| ಚೇತನ್ ನಾಡಿಗೇರ್
ಜೀವನದಲ್ಲಿ ಒಮ್ಮೆಯಾದರೂ ಬಣ್ಣ ಹಚ್ಚಬೇಕು, ಸಾಧ್ಯವಾದರೆ ಸ್ಟಾರ್ ಆಗಬೇಕು ಎಂದು ಬಹುತೇಕ ಎಲ್ಲರೂ ಬಯಸುತ್ತಾರೆ. ಆದರೆ, ಆ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ಕೆಲವರಿಗೆ ಮಾತ್ರ ಅಂಥದ್ದೊಂದು ಅವಕಾಶ ಸಿಗುತ್ತದೆ. ಹಾಗೆ ಅವಕಾಶ ಸಿಕ್ಕರೂ, ಅದನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇಲ್ಲಿ ಸ್ಟಾರ್ ಆಗುವುದಕ್ಕೆ, ಬಹಳ ಕಾಲ ನೆಲೆ ನಿಲ್ಲುವುದಕ್ಕೆ ಪ್ರತಿಭೆಯೊಂದಿದ್ದರೆ ಸಾಲದು. ಅದೃಷ್ಟ ಬೇಕು. ಅದೃಷ್ಟದ ಜತೆಗೆ ಸೌಂದರ್ಯ ಮತ್ತು ಆರೋಗ್ಯವಂತ ದೇಹ ಸಹ ಮುಖ್ಯ. ಹಾಗೆ ಯಾವಾಗಲೂ ಸೌಂದರ್ಯ ನಳನಳಿಸಬೇಕೆಂದರೆ ವ್ಯಾಯಾಮ, ಆಹಾರ, ಮನಃಶಾಂತಿ ಇದ್ದರಷ್ಟೇ ಸಾಲದು. ಕೆಲವೊಮ್ಮೆ ಬೇರೆ ಮಾರ್ಗಗಳನ್ನು ಹಿಡಿಯಬೇಕಾಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆಯೇ, ಒತ್ತಡಗಳು ಜಾಸ್ತಿಯಾಗುತ್ತಿದ್ದಂತೆಯೇ ಸಹಜವಾಗಿ ಕಾಂತಿ ಕಡಿಮೆಯಾಗುತ್ತದೆ. ಮುಖ ಬಾಡುತ್ತದೆ. ಕೂದಲು ಉದುರುತ್ತದೆ. ದೇಹದ ಆಕಾರದಲ್ಲಿ ಸಾಕಷ್ಟು ಏರುಪೇರಾಗುತ್ತವೆ. ಒಟ್ಟಾರೆ ಒಂದೇ ರೀತಿ ಕಾಣುವುದು ಸಾಧ್ಯವೇ ಇಲ್ಲ. ಒಬ್ಬ ಸ್ಟಾರ್ ನಟ ಅಥವಾ ನಟಿಗೆ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಅದರಲ್ಲೂ ಒಬ್ಬ ನಟಿಗೆ ಇದರ ಅವಶ್ಯಕತೆ ಹೆಚ್ಚಿರುತ್ತಿದೆ. ಮೊದಲೇ ಚಿತ್ರರಂಗದಲ್ಲಿ ನಟಿಯರ ಅವಧಿ ಕಡಿಮೆ. ಅದರಲ್ಲೇ ಆಕೆ ಹೆಚ್ಚು ಕಾಲ ಚಿತ್ರರಂಗದಲ್ಲಿ ಉಳಿಯಬೇಕಾದರೆ ಪ್ರತಿಭೆ ಜತೆಗೆ ಸೌಂದರ್ಯ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಸುಮ್ಮನೆ ಒಮ್ಮೆ ಹಿಂದಿ ಚಿತ್ರರಂಗವನ್ನು ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡವರು, ಹೇರ್ ಟ್ರಾನ್ಸ್ಪ್ಲಾಂಟ್ ಮಾಡಿಸಿಕೊಂಡವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಶ್ರೀದೇವಿ, ಪ್ರಿಯಾಂಕಾ ಚೋಪ್ರಾ, ಶಿಲ್ಪಾ ಶೆಟ್ಟಿ, ಅನುಷ್ಕಾ ಶರ್ಮ, ಕತ್ರೀನಾ ಕೈಫ್, ಕಂಗನಾ ರಣಾವತ್, ಮೌನಿ ರಾಯ್, ರಾಖಿ ಸಾವಂತ್, ಶ್ರುತಿ ಹಾಸನ್, ಕರೀನಾ ಕಪೂರ್, ನೋರಾ ಫತೇಹಿ ಮುಂತಾದವರು ಆಪರೇಷನ್ ಮಾಡಿಸಿಕೊಂಡಿದ್ದಾರೆ. ತಮ್ಮ ಮೂಗು, ತುಟಿಯನ್ನು ಇನ್ನಷ್ಟು ಸುಂದರವಾಗಿಸಿಕೊಂಡವರಿದ್ದಾರೆ. ಈ ಮೂಲಕ ಸಾಕಷ್ಟು ಬದಲಾಗಿದ್ದಾರೆ. ಬರೀ ನಟಿಯರಷ್ಟೇ ಅಲ್ಲ, ಹಲವು ನಟರು ಸಹ ವಿವಿಧ ಸರ್ಜರಿ ಮಾಡಿಸಿಕೊಂಡಿರುವ ಸುದ್ದಿ ಇದೆ. ಸಲ್ಮಾನ್ ಖಾನ್ ಕೂದಲು ಕಸಿ ಮಾಡಿಸಿಕೊಂಡಿರುವ ವಿಷಯ ರಹಸ್ಯವಾಗೇನೂ ಉಳಿದಿಲ್ಲ. ಶಾರೂಖ್ ಖಾನ್, ಆಮೀರ್ ಖಾನ್, ಅನಿಲ್ ಕಪೂರ್ ಮುಂತಾದವರು ಮುಖದ ಮೇಲೆ ಸುಕ್ಕಾಗದಂತೆ ಆಪರೇಷನ್ ಮಾಡಿಸಿಕೊಂಡಿದ್ದಾರೆ ಎಂಬ ವಿಷಯ ಆಗಾಗ ಕೇಳಿ ಬರುತ್ತಲೇ ಇರುತ್ತವೆ.
ಈ ಪೈಕಿ ಎಲ್ಲರೂ ಪಾಸ್ ಆಗಿದ್ದಾರೆ ಎಂದು ಹೇಳುವುದು ಕಷ್ಟ. ಕೆಲವರಿಗೆ ಇದರ ಸೈಡ್ ಎಫೆಕ್ಟ್ ಸಹ ಆಗಿದೆ. ಪ್ರಮುಖವಾಗಿ ಪ್ರಿಯಾಂಕಾ ಚೋಪ್ರಾ ತಮ್ಮ ಮುಖವನ್ನು ಇನ್ನಷ್ಟು ಚೆಂದಗಾಣಿಸಲು ಮೂಗು ಮತ್ತು ತುಟಿಗೆ ಹಲವು ಬಾರಿ ಆಪರೇಷನ್ ಮಾಡಿಸಿಕೊಂಡಿದ್ದಾರಂತೆ. ಒಮ್ಮೆಯಂತೂ ಆಪರೇಷನ್ನಿಂದ ಸಾಕಷ್ಟು ಸಮಸ್ಯೆಯಾಗಿತ್ತು ಎಂದು ಅವರು ತಮ್ಮ ಆತ್ಮಚರಿತ್ರೆಯಲ್ಲೇ ಬರೆದುಕೊಂಡಿದ್ದಾರೆ. ‘ಆಪರೇಷನ್ ಮಾಡುವ ಸಂದರ್ಭದಲ್ಲಿ ಏನೋ ಎಡವಟ್ಟಾಗಿ, ನನ್ನ ಮೂಗು ತನ್ನ ಆಕಾರ ಕಳೆದುಕೊಂಡಿತು. ಇದರಿಂದ ನನ್ನ ಮುಖದ ರೂಪವೇ ಬದಲಾಗಿತ್ತು. ನಾನು ನಾನಾಗಿಯೇ ಉಳಿದಿರಲಿಲ್ಲ. ಪ್ರತಿ ಬಾರಿ ನಾನು ಕನ್ನಡಿ ನೋಡಿಕೊಂಡಾಗಲೂ, ಯಾರೋ ಅನಾಮಿಕರು ನನ್ನನ್ನು ನೋಡುತ್ತಿದ್ದಾರೆ ಎಂದನಿಸುತ್ತಿತ್ತು. ಈ ಆಘಾತದಿಂದ ನನಗೆ ಹೊರಬರುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಜನ ನನ್ನನ್ನು ಪ್ಲಾಸ್ಟಿಕ್ ಚೋಪ್ರಾ ಎಂದು ಕರೆಯುವುದಕ್ಕೆ ಪ್ರಾರಂಭಿಸಿದರು. ಕ್ರಮೇಣ ನನ್ನ ಹೊಸ ರೂಪಕ್ಕೆ ನಾನು ಹೊಂದಿಕೊಂಡೆ’ ಎಂದು ಅವರು ಹೇಳಿಕೊಂಡಿದ್ದಾರೆ.
