

| ಮಂಜುನಾಥ್ ರಾವ್ ಸಿ ಎಸ್
ನಿಮ್ಮ ಅಭಿಪ್ರಾಯದಂತೆ ಬೆಂಗಳೂರಿನಲ್ಲಿರುವ ಓರ್ವ ಎಣ್ಣೆ ಗಾಣದ ಕಂಪನಿ ತಮ್ಮ ಮಾಹಿತಿಯನ್ನು ಕಳುಹಿಸಿದೆ. ನಿಮ್ಮ ರೊಟ್ಟಿ ಜೇನುತುಪ್ಪದಲ್ಲಿಯೇ ಬಿತ್ತು ಅಂದುಕೊಳ್ಳಿ. ಇದು ಐದೂವರೆ ಕಿಲೋಗ್ರಾಮ್ ತೂಕದ ಯಂತ್ರ. ಶಬ್ಧ ಕಡಿಮೆ ಹಾಗೂ ಆರು ಲೀಟರ್ ಎಣ್ಣೆ ತೆಗೆದರೆ ಒಂದು ಯೂನಿಟ್ ವಿದ್ಯುತ್ ಖರ್ಚಾಗುತ್ತದೆ ಎಂದು ಹೇಳಿಕೊಂಡಿದೆ.
ಇದರ ಪ್ರಾತ್ಯಕ್ಷಿಕೆಯನ್ನು ಮಾಡಲು ನವೀನ್ ಕೋರಾ (9845236611) ಮತ್ತು ಶ್ರೀನಿವಾಸ ಮೂರ್ತಿ (9440293257)ಯವರು ಮನೆ ಬಾಗಿಲಿಗೇ ಬರುತ್ತಾರಂತೆ. ಸೀಡ್ಸ್ ಟು ಆಯಿಲ್ ಎನ್ನುವ ಈ ಕಂಪನಿಯ ಎಣ್ಣೆಗಾಣವನ್ನು ವಿವಿ ಪುರಂನಲ್ಲಿರುವ 16/1 ನೆಲಮಹಡಿ, ಆಂಜನೇಯ ದೇವಸ್ಥಾನದ ರಸ್ತೆಯಲ್ಲಿರುವ ಸಿನರ್ಜಿ ಗ್ಲೋಬಲ್ ಸಲೂಶನ್ಸ್ ರವರು (9845236614, 9652151104) ಮಾರುಕಟ್ಟೆ ಮಾಡುವ ಹೊಣೆ ಹೊತ್ತಿದ್ದಾರೆ.
ಜತೆಗೆ ಏನಾದರೂ ಆದರೆ.... ಅದಕ್ಕೆ ಒಂದು ವರ್ಷದ ವಾರಂಟಿ ಹಾಗೂ ಸೇವೆಯನ್ನು ಸಜ್ಜನರಾವ್ ಸರ್ಕಲ್ನಲ್ಲಿರುವ ಜನತಾ ಹೋಟೆಲ್ ಪಕ್ಕದ ಓಲೆಟಿ ಹಾಸ್ಟೆಲ್ನ ಶಾಪ್ ನಂ.8ರ ಶ್ರೀ ಪದ್ಮಾವತಿ ನ್ಯಾಚುರಲ್ಸ್ ರವರು ನಿರ್ವಹಿಸುತ್ತಾರಂತೆ. ಇವರು ಬೆಲೆ ಏಕೆ ನಮೂದಿಸಿಲ್ಲ ಎನ್ನುವುದು ತಿಳಿಯದು. ಏನೇ ಇರಲಿ ನೀವು ಇವರನ್ನು ಒಮ್ಮೆ ವಿಚಾರಿಸಿ,ನೀವು ಕೊಂಡ ಮೇಲೆ ನಮಗೆ ಮತ್ತೆ ತಿಳಿಸುವಿರಾ? ಅದರಲ್ಲಿ ತೆಗೆದ ಬೇರೆ ಬೇರೆ ಕಾಳುಗಳು, ಧಾನ್ಯಗಳು ಹಾಗೂ ಬೀಜಗಳ ಎಣ್ಣೆಗಳ ಇಳುವರಿ, ಉಳಿಕೆಗಳ ವಿಲೇವಾರಿ ಮಾಡಿದ್ದು ಹೇಗೆ ಎನ್ನುವುದನ್ನೆಲ್ಲಾ ತಿಳಿಸಿದರೆ ನಮ್ಮ ಓದುಗರಿಗೆ ಉಪಯುಕ್ತ.
ಏನೇ ಇರಲಿ ಕಲಬೆರಕೆ ಎಣ್ಣೆಯನ್ನು ತಿನ್ನುವುದಕ್ಕಿಂತ ಮನೆಯಲ್ಲೇ ತಯಾರಿಸಿದ ಶುದ್ಧ ಎಣ್ಣೆ ತುಂಬಾ ಒಳ್ಳೆಯದು. ಸುವಾಸನೆ ಭರಿತವಾಗಿದ್ದು ಮತ್ತೆ ಮತ್ತೆ ತಿನ್ನೋಣ ಎನಿಸುತ್ತದೆ. ಒಮ್ಮೆ ಶುದ್ಧ ಎಣ್ಣೆ ತಿನ್ನುವ ಅಭ್ಯಾಸವಾದರೆ ಮತ್ತೆಂದೂ ನೀವು ಅಂಗಡಿಯಿಂದ ಎಣ್ಣೆಯನ್ನು ತರುವುದಿಲ್ಲ.