ಕರೊನಾ ಹೊಸ ವೈರಸ್ ಅಲ್ವೇ ಅಲ್ಲ!

Corona
Published on

ಜಗತ್ತನ್ನು ತಲ್ಲಣಗೊಳಿಸಿರುವ ಕೋವಿಡ್-19 ವ್ಯಾಧಿಗೆ ಕಾರಣ ವಾದ ಕರೊನಾ ವೈರಸ್ ಬಗ್ಗೆ ಜಗತ್ತಿನ ಘಟಾನುಘಟಿ ಆರೋಗ್ಯ ತಜ್ಞರಲ್ಲೂ ಅಪಾರ ಅಜ್ಞಾನ ಮನೆ ಮಾಡಿದೆ. ವೈರಾಣು ತಜ್ಞರು ಮತ್ತು ಸಾಂಕ್ರಾಮಿಕ ರೋ ಗ ತಜ್ಞರು ಕೂಡ ಇದರಿಂದ ಹೊರತಾಗಿಲ್ಲ. ಜಗದಗಲ ತಳಮಳ ಸೃಷ್ಟಿಸಿರುವ ರೋಗದ ಕುರಿತು ಉಂಟಾಗಿರುವ ಹಲವು ತಪ್ಪು ತಿಳಿವಳಿಕೆಗಳನ್ನು ರ್ಚಚಿಸುವುದು ಈ ಲೇಖನದ ಉದ್ದೇಶ.

ಪ್ರಪ್ರಥಮವಾಗಿ ಇದೊಂದು ಹೊಸ ವೈರಸ್ ಎಂದು ಹೇಳುವುದೇ ತಪ್ಪು . ಈ ವೈರಸ್ ವಿರುದ್ಧ ಜನರಲ್ಲಿ ಈಗಾಗಲೇ ರೋಗ ನಿರೋಧಕ ಶಕ್ತಿ (ಇಮ್ಯುನಿಟಿ) ಇಲ್ಲ ಎಂದು ಹೇಳುವುದು ಇನ್ನೂ ತಪು್ಪ. ಕೆಲವರಲ್ಲಿ ಯಾವುದೇ ಲಕ್ಷಣಗಳಿಲ್ಲದೆಯೇ ಕೋವಿಡ್-19 ಇರಬಹುದಾಗಿದೆ ಅಥವಾ ಯಾವುದೇ ಲಕ್ಷಣಗಳಿಲ್ಲದೆಯೇ ಸೋಂಕನ್ನು ಇತರರಿಗೆ ಹರಡಬಹುದಾಗಿದೆ ಎಂಬ ವಾದವಂತೂ ಮೂರ್ಖತನದ ಪರಮಾವಧಿ.

