

ಸಮಗ್ರ ಕೃಷಿ: ಕೃಷಿಯಲ್ಲಿ ರೈತರು ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟ ಸುಧಾರಿಸಲು ಈ ಕೃಷಿ ಪದ್ಧತಿ ತುಂಬಾ ಸಹಕಾರಿಯಾಗಿದೆ. ಅನಿಶ್ಚಿತ ಮಳೆ, ಹವಮಾನ ವೈಪರಿತ್ಯಗಳಿಂದ ಇಳುವರಿ ಕುಂಠಿತವಾಗುತ್ತಿದೆ. ರೈತರು ಏಕ ಬೆಳೆಯನ್ನು ಬೆಳೆಯದೆ, ಬಹು ಬೆಳೆಯನ್ನು ಬೆಳೆಯುವುದರ ಜತೆಗೆ ತಮ್ಮಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಯ ಉಪಕಸಬುಗಳಾದ ಕುರಿ, ಮೇಕೆ, ಕೋಳಿ, ಜೇನು ಮತ್ತು ಹೈನುಗಾರಿಕೆ ಮಾಡಿ ಆದಾಯ ಗಳಿಸುವುದೇ ಸಮಗ್ರ ಕೃಷಿ ಪದ್ಧತಿ. ಇದರಿಂದ ರೈತರು ವರ್ಷಪೂರ್ತಿ ಉದ್ಯೋಗ ಸೃಷ್ಟಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುವುದಕ್ಕೆ ಸಹಕಾರಿ.
ಸಮಗ್ರ ಕೃಷಿ ಪದ್ಧತಿ ವಿಧಗಳು: ಕಡಿಮೆ ಭೂಮಿಯಲ್ಲಿ ಹೆಚ್ಚಿಗೆ ಆದಾಯ ನೀಡಬಲ್ಲ ಹಾಗೂ ಪ್ರತಿಯೊಬ್ಬ ರೈತರೂ ಸುಲಭವಾಗಿ ಮಾಡಬಲ್ಲ ಈ ಸಮಗ್ರ ಕೃಷಿಯನ್ನು ಆಯಾ ಪ್ರದೇಶ ಮತ್ತು ಹವಮಾನ ಹಾಗೂ ಅಲ್ಲಿನ ಸಂಪನ್ಮೂಲಗಳ ಆಧಾರದ ಮೇಲೆ ಮಾಡಿಕೊಂಡರೇ ಉತ್ತಮ. ಅದರಲ್ಲಿ ಬೆಳೆ, ಜಾನುವಾರು, ಮರ, ತೋಟಗಾರಿಕೆ ಆಧಾರಿತ ಮತ್ತು ಮೀನುಗಾರಿಕೆ ಸಮಗ್ರ ಕೃಷಿ ಹೀಗೆ ನೋಡಬಹುದು. ರೈತರು ಆಯ್ಕೆ ಮಾಡಿಕೊಂಡು ಕೃಷಿ ಮಾಡಿದ್ರೆ ಹೆಚ್ಚು ಆದಾಯ ಪಡೆದುಕೊಳ್ಳಬಹುದು.
