ಚಿಂತಾಯಾಶ್ಚ ಚಿತಾಯಾಶ್ಚ ಬಿಂದು ಮಾತ್ರಂ ವಿಶಿಷ್ಯತೇ

Alone
Published on

| ಗಣೇಶ ಕೃಷ್ಣ ಶರ್ಮ ಎಂ. ವಿ.

ಚಿಂತೆ ಮತ್ತು ಚಿತೆಯ ನಡುವೆ ಸೊನ್ನೆಯೊಂದರ ವ್ಯತ್ಯಾಸ ಮನಸ್ಸು ಅತಿ ಸೂಕ್ಷ್ಮಹಾಗೂ ಚಂಚಲ.ಣ ಈ ಮನಸ್ಸಿನಲ್ಲಾಗುವ ಒಂದು ಅಸಮತೋಲನವೇ ಚಿಂತೆ. ಮನಸ್ಸಿನಲ್ಲಿ ನಿರಂತರವಾಗಿ ಬರುವ ಯೋಚನೆಗಳೇ ಈ ಚಿಂತೆಗೆ ಕಾರಣ. ಅತಿಯಾದ ಚಿಂತೆ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ ಹಾಗೂ ಮನಸ್ಸಿನ ಅಸಮತೋಲನವು ಆರೋಗ್ಯವನ್ನು ಬಾಧಿಸುತ್ತದೆ.

ಒಂದು ಊರಿನಲ್ಲಿ ಒಬ್ಬ ಬಟ್ಟೆ ವ್ಯಾಪಾರಿ ಇದ್ದ ಬಹಳ ಕಷ್ಟದಿಂದ ದುಡಿದು ತನ್ನ ವ್ಯಾಪಾರದಲ್ಲಿ ಯಶಸ್ಸನ್ನುಗಳಿಸಿದ ತನ್ನ ಹೆಂಡತಿ ಮಕ್ಕಳೊಂದಿಗೆ ಒಳ್ಳೆಯ ಜೀವನವನ್ನು ನಡೆಸುತ್ತಿದ್ದ. ತನ್ನ ಯಶಸ್ಸಿನ ಕುರಿತಾಗಿ ಬಹಳ ಹೆಮ್ಮೆ ಪಡುತ್ತಿದ್ದ. ದಿನಕಳೆದಂತೆ ವ್ಯಾಪಾರಿಯ ಸಂಪತ್ತಿನ ವ್ಯಾಮೋಹ ಹೆಚ್ಚಾಯಿತು. ಹೆಚ್ಚು ಸಂಪತ್ತು ಗಳಿಸಬೇಕೆಂಬ ಆಸೆಯಿಂದ ವಂಚನೆಯನ್ನು ಮಾಡಲಾರಂಭಿಸಿದ ಮೋಸದಿಂದ ಸಂಪತ್ತನ್ನು ಗಳಿಸಲಾರಂಭಿಸಿದ. ಆದರೆ ಅದೇ ಊರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಯಿತು. ಮುಂದೆ ಸಂಪತ್ತನ್ನು ಉಳಿಸಿಕೊಳ್ಳುವುದು ಹೇಗೆ? ಎಂಬುದೇ ಅವನ ಚಿಂತೆಯಾಯಿತು. ಯಾವ ಕ್ಷಣದಲ್ಲಿಯೂ ಕಳ್ಳರು ಬಂದು ಸಂಪತ್ತನ್ನು ದೋಚಿಕೊಂಡು ಹೋಗಬಹುದು ಹೀಗೆ ಚಿಂತೆಯೇ ಅವನ ಜೀವನವನ್ನು ಹಾಳುಮಾಡಿತು.

ಸಂಪತ್ತು ಇದ್ದರೂ ಚಿಂತೆ ಇಲ್ಲದಿದ್ದರೂ ಚಿಂತೆ, ಅಧಿಕವಾಗಿದ್ದರೆ ಅದನ್ನು ಸಂರಕ್ಷಿಸುವುದೂ ಒಂದು ಚಿಂತೆ. ವೃದ್ಧರಿಗೆ ಆರೋಗ್ಯದ ಚಿಂತೆ, ಮಕ್ಕಳಿಗೆ ಪರೀಕ್ಷೆಗಳ ಚಿಂತೆ...! ಅನೇಕರು ಜೀವನವನ್ನು ಕೇವಲ ಚಿಂತೆಯಲ್ಲಿಯೇ ಕಳೆದು ಬಿಡುತ್ತಾರೆ.

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆಯಂತೆ ..! ಎಂಬ ಮಾತಿದೆ. ಅಂದರೆ ಮನಸ್ಸು ಪ್ರಶಾಂತವಾಗಿದ್ದು ಯಾವುದೇ ಚಿಂತೆಗಳಿಲ್ಲದವನಿಗೆ ಮಾತ್ರ ಸಂತೆಯ ಗದ್ದಲದ ನಡುವೆಯೂ ನಿದ್ದೆ ಮಾಡುವುದಕ್ಕೆ ಸಾಧ್ಯ.

ಚಿಂತೆಯ ಕುರಿತಾಗಿ ಸಂಸ್ಕೃತ ಸುಭಾಷಿತದಲ್ಲಿ ಹೀಗೆ ವಿವರಿಸಿದ್ದಾರೆ.

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೇ

ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ದೇಹಿನಮ್

ಚಿಂತೆ ಮತ್ತು ಚಿತೆ ಇವುಗಳೆರಡರ ನಡುವೆ ಸೊನ್ನೆಯೊಂದರ ವ್ಯತ್ಯಾಸ ಚಿತೆಯು ನಿರ್ಜೀವ ಶರೀರವನ್ನು (ಶವವನ್ನು) ಸುಡುತ್ತದೆ ಆದರೆ ಚಿಂತೆಯು ಜೀವ ಸಹಿತವಾದ ಶರೀರವನ್ನು ಸುಡುತ್ತದೆ. ಆದ್ದರಿಂದ ಅತಿಯಾದ ಚಿಂತೆಯನ್ನು ಬಿಟ್ಟುಬಿಡಿ.

(ಸಹಾಯಕ ಪ್ರಾಧ್ಯಾಪಕ, ಶಾರದಾ ಆಯುರ್ವೆದ ಮೆಡಿಕಲ್ ಕಾಲೇಜು ಮಂಗಳೂರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net