ಬಜೆಟ್​ನಲ್ಲಿ ಸೂಕ್ತ ಅನುದಾನ ಕಲ್ಪಿಸಿ

Janamata
Published on

ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆಮಾರ್ಗದ ನಿರ್ಮಾಣ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ ಬಂದರಿನ ಅಭಿವೃದ್ಧಿಯ ಕೆಲಸಗಳು ಇನ್ನೂ ತನಕ ಪ್ರಾರಂಭವಾಗಿಲ್ಲ. ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಇಲಾಖೆಯ ಮಂತ್ರಿಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಕೆಲ ಮಹಾನ್ ಬುದ್ಧಿಜೀವಿಗಳು ಹಾಗೂ ಅಧಿಕಾರಿಗಳ ಅಡೆತಡೆಗಳಿಂದ ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಈ ಎರಡು ಯೋಜನೆಗಳು ಆಮೆಗತಿಯಲ್ಲಿ ಕುಂಟುತ್ತಲೇ ಸಾಗಿವೆ.

ಮುಖ್ಯಮಂತ್ರಿಗಳು ಈ ಎರಡೂ ಯೋಜನೆಗಳಿಗೆ ಇರುವ ಅಡೆ-ತಡೆಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು ಹಾಗೂ ಹೆಚ್ಚಿನ ಮುತುವರ್ಜಿ ವಹಿಸಿ ಮಾರ್ಚ್ 5ರಂದು ಮಂಡನೆಯಾಗುವ ರಾಜ್ಯ ಮುಂಗಡ ಪತ್ರದಲ್ಲಿ ಹೆಚ್ಚಿನ ಅನುದಾನವನ್ನು ಒದಗಿಸಬೇಕು. ಆ ಮೂಲಕ ಅತೀ ಶೀಘ್ರವಾಗಿ ಕೆಲಸವನ್ನು ಪ್ರಾರಂಭಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.

| ರಾಜಸ್ ಸದಾನಂದ ತೋಡುರ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net