2019ರ ಕೊನೆಯಲ್ಲಿ ಚೀನಾದಲ್ಲಿ ಪತ್ತೆಯಾದ ಕರೊನಾ ಸೋಂಕನ್ನು ‘ಹೊಸ ವೈರಾಣು’ ಎಂದು ಪರಿಗಣಿಸಲಾಯಿತು. 2002ರಲ್ಲಿ ಕಂಡು ಬಂದ ಸಾರ್ಸ್ ರೋಗಕ್ಕೆ ಕಾರಣವಾದ ವೈರಾಣುವಿನಂಥದ್ದೇ ಹೆಸರನ್ನು, ಅಂದರೆ ಸಾರ್ಸ್ ಸಿಒವಿ-2 ಎಂದು ಇಡಲಾಯಿತು. ಮನುಷ್ಯರನ್ನು ರೋಗಗ್ರಸ್ತಗೊಳಿಸುವ ಈ ವೈರಸ್, ಮಾನವರಿಗೆ ರೋಗ ತರುವ ಇತರ ವೈರಸ್​ಗೆ ಹೇಗೆ ಸಂಬಂಧಪಟ್ಟಿದ್ದು ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಿತ್ತು. ಆದರೆ, ಚೀನೀಯರ ಆಹಾರದ ಭಾಗವಾದ ಯಾವ ಪ್ರಾಣಿಯಿಂದ ಈ ವೈರಸ್ ಹಬ್ಬಿರಬಹುದು ಎಂಬ ಚರ್ಚೆಗೆ ಇಳಿದೆವು. ಚೀನಿಯರು ಸ್ವತಃ ತಮ್ಮ ದೇಶದ ಜನರ ಮೇಲೆ ವೈರಸ್ ಹರಿಬಿಟ್ಟರು ಎಂದೂ ಕೆಲವರು ನಂಬಿದರು. ಇದೀಗ ಈ ವೈರಸ್​ಗೆ ಲಸಿಕೆ ಕಂಡು ಹಿಡಿಯಲು ಆರಂಭಿಸಿದ ನಂತರ ಈ ವೈರಾಣು ಸಾರ್ಸ್-1 ಹಾಗೂ ಪ್ರತಿ ವರ್ಷ ನಮ್ಮನ್ನು ಬಾಧಿಸುವ ಶೀತಕ್ಕೆ ಕಾರಣವಾಗುವ ಇತರ ಬೇಟಾ-ಕರೊನಾ ವೈರಸ್​ಗಳಿಗೆ ಸಂಬಂಧಿಸಿದ್ದು ಎಂಬ ಅಂಶವನ್ನು ಇದ್ದಕ್ಕಿದ್ದಂತೆ ಅಧ್ಯಯನಗಳಿಂದ ಕಂಡುಕೊಂಡಿದ್ದೇವೆ. ಹೀಗಾಗಿ, ಸಾರ್ಸ್ ಸಿಒವಿ-2 ಒಂದು ಹೊಸ ವೈರಸ್ ಅಲ್ಲವೇ ಅಲ್ಲ. ಆದರೆ ಸೀಸನಲ್ ಕೆಮ್ಮಿಗೆ ಕಾರಣವಾಗಿ ರೂಪಾಂತರಗೊಂಡು ಬೇಸಿಗೆಯಲ್ಲಿ ಮಾಯವಾಗುವ ಇತರ ವೈರಸ್​ಗಳಂತೆಯೇ ಒಂದು ವೈರಸ್ ಆಗಿದೆ. ಜಗತ್ತಿನಾದ್ಯಂತ ಪಶುವೈದ್ಯರು ಬೆಕ್ಕು, ನಾಯಿ, ಹಂದಿ, ಮತ್ತು ಹಸುಗಳಿಗೆ ಹತ್ತಾರು ವರ್ಷಗಳಿಂದ ಕರೊನಾ ವೈರಸ್​ಗೆ ಚಿಕಿತ್ಸೆ ನೀಡುತ್ತಿದ್ದು ಇದನ್ನೊಂದು ಹೊಸ ವೈರಸ್ ಎನ್ನುವುದನ್ನು ಸುತರಾಂ ಒಪು್ಪವುದಿಲ್ಲ.

ಎಡವಿದ ವಿಶ್ವ ಆರೋಗ್ಯ ಸಂಸ್ಥೆ: ಈ ವೈರಾಣು ವಿಶೇಷವಾಗಿ ತೀರಾ ಅಪಾಯಕಾರಿಯಾದುದು. ಅದರ ವಿರುದ್ಧ ಇಮ್ಯುನಿಟಿ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯು.ಎಚ್.ಒ.) ಹಿಡಿದು ಫೇಸ್​ಬುಕ್-ವೈರಾಣು ಶಾಸ್ತ್ರಜ್ಞರವರೆಗೆ ಎಲ್ಲರೂ ರೋಚಕ ಕಥೆಯನ್ನು ಹೇಳಿದ್ದೇ ಹೇಳಿದ್ದು. ಇಡೀ ಜಗತ್ತು ಹೀಗೆ ಹೇಳಿತೇ ಹೊರತು ವಾಸ್ತವದಲ್ಲಿ ಆ ಹೇಳಿಕೆಯನ್ನು ಸಮರ್ಥಿಸುವಂಥ ಒಂದೇ ಒಂದು ಪರೀಕ್ಷೆಯನ್ನು ಯಾರೂ ಮಾಡಲಿಲ್ಲ. ಆದು ವಿಜ್ಞಾನವೇ ಅಲ್ಲ. ಯಾರೋ ಭಂಡ ಧೈರ್ಯದಿಂದ ಹೇಳಿದ್ದನ್ನೇ ಎಲ್ಲರೂ ಗಿಳಿಪಾಠ ಒಪ್ಪಿಸಿದ್ದರು.

