

ಕೃಷಿ ಹಣಕಾಸು ಮತ್ತು ವೈಯಕ್ತಿಕ ಹಣಕಾಸು ನಿರ್ವಹಣೆ ಪ್ರತ್ಯೇಕಗೊಳಿಸಿ: ನಮ್ಮ ಬಹುತೇಕ ರೈತರಲ್ಲಿ ಆರ್ಥಿಕ ಶಿಸ್ತು ಕಡಿಮೆ. ಕೃಷಿ ಹಣಕಾಸು ನಿರ್ವಹಣೆ ಮತ್ತು ವೈಯಕ್ತಿಕ ಹಣಕಾಸು ನಿರ್ವಹಣೆಯನ್ನು ಅವರು ಪ್ರತ್ಯೇಕಿಸಿ ನೋಡುವುದೇ ಇಲ್ಲ. ಯಾವುದಾದರೊಂದು ಬೆಳೆಯಲ್ಲಿ ಬಂಪರ್ ಲಾಭ ಬಂದಾಗ ಅದನ್ನು ಉಳಿತಾಯ ಮಾಡಿ ಭವಿಷ್ಯದ ಅಗತ್ಯಗಳಿಗೆ ಇಟ್ಟುಕೊಳ್ಳುವ ಬದಲು ಬಂದಿರುವುದೆಲ್ಲವನ್ನೂ ಅಳತೆ, ಅಂದಾಜಿಲ್ಲದೆ ಖರ್ಚು ಮಾಡಿ, ಮುಂದೊಂದು ದಿನ ಕೈಯಲ್ಲಿ ದುಡ್ಡಿಲ್ಲ ಎಂದು ಕೂತಿರುವ ಉದಾಹರಣೆ ಸಾಕಷ್ಟಿವೆ. ನನಗೆ ಗೊತ್ತಿರುವ ರೈತರೊಬ್ಬರು ಕೆಲ ವರ್ಷಗಳ ಹಿಂದೆ ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಬೆಳೆದು, ಒಳ್ಳೆಯ ರೇಟು ಕೂಡ ಸಿಕ್ಕಿದ್ದರಿಂದ ಸುಮಾರು 50 ಲಕ್ಷ ಲಾಭ ಗಳಿಸಿದ್ದರು. ಅಷ್ಟು ಲಾಭ ಸಿಕ್ಕಾಗ ಅವರು ಯಾವುದೇ ಯೋಚನೆ ಮಾಡದೆ ಹೊಸ ಕಾರು ಖರೀದಿಸಿದರು. ಹೊಸ ಮನೆ ಕಟ್ಟಿಸಲು ಉತ್ತಮ ಸ್ಥಿತಿಯಲ್ಲೇ ಇದ್ದ ಹಳೆಯ ಮನೆ ಕೆಡವಿದರು. ಮನೆಯ ನಿರ್ಮಾಣ ಅಂದಾಜು, ಬಂದ ಲಾಭಕ್ಕಿಂದ ಜಾಸ್ತಿ ಆದ ಕಾರಣ ಮತ್ತೆ ಸಾಲ ಮಾಡಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು. ನೀವೇ ಯೋಚನೆ ಮಾಡಿ ಇಲ್ಲಿ ರೈತ ಅಂದಾಜು ಮಾಡಿ ಯೋಜನೆ ರೂಪಿಸಿ ಖರ್ಚು ಮಾಡಿದ್ದರೆ ಯಾವುದೇ ಸಾಲ ಮಾಡುವ ಅಗತ್ಯ ಬೀಳುತ್ತಿರಲಿಲ್ಲ. ಅಷ್ಟು ದೊಡ್ಡ ಕಾರಿನ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯವೇ? ಹೊಸ ಮನೆ ತುರ್ತು ಅಗತ್ಯವೇ ಎಂದು ಆಲೋಚನೆ ಮಾಡಿದ್ದರೆ ಆತ ಆರ್ಥಿಕ ಮುಗ್ಗಟ್ಟಿಗೆ ಸಿಲುಕುತ್ತಿರಲಿಲ್ಲ. ಅದಕ್ಕೇ ನಾನು ಹೇಳೋದು ರೈತನಿಗೂ ಆರ್ಥಿಕ ಶಿಸ್ತು ಬಹಳ ಮುಖ್ಯ ಅಂತ. ರೈತರು ಹೊಸ ಕಾರು ಖರೀದಿ ಮಾಡಬಾರದು, ಹೊಸ ಮನೆ ಕಟ್ಟಿಸಬಾರದು ಎಂದು ನಾನು ಇಲ್ಲಿ ಹೇಳುತ್ತಿಲ್ಲ. ಬದಲಿಗೆ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಚಿಂತನೆ ಅಗತ್ಯ ಎನ್ನುವುದನ್ನು ಮಾತ್ರ ತಿಳಿಯಸಲು ಬಯಸುತ್ತಿದ್ದೇನೆ. ಸರ್ಕಾರಿ ಉದ್ಯೋಗಿಗಳು, ಖಾಸಗಿ ಉದ್ಯೋಗಿಗಳು ಪ್ರತಿ ತಿಂಗಳು ಸಂಬಳ ಪಡೆಯುವ ರೀತಿಯಲ್ಲೇ ರೈತ ತಾನು ಹೊಲ/ತೋಟದಲ್ಲಿ ದುಡಿಯುವುದಕ್ಕೆ ಪ್ರತಿ ತಿಂಗಳು ಇಂತಿಷ್ಟು ಸಂಬಳ ಎಂಬ ನಿಯಮ ಹಾಕಿಕೊಳ್ಳಬೇಕು. ಆ ನಿಯಮದಂತೆ ಸಂಬಳ ತೆಗೆದುಕೊಂಡು ಆ ಹಣದಲ್ಲಿ ಕುಟುಂಬದ ಖರ್ಚುವೆಚ್ಚಗಳನ್ನು ನಿಭಾಯಿಸಬೇಕು. ಆಗ ರೈತರ ಬದುಕು ಹಸನಾಗುತ್ತದೆ. ಕೃಷಿಯಿಂದ ಬಂದ ಲಾಭವನ್ನು ಕೃಷಿ ಪ್ರಗತಿಗೆ ಬಳಸಿದರೆ ವ್ಯವಸಾಯದಲ್ಲಿ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ.
ರೈತರು ಆದಾಯ ಹೆಚ್ಚಿಸಿಕೊಳ್ಳೋದು ಹೇಗೆ?: ರೈತರು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರೆ ತೋಟದ ಉತ್ಪನ್ನಗಳನ್ನು ಬೆಳೆದು ಮಾರಾಟ ಮಾಡಿದರೆ ಸಾಲದು. ಮೌಲ್ಯವರ್ಧನೆ ಅಂದರೆ ವ್ಯಾಲ್ಯೂ ಅಡಿಷನ್ ಮಾಡಬೇಕು. ಇತ್ತೀಚೆಗೆ ಟೊಮ್ಯಾಟೊ ಬೆಲೆ ಕೆ.ಜಿ.ಗೆ 100 ರೂ. ಆಗಿದ್ದು ನಮಗೆಲ್ಲ ತಿಳಿದಿದೆ. ಆದರೆ, ಅದೇ ಟ್ಯೊಮ್ಯಾಟೊ ಕೆಲವು ಸಲ ಕೆ.ಜಿಗೆ. 2-3 ರೂ.ಗೆ ಮಾರಾಟವಾದದ್ದೂ ಇದೆ. ಟ್ಯೊಮ್ಯಾಟೊಗೆ ಬೆಲೆ ಹೆಚ್ಚಿಗೆ ಇದ್ದಾಗ ಲಾಭ ಮಾಡಿಕೊಂಡು, ಬೆಲೆ ತೀರಾ ಕಡಿಮೆ ಇದೆ ಅಂದಾಗ ಟೊಮ್ಯಾಟೊ ಪಲ್ಪ್, ಟ್ಯೊಮ್ಯಾಟೊ ಸಾಸ್, ಟೊಮ್ಯಾಟೊ ಪೌಡರ್, ಟೊಮ್ಯಾಟೋ ಕೆಚಪ್ ಮಾಡಿ ಹೆಚ್ಚು ಹಣ ಗಳಿಸಬಹುದಲ್ಲವೇ? ಈ ತಂತ್ರಜ್ಞಾನಗಳೆಲ್ಲ ಸುಲಭದಲ್ಲಿ ರೈತರಿಗೆ ಸಿಗುತ್ತವೆಯೇ ಎಂದು