

ಚಪಾತಿ ಪೂರಿ ಹಾಗೂ ದೋಸೆ ರೊಟ್ಟಿ ಇತ್ಯಾದಿ ತಿನಿಸು ಮಾಡಿದಾಗ ಅವುಗಳನ್ನು ಸವಿಯುವುದಕ್ಕಾಗಿ ಕೆಲವೊಂದು ಸೈಡ್ಡಿಷ್ಗಳನ್ನು ಹೇಗೆ ತಯಾರಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: 1/4 ಕಪ್ ಕಾಬುಲ್ ಕಡಲೆ 1/4 ಕಪ್ ಸಣ್ಣ ಕಡಲೆ ಮುಷ್ಟಿ ಕಡಲೆಬೀಜ ಈರುಳ್ಳಿ 2 ಟೋಮ್ಯಾಟೊ 2 ಶುಂಠಿ- ಬೆಳ್ಳುಳ್ಳಿ ಪೇಸ್ಟ್ 2 ಚಮಚ ಮೆಣಸಿನ ಪುಡಿ 1 ಚಮಚ್ಣಗರಂ ಮಸಾಲ ಪುಡಿ 2 ಚಮಚ ಅರಿಶಿಣ ಪುಡಿ 1/2 ಚಮಚ ಉಪ್ಪು ರುಚಿಗೆ ತಕ್ಕಷ್ಟು ಧನಿಯಾ ಪುಡಿ 1/2 ಚಮಚ ಎಣ್ಣೆ 5-6 ಚಮಚ ನಿಂಬೆರಸ ಸ್ವಲ್ಪ.
ಮಾಡುವ ವಿಧಾನ: ಕಡಲೆ ಹಾಗೂ ಕಡಲೆಬೀಜಗಳನ್ನು 8-10 ಗಂಟೆ ನೆನೆಸಿ. ಉಪ್ಪು ಮತ್ತು ಅರಿಶಿಣ ಪುಡಿ, ನೀರು ಹಾಕಿ 4-5 ವಿಶಲ್ ಬರುವವರೆಗೆ ಬೇಯಿಸಿಕೊಳ್ಳಿ. ಸ್ವಲ್ಪ ಕಾಬುಲ್ ಕಡಲೆಯನ್ನು ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಟೊಮ್ಯಾಟೊ ಹಾಕಿ ಫ್ರೖೆ ಮಾಡಿ ಇದು ತಣಿದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಮತ್ತೆ ಬಾಣಲೆಯಲ್ಲಿ ಎಣ್ಣೆ ಹಾಕಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೖೆ ಮಾಡಿ.
ಇದಕ್ಕೆ ರುಬ್ಬಿದ ಈರುಳ್ಳಿ, ಟೊಮ್ಯಾಟೊ ಮಿಶ್ರಣ ಹಾಕಿ ಫ್ರೖೆ ಮಾಡಿ ನಂತರ ಬೇಯಿಸಿದ ಕಡಲೆಗಳನ್ನು ಹಾಕಿ ಎಲ್ಲ ಪುಡಿಗಳನ್ನು ಹಾಕಿ 2 ಲೋಟ ನೀರು ಹಾಕಿ ನಂತರ ರುಬ್ಬಿದ ಕಡಲೆ ಮಿಶ್ರಣ ಹಾಕಿ ನಿಂಬೆರಸ ಹಾಕಿ ಇನ್ನು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಕಡಲೆಯಲ್ಲಿ ಸಾಕಷ್ಟು ಪ್ರೊಟೀನ್ ಇರುವುದರಿಂದ ಇದು ಬೆಳೆಯುವ ಮಕ್ಕಳಿಗೆ ತುಂಬ ಒಳ್ಳೆಯದು.
| ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