ಮಾನವ ದೇಹದ ಬಿಳಿ ರಕ್ತಕಣಗಳು, ಸಾರ್ಸ್ ಸಿಒವಿ-2ನಲ್ಲಿ ಕಂಡುಬರುವ ಹಾಗೂ ಮಾಮೂಲಿ ಶೀತದ ವೈರಸ್​ಗಳ ಸಾಮಾನ್ಯ ಸ್ವರೂಪ (ಸ್ಟ್ರಕ್ಚರ್)ಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಬಿಳಿ ರಕ್ತಕಣಗಳು ಅವೆರಡರ ವಿರುದ್ಧವೂ ಹೋರಾಡಬಲ್ಲವು. ಪ್ರತಿಕಾಯಗಳ ಸ್ವರೂಪದಲ್ಲಿ ಲೆಕ್ಕ ಹಾಕುವ, ಸಾರ್ಸ್ ಸಿಒವಿ-2 ವಿರುದ್ಧದ ಇಮ್ಯುನಿಟಿಯು ಈ ಹಿಂದೆ ಎಣಿಸಿದ್ದಕ್ಕಿಂತಲೂ ಅಧಿಕವಾಗಿರುವುದನ್ನು ಜಗತ್ತಿನ ಹತ್ತು ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರೆಂದು ಗುರುತಿಸಲಾಗಿರುವ ಸ್ಟಾನ್​ಫೋರ್ಡ್ ವಿಶ್ವವಿದ್ಯಾಲಯದ ಪಿ.ಎ. ಇಯಾನಿಡಿಸ್ ನಡೆಸಿದ ಅಧ್ಯಯನವೊಂದು ಬಹಿರಂಗಪಡಿಸಿದೆ.

ಜನರಲ್ಲಿ ಇಮ್ಯುನಿಟಿ ಇಲ್ಲವೆಂಬ ಮಿಥ್ಯೆಯನ್ನೇ ಬಹುತೇಕ ಸಾಂಕ್ರಾಮಿಕ ರೋಗ ತಜ್ಞರೂ ಒಪ್ಪಿಕೊಂಡಿರುವುದು ವಿಪರ್ಯಾಸ. ಕರೊನಾ ವೈರಸ್​ಗಳು ಬೇಸಿಗೆಯಲ್ಲಿ ಮಾಯವಾಗುವ ಸಾಮಾನ್ಯ ಶೀತದ ವೈರಸ್​ಗಳು ಎಂದು ಒಪ್ಪಲು ಅವರು ಕೂಡ ತಯಾರಿಲ್ಲ. ಸೋಂಕಿನ ಇನ್ನೊಂದು ಅಲೆ ಏಳಲಿದೆ ಎಂಬ ಮಾದರಿಗೇ ಅವರು ಅಂಟಿಕೊಂಡಿದ್ದಾರೆ.

