

ಮೇ 16ರಿಂದ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಬಿಸಿಲು ಹೆಚ್ಚಿರುವ ಕಾರಣಕ್ಕೆ ಕೆಲ ದಿನ ನಂತರ ಶಾಲೆ ಆರಂಭಿಸಬೇಕೆಂದು ಹಲವು ಪಾಲಕರು ಹೇಳುತ್ತಿದ್ದಾರಾದರೂ, ಆ ಬಗ್ಗೆ ಬಹುತೇಕರ ಒಲವು ಇಲ್ಲ. ಇನ್ನೊಂದೆಡೆ, ಕರೊನಾ ಕಾಲದಲ್ಲಿ ಮಕ್ಕಳ ಕಲಿಕೆಯಲ್ಲಿ ಆದ ಹಿನ್ನಡೆಯನ್ನು ಸರಿದೂಗಿಸುವ ಉದ್ದೇಶದಿಂದ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿಕೊಂಡು, ಕಲಿಕಾ ಸಂಭ್ರಮವನ್ನು ಹೆಚ್ಚಿಸಲು ಸಜ್ಜಾಗಿದೆ.
ಶಾಲೆಯಲ್ಲಿ ಕಲಿಯುವುದು ಎಷ್ಟು ಮುಖ್ಯ ಎನ್ನುವುದಕ್ಕೆ ಇಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಸಿಗುತ್ತವೆ. ಶಾಲೆಯಲ್ಲಿ ಕಲಿಕೆ, ಸಹಪಾಠಿಗಳ ಜೊತೆಗಿನ ಒಡನಾಟದ ಅಮೂಲ್ಯವಾದ ದಿನಗಳನ್ನು ಕೋವಿಡ್&19 ಕಸಿದುಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಶಾಲೆಗಳಿಲ್ಲದೇ ಉಂಟಾಗಿರುವ ಕಲಿಕಾ ಹಿನ್ನಡೆಯ ಕತೆಗಳನ್ನು ನಾವು, ನೀವೆಲ್ಲರೂ ನೋಡಿದ್ದೇವೆ ಮತ್ತು ಕೇಳಿದ್ದೇವೆ.
ಮತ್ತೊಂದೆಡೆ ಕೋವಿಡ್&19 ಸಂದರ್ಭದಲ್ಲಿ ಮಕ್ಕಳು ನೆಟ್ವರ್ಕ್ ಸಿಗುವ ಪ್ರದೇಶವನ್ನು ಹುಡುಕಿಕೊಂಡು ಸಮೀಪದ ಸೇತುವೆ, ಕಟ್ಟಡಗಳು, ಎತ್ತರದ ಪ್ರದೇಶದಲ್ಲಿ ಕುಳಿತು ಆನ್ಲೈನ್ ತರಗತಿಯಲ್ಲಿ ಭಾಗವಹಿಸುವುದನ್ನು ನೋಡಿದ್ದೇವೆ.
ಕೋವಿಡ್&19 ಸಂದರ್ಭದಲ್ಲಿ ಸೋಂಕಿನ ಭೀತಿಯ ಕಾರಣ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ ಆನ್ಲೈನ್ ತರಗತಿಗಳನ್ನು ನಡೆಸಲಾಯಿತು. ಆದರೆ, ಎಲ್ಲ ಮಕ್ಕಳಿಗೆ ಮೊಬೈಲ್ ೋನ್, ಲ್ಯಾಪ್ಟಾಪ್ ಅಥವಾ ಐಪ್ಯಾಡ್ ಭಾಗ್ಯ ಇರಲಿಲ್ಲ. ಇದ್ದರೂ ಅವುಗಳನ್ನು ಪ್ರತಿನಿತ್ಯ ತರಗತಿಗಾಗಿ ಬಳಕೆ ಮಾಡಿಕೊಳ್ಳುವುದು ಗೊತ್ತಿರಲಿಲ್ಲ. ಡಿವೈಸ್ ಇದ್ದೂ, ಬಳಕೆ ಮಾಡುವುದು ತಿಳಿದಿದ್ದರೂ ಇಂರ್ಟನೆಟ್ ನೆಟ್ವರ್ಕ್ ಸಮಸ್ಯೆ ಕಾಡುತ್ತಿತ್ತು. ಕೋವಿಡ್&19 ಕಾರಣ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಹಿನ್ನಡೆ ಅರಿಯಲು ಶಿಣ ಇಲಾಖೆ ನಡೆಸಿದ ಸಮೀೆ ಪ್ರಕಾರ, ಕೆಲವು ಭಾಗಗಳಲ್ಲಿ ಗರಿಷ್ಠ ಶೇ.70ರಿಂದ ಶೇ.80 ರಷ್ಟು ಕಲಿಕಾ ಹಿನ್ನಡೆ ಉಂಟಾಗಿದೆ. ಮಕ್ಕಳು ಹಿಂದಿನ ತರಗತಿಗಳಲ್ಲಿ ಕಲಿತಿದ್ದ ಅನೇಕ ಅಂಶಗಳನ್ನು ಮರೆತು ಬಿಟ್ಟಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.