ನೀವು ಕೇಳಬಹುದು. ಹೌದು, ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್) ಬಳಿ ಈ ತಂತ್ರಜ್ಞಾನಗಳಿವೆ. ಅವರ ನೆರವು ಪಡೆದು ನೀವು ಇವೆಲ್ಲವನ್ನು ಮಾಡಲು ಸಾಧ್ಯವಿದೆ. ಟೊಮ್ಯಾಟೊ ಒಂದು ಉದಾಹರಣೆ ಅಷ್ಟೇ. ಇದೇ ರೀತಿಯಲ್ಲಿ ಹಲವು ತಂತ್ರಜ್ಞಾನಗಳು ಐಸಿಎಆರ್ನಲ್ಲಿ ಲಭ್ಯವಿವೆ. ರೈತರ ಆದಾಯ ಹೆಚ್ಚಳಕ್ಕೆ ಮೌಲ್ಯವರ್ಧನೆ ಒಂದು ಉದಾಹರಣೆ ಅಷ್ಟೇ. ರೈತರು ಮಿಶ್ರ ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ, ಕೃಷಿ ಆಧಾರಿತ ಬಿಸಿನೆಸ್ಗಳನ್ನು ಕಟ್ಟುವುದರಿಂದ, ಕೃಷಿ ಉಪ ಕಸುಬುಗಳನ್ನು ಮಾಡುವುದರಿಂದ, ಉದ್ಯೋಗದಲ್ಲಿರುವವರು ನಿಯಮಿತವಾಗಿ ಹೂಡಿಕೆ ಮಾಡುವ ರೀತಿಯಲ್ಲೇ ರೈತರೂ ಹಣಕಾಸಿನ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ಹೆಚ್ಚಿಸಿಕೊಳ್ಳಬಹುದು. ಇದು ಆಗಬೇಕು ಅಂದ್ರೆ ರೈತ, ತನ್ನದೂ ಒಂದು ಫುಲ್ ಟೈಂ ಉದ್ಯೋಗ ಎಂದು ಭಾವಿಸಿ ಯೋಜಿತವಾಗಿ ಕಾರ್ಯಪ್ರವೃತ್ತನಾಗಬೇಕು ಅಷ್ಟೆ.
ರೈತರು ಕಡಿಮೆ ಬಡ್ಡಿಗೆ ಸಾಲ ಪಡೆಯವುದು ಹೇಗೆ? ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಲಾಭ ಪಡೆಯೋದು ಹೇಗೆ? ರೈತರಿಗೆ ಕಡಿಮೆ ಬೆಲೆಯಲ್ಲಿ ಸಿಗುವ ಇನ್ಶೂರೆನ್ಸ್ ಪ್ಲಾ್ಯನ್ಗಳು ಯಾವುವು? ರೈತರು ಕೃಷಿ ಖರ್ಚು ಕಡಿಮೆ ಮಾಡೋದು ಹೇಗೆ? ಕೃಷಿ ಜತೆ ಉಪ ಉದ್ಯಮಗಳನ್ನು ರೈತರು ಕಟ್ಟೋದು ಹೇಗೆ? ಹೀಗೆ ರೈತರ ಆದಾಯ ಹೆಚ್ಚಿಸುವ ಹಲವು ಸಲಹೆಗಳನ್ನು ಸಿ.ಎಸ್. ಸುಧೀರ್ ವೈಯಕ್ತಿಕವಾಗಿ ನೀಡಿ, ಮಾರ್ಗದರ್ಶನ ಮಾಡಿದ್ದಾರೆ. ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ಡೌನ್ಲೋಡ್ ಮಾಡಿ, ಹಣಕಾಸು ನಿರ್ವಹಣೆ ಕಲಿತು ಯಶಸ್ವಿ ರೈತರಾಗಿ.