ಅಸಹಜ ವಾದ: ವಿಜ್ಞಾನದ ಶಾಖೆಯೊಂದು ಈ ರೀತಿಯಲ್ಲಿ ಅಸಹಜ ವಾದಕ್ಕೆ ಜೋತು ಬಿದ್ದಿದ್ದನ್ನು ನಾನು ನೋಡಿರುವುದು ಇದೇ ಮೊದಲ ಸಲ. ಸಾಂಕ್ರಾಮಿಕ ರೋಗ ತಜ್ಞರು ಎಷ್ಟು ಜನರನ್ನು ಉಳಿಸಬಹುದು ಎನ್ನುವುದಕ್ಕಿಂತ ಹೆಚ್ಚಾಗಿ ಸಾವಿನ ಸಂಖ್ಯೆಯ ಕುರಿತೇ ಹೆಚ್ಚು ಆಸಕ್ತಿ ತಳೆದಿರುವುದು ಯಾಕೆಂದು ನನಗೆ ಇನ್ನೂ ಅರ್ಥವಾಗಿಲ್ಲ. ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ಕೋವಿಡ್-19 ರೋಗಿಗಳೂ ಇರುತ್ತಾರೆ ಎಂಬ ಇನ್ನೊಂದು ವಾದ ಕೂಡ ಹಾಸ್ಯಾಸ್ಪದವೇ ಸರಿ. ‘ಆರೋಗ್ಯವಂತ’ ರೋಗಿಗಳು ಸೋಂಕನ್ನು ಹರಡುತ್ತಾರೆ ಎಂಬ ಈ ಪರಿಕಲ್ಪನೆಯೂ ಪ್ರಚಲಿತದಲ್ಲಿದೆ. ಇದು ಕೂಡ ತಪು್ಪ. ಗಂಟಲು ಕೆರೆತದಂಥ ಸಾಮಾನ್ಯ ಲಕ್ಷಣಗಳನ್ನು ಜನರು ನಿರ್ಲಕ್ಷಿಸಿರಬಹುದು ಅಥವಾ ಮರೆತಿರಬಹುದು. ಹಾಗೆಂದ ಮಾತ್ರಕ್ಕೆ ನಂತರ ಕೋವಿಡ್-19 ಪಾಸಿಟಿವ್ ಬಂದವರಲ್ಲಿ ಯಾವುದೇ ರೋಗ ಲಕ್ಷಣ ಇರಲಿಲ್ಲ ಎನ್ನುವುದು ಸರಿಯಾಗದು. ಕರೊನಾ ಪಾಸಿಟಿವ್ ಬಂದಿರುವವರಲ್ಲಿ ಕಂಡು ಬರುವುದು ವೈರಸ್ ಆಗಿರದೆ ಅದರ ಅತಿ ಸಣ್ಣ ಕಣ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮಹತ್ವದ ವಿಚಾರ.