ಕಲಿಕೆಯಲ್ಲಿ ಹಿನ್ನಡೆಯಾಗಿದೆ ಎಂಬುದು ಎಲ್ಲರಿಗೂ ತಿಳಿದಿದ್ದರೂ ರ್ನಿದಿಷ್ಟ ಮಾನದಂಡಗಳೊಂದಿಗೆ ನಡೆಸಿದ ಸಮೀೆಯಿಂದ ಕಲಿಕಾ ಹಿನ್ನಡೆ ಸರಿದೂಗಿಸಲು ರಾಜ್ಯ ಸರ್ಕಾರ ಯಾವ ರೀತಿಯ ಯೋಜನೆ ರೂಪಿಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿತು. ಕಲಿಕಾ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಸಾಕಷ್ಟು ಯೋಚಿಸಿ, ಇಡೀ ದೇಶದಲ್ಲೆ ಮೊದಲ ಬಾರಿಗೆ "ಕಲಿಕಾ ಚೇತರಿಕೆ' ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಿದೆ. ಅದಕ್ಕಾಗಿ ಅಗತ್ಯವಾಗಿರುವ ಪೂರಕ ಪಠ್ಯಗಳನ್ನು ಸಿದ್ಧಪಡಿಸಿಕೊಂಡಿದೆ.
ರಾಷ್ಟ್ರೀಯ ಶಿಣ ನೀತಿ ಮತ್ತು ರಾಜ್ಯ ಶಿಣ ಇಲಾಖೆಯ ಪ್ರಗತಿ ಪರಿಶೀಲನೆಗೆಂದು ಇತ್ತೀಚೆಗೆ ಕರ್ನಾಟಕ ಪ್ರವಾಸದಲ್ಲಿದ್ದ ಕೇಂದ್ರ ಶಿಣ ಸಚಿವ ಧಮೇರ್ಂದ್ರ ಪ್ರಧಾನ್ ಅವರು ಕೂಡ ಕಲಿಕಾ ಚೇತರಿಕೆ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಇಡೀ ದೇಶಕ್ಕೆ ಈ ಕಾರ್ಯಕ್ರಮ ಮಾದರಿ ಎಂದು ಹೇಳಿದರು. 1 ರಿಂದ 9ನೇ ತರಗತಿಯ ಮಕ್ಕಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ರಾಷ್ಟ್ರೀಯ ಶಿಣ ನೀತಿ&2020ರ ಆಶಯದಂತೆ ಸಂಖ್ಯಾಾನ ಮತ್ತು ಬುನಾದಿ ಸಾರತೆಗೆ ಆದ್ಯತೆ ನೀಡಲಾಗಿದೆ.
ಕೋವಿಡ್ ಸೋಂಕಿನ ಕಾರಣ ಕಳೆದುಹೋದ, ನಷ್ಟವಾದ ದಿನಗಳನ್ನು ಸಂಪೂರ್ಣವಾಗಿ ಮರಳಿ ಪಡೆಯುವುದು ಕಷ್ಟಸಾಧ್ಯ. ಆದರೆ, ಒಂದು ಹಂತದವರೆಗೆ ಬರವಣಿಗೆ, ಓದು, ಸಂಖ್ಯಾಾನ ಮರಳಿ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶಿಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಕರು ಮಕ್ಕಳ ಶಿಣದ ವಿಶೇಷ ಕಾರ್ಯಕ್ರಮ ಆರಂಭಕ್ಕೆ ಸಿದ್ದರಾಗಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಬೇಸಿಗೆ ಬಿಸಿಲು ಹೆಚ್ಚಾಗಿರುವ ಕಾರಣ ಶಾಲೆಗಳನ್ನು ಬೇಗ ಆರಂಭಿಸುವುದು ಬೇಡವೆಂದು ಪಾಲಕರು ಹೇಳುತ್ತಿದ್ದಾರೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ಆದರೆ, ಹೀಗೆ ಹೇಳುವವರ ಸಂಖ್ಯೆ ಅತ್ಯಂತ ಕಡಿಮೆ. ಶಿಣ ಬೇಕು. ಮಕ್ಕಳಿಗೆ ಒಳ್ಳೆಯದಾಗಬೇಕು. ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಉತ್ತಮ ಪ್ರಜೆಗಳಾಗಬೇಕು. ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಶಿಣಕ್ಕೆ ನಾವೆಲ್ಲರೂ ಕಂಕಣಬದ್ಧರಾಗಬೇಕು ಎಂದು ಪಾಲಕರು ಹೇಳುತ್ತಾರೆ. ನನ್ನ ಪ್ರವಾಸದ ವೇಳೆ ಬಹುತೇಕ ಶಿಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಈಗ ಇರುವ ಅವಕಾಶವನ್ನು ನಾವು ಕೈಚೆಲ್ಲಿದರೆ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಕೊಟ್ಟಂತಾಗುತ್ತದೆ.
