

ಕೆಲವು ಪುರುಷರು ಎಲ್ಲೆಂದರಲ್ಲಿ ರಸ್ತೆ ಬದಿ ನಿಂತು ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ. ಇದೇ ಪ್ರವೃತ್ತಿ ಆಸ್ಟ್ರೇಲಿಯಾದಲ್ಲಿಯೂ ಇದ್ದು, ಅಲ್ಲಿ ಕಠಿಣ ನಿಯಮಾವಳಿ ರೂಪಿಸಲಾಗಿದೆ. ಅಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ಶೌಚಗೃಹ ನಿರ್ವಿುಸಲಾಗಿದೆ.
ಆದರೆ ಒಂದು ವೇಳೆ ಪುರುಷರಿಗೆ ‘ಅರ್ಜೆಂಟ್’ ಆದಾಗ ಶೌಚಗೃಹ ಸಿಗದೇ ಹೋದರೆ ಅವರು ತಮ್ಮ ವಾಹನದ ಟಯರ್ ಮೇಲಷ್ಟೇ ‘ಕಾರ್ಯ’ ಪೂರೈಸಬಹುದು. ಅದನ್ನು ಬಿಟ್ಟು ಗೋಡೆ ಬದಿ ನಿಂತರೆ ಭಾರಿ ದಂಡ ಮಾತ್ರವಲ್ಲದೆ, ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲಿರುವ ಸಿಸಿಟಿವಿಗಳೆಲ್ಲಾ ಚೆನ್ನಾಗಿ ಕೆಲಸ ಮಾಡುವ ಕಾರಣ, ಅದರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ಪುರುಷರು ಭಯಪಟ್ಟುಕೊಳ್ಳುತ್ತಿದ್ದಾರಂತೆ. ವಾಹನ ಇಲ್ಲದೇ ಇರುವವರು ಏನು ಮಾಡುತ್ತಾರೋ ಗೊತ್ತಿಲ್ಲ!
| ಸುಚೇತನಾ