ದೇಶ ಮತ್ತು ರಾಜ್ಯದ ಕೃಷಿ ಪರಿಸ್ಥಿತಿ: ಕೃಷಿ ಪ್ರಧಾನ, ಹಾಗೂ ಕೃಷಿಯೇ ದೇಶದ ಆರ್ಥಿಕ ಬೆನ್ನೆಲುಬು ಆಗಿರುವ ಭಾರತದಲ್ಲಿ ಕೃಷಿ ಹಾಗೂ ರೈತರ ಪರಿಸ್ಥಿತಿ ನೋಡಿದ್ರೆ ಅಶ್ವರ್ಯ ಅನಿಸುತ್ತೆ. ನಮ್ಮಲ್ಲಿ ಸುಮಾರು ಶೇ.85 ರೈತರು ಕೇವಲ 5 ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿದವರಾಗಿದ್ದಾರೆ. ಕರ್ನಾಟಕದ ವಿಚಾರಕ್ಕೆ ಬಂದರೆ ಸುಮಾರು 1.25 ಮಿಲಿಯನ್ ಹೆಕ್ಟೆರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದೆ. ರಾಜ್ಯದಲ್ಲಿಯೂ ಕಡಿಮೆ ಭೂಮಿ ಹೊಂದಿರುವ ರೈತರೇ ಹೆಚ್ಚು. ಇದು ರೈತರ ಪಾಲಿಗೆ ದೊಡ್ಡ ಸವಾಲು. ಈ ಕಾರಣ ರೈತರು ಕೃಷಿ ಮಾಡುವ ಆಸೆ ಇಟ್ಟುಕೊಂಡಿದ್ದರೂ ಕಡಿಮೆ ಭೂಮಿಯ ಕಾರಣದಿಂದ ಕೃಷಿ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ಹೇಗೆ ಆದಾಯ ಗಳಿಸಬಹುದು?: ಈ ಕೃಷಿಯನ್ನು ಅತೀ ಸಣ್ಣ ಹಿಡುವಳಿದಾರರಿಂದ ಹಿಡಿದು ಶ್ರೀಮಂತ ರೈತರು ಮಾಡಬಹುದು, ಅಗತ್ಯವಾಗಿರುವುದು ನೀರು ಮತ್ತು ಜಾಗ ಅಷ್ಟೇ. ರೈತರಿಗೆ ಬೆಳೆ ವಿನ್ಯಾಸ ಮಾಡುವುದು ತಿಳಿದಿರಬೇಕು. ಉದಾಹರಣೆಗೆ: 2 ಎಕರೆ ಭೂಮಿ ಇದ್ದರೆ ಹೇಗೆ ವರ್ಷಕ್ಕೆ 10 ಲಕ್ಷ ರೂ. ಆದಾಯ ಗಳಿಸಬಹುದು ಎಂಬುದನ್ನು ನೋಡೋಣ.
2 ಎಕರೆ ಪ್ರದೇಶದಲ್ಲಿ 60 ತೆಂಗಿನ ಮರಗಳು ಇದ್ದರೆ ವರ್ಷಕ್ಕೆ ಒಂದು ತೆಂಗಿನ ಮರದಿಂದ 1 ಸಾವಿರ ರೂ.ನಂತೆ ವರ್ಷಕ್ಕೆ 60 ಸಾವಿರ ರೂ. ಆದಾಯ ದೊರೆಯುತ್ತೆ. ಸಪೋಟಾ 20 ಗಿಡಗಳು ಇದ್ದರೆ, 1 ಗಿಡದಿಂದ ವರ್ಷಕ್ಕೆ 1 ಸಾವಿರ ರೂ.ನಂತೆ 20 ಸಾವಿರ ರೂ., ಲಕ್ಷ್ಮಣ ಫಲ 5 ಮರಗಳಿಂದ ವರ್ಷಕ್ಕೆ 10 ಸಾವಿರ ರೂ., ಹಲಸು 4 ಮರದಿಂದ ವರ್ಷಕ್ಕೆ 40 ಸಾವಿರ ರೂ., ಮಾವು 3 ಮರದಿಂದ ಕನಿಷ್ಠ ಎಂದರೂ ವರ್ಷಕ್ಕೆ 5 ಸಾವಿರ ರೂ. ಹಾಗೂ ವಾಟರ್ ಆಪಲ್, ಅಂಜೂರ ಸೇರಿ ಇನ್ನಿತರ ಚಿಕ್ಕ-ಪುಟ್ಟ ಹಣ್ಣುಗಳು ಬೆಳೆದು ವರ್ಷಕ್ಕೆ ಕಡಿಮೆ ಅಂದರೂ 10 ಸಾವಿರ ರೂ. ಆದಾಯ ಪಡೆದುಕೊಳ್ಳಬಹುದು. ಅಂದರೆ ಕೇವಲ ಹಣ್ಣುಗಳಿಂದ ವರ್ಷಕ್ಕೆ 1.35 ಲಕ್ಷ ರೂ. ಪಡೆಯಬಹುದು. ಜತೆಗೆ ಬದನೆ, ಟೊಮ್ಯಾಟೊ, ಬೆಂಡೆ, ಮೂಲಂಗಿ ಹಾಗೂ ವಿವಿಧ ರೀತಿಯ ಸೊಪ್ಪುಗಳನ್ನು ಹಂತ ಹಂತವಾಗಿ ಬೆಳೆಯಬೇಕು. ಭತ್ತ ಹಾಗೂ ರಾಗಿ ಬೆಳೆದರೆ ಸರಿ ಸುಮಾರು ವರ್ಷಕ್ಕೆ ಕನಿಷ್ಠ 6.60 ಲಕ್ಷ ರೂ. ಆದಾಯ ಪಡೆಯಬಹುದು. ಇಷ್ಟೇ ಅಲ್ಲದೆ, 1 ಹಸು, 20 ಮೇಕೆ, 25 ಕೋಳಿ ಹಾಗೂ ಮೀನುಗಳನ್ನು ಸಾಕಣೆ ಮಾಡಿದರೆ ಅದರಿಂದ 1.80 ಲಕ್ಷ ರೂ. ಸಾವಿರ ಆದಾಯ ಸಾಧ್ಯ. ಅಂದರೆ ಕೇವಲ 2 ಎಕರೆ ಜಾಗದಲ್ಲಿ ವರ್ಷಕ್ಕೆ ಸರಿ ಸುಮಾರು 9.75 ಲಕ್ಷ ರೂ. ಆದಾಯ ಗಳಿಸಬಹುದು. ಇದರಲ್ಲಿ ಕಾರ್ವಿುಕರ ಖರ್ಚು 3 ಲಕ್ಷ ರೂ. ತೆಗೆದರೂ ವರ್ಷಕ್ಕೆ 6.75 ಲಕ್ಷ ರೂಪಾಯಿ ಲಾಭ ಪಡೆದುಕೊಳ್ಳಬಹುದು. ಇಷ್ಟು ಆದಾಯವನ್ನು ನಮ್ಮ ಮಾರ್ಗದರ್ಶಕರು ತಮಗಿರುವ 2 ಎಕರೆ ಜಾಗದಲ್ಲಿ ಗಳಿಸುತ್ತಿದ್ದಾರೆ.
ffreedom appನಲ್ಲಿ ಸಮಗ್ರ ಕೃಷಿ ಕೋರ್ಸ್: ಪ್ರತಿಯೊಬ್ಬ ರೈತರು ಆರ್ಥಿಕ ಶ್ರೀಮಂತಿಕೆಯನ್ನು ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ f್ಟಛಿಛಟಞ ಚಟಟ ಸಮಗ್ರ ಕೃಷಿ 2 ಎಕರೆಯಿಂದ ವರ್ಷಕ್ಕೆ 10 ಆದಾಯ ರೂ. ಗಳಿಸಿ ಕೋರ್ಸ್ ಅನಾವರಣ ಮಾಡಿದೆ. ರಾಮನಗರದ ಯಶಸ್ವಿ ರೈತ ಸಾಧಕರಾದ ದಾಸಪ್ಪ ಬನ್ನಿಕುಪ್ಪೆ ಮಾರ್ಗದರ್ಶನ ನೀಡುತ್ತಾರೆ.
ಈ ಕೋರ್ಸ್ ಜತೆಗೆ ನೀವು ffreedom appನಲ್ಲಿ ಕೃಷಿ, ಬಿಸಿನೆಸ್ ಮತ್ತು ಹಣಕಾಸಿಗೆ ಸಂಬಂಧಿದಂತೆ 900ಕ್ಕೂ ಹೆಚ್ಚು ಕೋರ್ಸ್ಗಳನ್ನು ವೀಕ್ಷಣೆ ಮಾಡಬಹುದು. ನೀವು ಅವರ ಮಾರ್ಗದರ್ಶನ ಪಡೆದು ಹಣಕಾಸಿನ ಪ್ರಗತಿ ಕಂಡುಕೊಳ್ಳಬಹುದು.
ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣಾವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ಕಾಲ್ ಮಾಡಿ - 02262116777
ಸರ್ಕಾರದ ಸೌಲಭ್ಯಗಳು: ತಮ್ಮಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರತಿಯೊಬ್ಬ ರೈತರು ಮಾಡಬಹುದಾದ ಈ ಸಮಗ್ರ ಕೃಷಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಸೌಲಭ್ಯ ನೀಡುತ್ತಿವೆ. ಅದರಲ್ಲಿ ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್, ಪಶುಸಂಗೋಪನೆಗೆ ವಿಮಾ ಯೋಜನೆ, ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಮತ್ತು ಮೀನುಗಾರಿಕೆ ತರಬೇತಿ ಮತ್ತು ವಿಸ್ತರಣೆ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ರೂಪಿಸಿವೆ ರೈತರು ಅದರ ಉಪಯೋಗವನ್ನು ಪಡೆದುಕೊಳ್ಳಬಹುದು.