ಕೋವಿಡ್ ನಾಲ್ಕನೇ ಅಲೆಯ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಶಾಲೆ ಆರಂಭದ ಕುರಿತು ಮಹಾನಗರಗಳ ಕೆಲವೆಡೆ ಅಪಸ್ವರ ಎತ್ತಿರುವುದು ನನಗೆ ತಿಳಿದಿದೆ. ಆದರೆ, ಎಲ್ಲಾ ಮಕ್ಕಳಿಗೂ ಮನೆಯಲ್ಲಿ ಕುಳಿತು ಕಲಿಯುವ ಅವಕಾಶ, ಸಮಯ ಮತ್ತು ಹೇಳಿಕೊಡುವಷ್ಟು ಸಮಯ ಪಾಲಕರಿಗೆ ಇರುವುದಿಲ್ಲ ಎನ್ನುವುದನ್ನು ಅಪಸ್ವರ ಎತ್ತುವವರು ಗಮನದಲ್ಲಿ ಇಟ್ಟುಕೊಳ್ಳಬೇಕು. ಕೋವಿಡ್&19 ನಾಲ್ಕನೇ ಅಲೆಯು ಅಷ್ಟೊಂದು ಗಂಭೀರವಾಗಿರುವುದಿಲ್ಲ ಎಂದು ದೇಶ&ವಿದೇಶಗಳ ತರು ತಿಳಿಸಿದ್ದಾರೆ. ಹೀಗಾಗಿ, ಈ ಬಗ್ಗೆ ಆತಂಕ ಪಡಬೇಕಿಲ್ಲ.
ಮಕ್ಕಳು ಇನ್ನಿತರ ಮಕ್ಕಳ ಜೊತೆ ಸೇರಿ ಕಲಿಯುವುದು, ಶಾಲಾ ವಾತಾವರಣದಲ್ಲಿ ಆಟವಾಡುವುದು, ಬರೆಯುವುದು, ಚರ್ಚೆಯಲ್ಲಿ ಪಾಲ್ಗೊಳ್ಳುವುದರಿಂದ ಅವರ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ. ನೆಪಗಳನ್ನು ಹೇಳಿದರೆ ನಷ್ಟವಾಗುವುದು ಆ ಮಗುವಿಗೆ ಮಾತ್ರವಲ್ಲ. ಆ ಕುಟುಂಬ, ಸಮಾಜ ಮತ್ತು ಇಡೀ ದೇಶಕ್ಕೆ ನಷ್ಟವಾಗುತ್ತದೆ. ಅದಕ್ಕೆ ಅವಕಾಶ ನೀಡದೆ ನಾವೆಲ್ಲರೂ ಕಲಿಕಾ ಚೇತರಿಕೆ ಮೂಲಕ ಶಾಲೆಗಳನ್ನು ಸಂಭ್ರಮದಿಂದ ಆರಂಭಿಸೋಣ. ಇದಕ್ಕೆ ಶಿಕರು, ಪಾಲಕರು ಮತ್ತು ಸಮಾಜ ಬೆಂಬಲಿಸುತ್ತದೆ ಎನ್ನುವ ವಿಶ್ವಾಸ ನನಗಿದೆ.
(ಲೇಖಕರು ಪ್ರಾಥಮಿಕ ಮತ್ತು ಪ್ರೌಢ ಶಿಣ ಹಾಗೂ ಸಕಾಲ ಸಚಿವರು)