ಸಾಮಾಜಿಕ ಸಮಸ್ಯೆಯೂ ಹೌದು: ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ವಯಸ್ಸಾದಂತೆ ಕುಂದುತ್ತದೆ. ಅಲ್ಲದೆ ಕೆಟ್ಟ ಆಹಾರ ಕ್ರಮ ಹೊಂದಿರುವವರಲ್ಲಿ ಅಥವಾ ಪೌಷ್ಟಿಕ ಆಹಾರದ ಕೊರತೆ ಇರುವವರಲ್ಲಿ ಇಮ್ಯುನಿಟಿ ದುರ್ಬಲವಾಗಿ ಇರುತ್ತದೆ. ಹೀಗಾಗಿ, ಈ ವೈರಸ್ ದೇಶವೊಂದರ ವೈದ್ಯಕೀಯ ಸಮಸ್ಯೆಗಳನ್ನು ಮಾತ್ರವಲ್ಲದೆ ಸಾಮಾಜಿಕ ವಿಚಾರಗಳ ಮೇಲೆ ಕೂಡ ಬೆಳಕು ಚೆಲ್ಲುತ್ತದೆ. ವೈರಸ್ ಕುರಿತು ಸರಿಯಾಗಿ ತಿಳಿಯದೆ ವೈದ್ಯರು, ರಾಜಕಾರಣಿಗಳು, ಕೆಲ ಮಾಧ್ಯಮಗಳು ಅನಗತ್ಯ ಗೊಂದಲ-ಗಾಬರಿ ಹುಟ್ಟಿಸುತ್ತಾರೆ. ಲಾಕ್​ಡೌನ್​ನಂಥ ಕ್ರಮಗಳು ಒಂದು ಹಂತದಲ್ಲಿ ಪ್ರಯೋಜನಕಾರಿಯಾಗಬಹುದು. ಗಾಬರಿ ಹುಟ್ಟಿಸುವ ಪರಿ ಎಷ್ಟರ ಮಟ್ಟಿಗಿದೆ ಎಂದರೆ ಜನರು ಮುಂದೆ ಮಾಸ್ಕ್ ಹಾಕಿಕೊಂಡು ತಿರುಗುವ ಬದಲು ತಲೆ ಮೇಲೆ ಏನೋ ಬೀಳಲಿದೆ ಎಂಬ ಭೀತಿಯಿಂದ ತಲೆ ರಕ್ಷಿಸಿಕೊಳ್ಳಲು ಶಿರಸ್ತ್ರಾಣ ಧರಿಸಿ ಓಡಾಡಬೇಕಾಗಬಹುದು! ಯಾವುದೇ ಸರ್ಕಾರ ಪರಿಚಯಿಸುವ ಆಪ್ ಕೂಡ ಹೆಚ್ಚು ಪ್ರಯೋಜನಕಾರಿಯಲ್ಲ. ಯಾರಾದರೂ ಕರೊನಾ ಪಾಸಿಟಿವ್ ವ್ಯಕ್ತಿಗಳು ಹತ್ತಿರವಿದ್ದರೆ; ಅವರು ಸಾಂಕ್ರಾಮಿಕತೆ ಹರಡದಿದ್ದರೂ, ಪಾಸಿಟಿವ್ ವ್ಯಕ್ತಿ ಬಗ್ಗೆ ಎಚ್ಚರಿಸುತ್ತದೆ ಅಷ್ಟೆ. ಜ್ವರ ಮತ್ತಿತರ ಶೀತಬಾಧೆಗಳು ಮರಳುವ ಚಳಿಗಾಲದಲ್ಲಿ ಪರಸ್ಪರರನ್ನು ಮುತ್ತಿಡುವ ಪ್ರಮಾಣ ಕಡಿಮೆಯಾಗಬಹುದು. ವೈರಸ್ ಇಲ್ಲದಿದ್ದರೂ ನಾವು ಕೈ ತೊಳೆದುಕೊಳ್ಳಬೇಕು. ಇಷ್ಟಾಗಿಯೂ ಜನರು ರೋಗಪೀಡಿತರಾದರೆ ಬೇರೆಯವರಿಗೆ ತಮ್ಮ ಮಾಸ್ಕ್ ತೋರಿಸಿ ಕರೊನಾ ಸಾಂಕ್ರಾಮಿಕತೆಯಿಂದ ಕಲಿತ ಪಾಠವಿದು ಎಂದು ಹೇಳಬಹುದು. ಹೆಚ್ಚು ಅಪಾಯಕಾರಿ (ರಿಸ್ಕ್ ಗ್ರೂಪ್) ಎಂದು ಭಾವಿಸುವ ಜನ ವಿಭಾಗವನ್ನು ರಕ್ಷಿಸಿಕೊಳ್ಳಲು ಇನ್ನೂ ನಮಗೆ ಸಾಧ್ಯವಾಗದಿದ್ದರೆ ಲಸಿಕೆ ಸಂಶೋಧನೆ ಆಗುವವರೆಗೆ ನಾವು ಕಾಯಬೇಕಾಗುತ್ತದೆ. ಅದು ರಿಸ್ಕ್ ಗ್ರೂಪ್​ಗಳಿಗೆ ಕೂಡ ಪರಿಣಾಮಕಾರಿ ಆಗಬಹುದು ಎಂದು ಆಶಿಸೋಣ.

(ಲೇಖಕರು ಖ್ಯಾತ ರೋಗನಿರೋಧಕಶಕ್ತಿ ಶಾಸ್ತ್ರಜ್ಞ (ಇಮ್ಯುನಾಲಜಿಸ್ಟ್).

ಬರ್ನ್ ವಿಶ್ವವಿದ್ಯಾಲಯದ ಇಮ್ಯುನಾಲಜಿ ಸಂಸ್ಥೆಯ ಮಾಜಿ ನಿರ್ದೇಶಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net