಾಡಿಕೊಡುವ ಮತ್ತು ಅದಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಒಂದು ಸಂಸ್ಥೆಯನ್ನು ನೀವು ಕಟ್ಟಿದರೆ ಅದನ್ನು ಉದ್ಯಮದ ರೂಪದಲ್ಲಿ ನಡೆಸಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು.
ನಿಮಗೆ ಬೇಕಾದ ತರಕಾರಿ ನೀವೇ ಬೆಳೆಯಿರಿ: ತಂತ್ರಜ್ಞಾನದ ಸಹಾಯದಿಂದ ಕೂತಲ್ಲೇ ನಮಗೆ ಬೇಕಾದ ಹಣ್ಣು, ತರಕಾರಿ, ಸೊಪ್ಪು ಎಲ್ಲವೂ ದೊರೆಯುತ್ತಿರೋದೇನೊ ಸರಿ. ಆದರೆ ಅದರಿಂದ ನಮಗೆ ಎಷ್ಟರ ಮಟ್ಟಿಗೆ ಪೌಷ್ಟಿಕಾಂಶ ದೊರೆಯುತ್ತಿದೆ? ನಾವೇ ಮಾರುಕಟ್ಟೆಗೆ ಹೋಗಿ ತಾಜಾ ತರಕಾರಿ ಕೊಂಡು ತರ್ತೀವಿ ಅಂದುಕೊಂಡ್ರೂ ಅತಿಯಾದ ರಾಸಾಯನಿಕ ಬಳಕೆಯಿಂದ ಅದು ತನ್ನ ಸತ್ವವನ್ನು ಕಳೆದುಕೊಂಡಿರುತ್ತೆ ಅನ್ನೋದು ಅಷ್ಟೇ ನಿಜ. ಇದಕ್ಕೆ ಪರಿಹಾರವೇ ಟೆರೇಸ್ ಗಾರ್ಡನ್. ನಿಮ್ಮ ಮನೆಯ ತಾರಸಿಯಲ್ಲಿ ನಿಮಗೆ ಬೇಕಾದ ಹಣ್ಣು, ತರಕಾರಿ, ಸೊಪ್ಪು ಎಲ್ಲವನ್ನೂ ನೀವೇ ನಿಮ್ಮ ಕೈಯಾರೆ ಬೆಳೆದು, ಬೇಕು ಅಂದಾಗ ಅವನ್ನು ಕಿತ್ತು ಅಡುಗೆ ತಯಾರಿಸಿ ತಿನ್ನೋದ್ರಲ್ಲಿ ಇರುವ ಸುಖವೇ ಬೇರೆ.
ಸ್ಥಳದ ಆಯ್ಕೆ: ನಿಮ್ಮ ಟೆರೇಸ್ ಎಷ್ಟರಮಟ್ಟಿಗೆ ತೂಕವನ್ನು ತಡೆಯಬಲ್ಲದು ಎಂಬುದನ್ನು ಪರಿಶೀಲಿಸಿ. ಬೆಳೆಗಳ ಆಯ್ಕೆ: ನಿಮ್ಮ ಪ್ರದೇಶಗಳಿಗೆ ಅನುಗುಣವಾಗಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ನೀರಿನ ಅಗತ್ಯ: ಬೆಳೆಗೆ ಅನುಗುಣವಾಗಿ ನೀರು ಪೂರೈಕೆ ಇರಲಿ. ಫೈನಾನ್ಷಿಯಲ್ ಫ್ರೀಡಂ ಆಪ್ನಲ್ಲಿ ಟೆರೇಸ್ ಗಾರ್ಡನ್ ಕೋರ್ಸ್ ಟೆರೇಸ್ ಗಾರ್ಡನ್ ಮಾಡೋದು ಹೇಗೆ ಎನ್ನುವುದದನ್ನು ಕಲಿಸುವುದಕ್ಕಾಗಿ ಫೈನಾನ್ಷಿಯಲ್ ಫ್ರೀಡಂ ಆಪ್ನಲ್ಲಿ ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್ ರೂಪಿಸಲಾಗಿದೆ. ಟೆರೇಸ್ ಗಾರ್ಡನ್ ಮಾಡಿ ಸಕ್ಸಸ್ ಆಗಿರೋ ಮೂವರು ತಜ್ಞರು ಈ ಕೋರ್ಸ್ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಟೆರೇಸ್ ಗಾರ್ಡನ್ಗೆ ಎಷ್ಟು ಸಮಯ ಮೀಸಲಿಡಬೇಕು, ಮಣ್ಣಿನ ಆಯ್ಕೆ ಹೇಗಿರಬೇಕು, ನೀರಿನ ಅಗತ್ಯ ಎಷ್ಟು, ಹಸಿರು ಮನೆ ಏನಾದ್ರು ಬೇಕಾಗಬಹುದಾ, ಇದರಿಂದ ಹೆಚ್ಚು ಗಳಿಸಬೇಕು ಅಂದರೆ ಏನು ಮಾಡ್ಬೇಕು... ಇವೆಲ್ಲದರ ಕಂಪ್ಲೀಟ್ ಮಾಹಿತಿಯನ್ನು ಕೋರ್ಸ್ನಲ್ಲಿ ನೀಡಲಾಗಿದೆ. ಹಾಗಾದ್ರೆ ಇನ್ನೇಕೆ ತಡ, ಫೈನಾನ್ಷಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ ‘ಟೆರೇಸ್ ಗಾರ್ಡನ್ ಮಾಡಿ ಕೈ ತುಂಬಾ ಸಂಪಾದಿಸಿ!’ ಎಂಬ ಕೋರ್ಸ್ ವೀಕ್ಷಿಸಿ. ನೀವು ಟೆರೇಸ್ ಗಾರ್ಡನ್ ಮಾಡೋಕೆ ಸಜ್ಜಾಗಿ.