ಇದು ಬರೀ ಸೌಂದರ್ಯ ಅಥವಾ ಮುಖವನ್ನು ಸುಂದರವಾಗಿಟ್ಟುಕೊಳ್ಳುವುದಕ್ಕೆ ಸೀಮಿತವಲ್ಲ. ಮುಖ ಎಷ್ಟು ಮುಖ್ಯವೋ, ದೇಹ ಸಹ ಅಷ್ಟೇ ಮುಖ್ಯವಾಗುತ್ತದೆ. ದೇಹದ ಆಕಾರ ಆಗಾಗ ಬದಲಾಗುತ್ತಿರುತ್ತದೆ. ಬೊಜ್ಜು ಹೆಚ್ಚಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಆಪರೇಷನ್ ಮೊರೆ ಹೋಗುವವರ ಸಂಖ್ಯೆ ಬಹಳಷ್ಟಿದೆ. ಸೆಲೆಬ್ರಿಟಿಗಳಷ್ಟೇ ಅಲ್ಲ, ಜನಸಾಮಾನ್ಯರು ಸಹ ಲಿಪೋಸಕ್ಷನ್ (ಬೊಜ್ಜು ಕರಗಿಸುವ ಸರ್ಜರಿ) ಮಾಡಿಸಿಕೊಳ್ಳುತ್ತಿದ್ದಾರೆ.
ಹಿಂದೊಮ್ಮೆ, ನಟಿಯರು ಮೈಕೈ ತುಂಬಿಕೊಂಡಿರಬೇಕು ಎಂಬ ಅಲಿಖಿತ ನಿಯಮವೊಂದು ಎಲ್ಲ ಭಾಷೆಯ ಚಿತ್ರರಂಗದಲ್ಲಿತ್ತು. ಅದರಲ್ಲೂ ದಕ್ಷಿಣದಲ್ಲಿ ಇದು ಜಾಸ್ತಿಯೇ ಇತ್ತು ಎಂದರೆ ತಪ್ಪಿಲ್ಲ. ಹಾಗಾಗಿ, ನಟಿಯರು ಸ್ವಲ್ಪ ದಪ್ಪಗಿದ್ದರೂ ಸಮಸ್ಯೆ ಇರುತ್ತಿರಲಿಲ್ಲ ಆದರೆ, ಇದು ಜೀರೋ ಫಿಗರ್ ಕಾಲ. ನಟಿಯರು ತೆಳ್ಳಗೆ, ಬೆಳ್ಳಗೆ ಇರಬೇಕೆಂದು ಬಯಸುವ ಕಾಲ. ಹೀಗಿರುವಾಗ ನಿರಂತರವಾಗಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಸವಾಲು ನಟಿಯರದ್ದಾಗಿರುತ್ತದೆ. ಇದಕ್ಕೆ ಬರೀ ದೈಹಿಕ ಕಸರತ್ತು ಸಾಲದು. ಕೆಲವೊಮ್ಮೆ ವೈದ್ಯಕೀಯ ವ್ಯವಸ್ಥೆಯ ಮೊರೆ ಹೋಗಬೇಕಾಗುತ್ತದೆ. ಬೊಜ್ಜು ಕರಗಿಸುವುದಕ್ಕೆ ಆಪರೇಷನ್ ಮಾಡಿಸಬೇಕಾಗುತ್ತದೆ. ಇದರಲ್ಲಿ ಸಾಕಷ್ಟು ಸೈಡ್ಎಫೆಕ್ಟ್ಗಳು ಇರುತ್ತವೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿರಬಹುದು. ಆದರೆ, ಕ್ರಮೇಣ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತೆಲುಗು ನಟಿ ಆರತಿ ಆಗರ್ವಾಲ್ ನೆನಪಿರಬಹುದು. ತೂಕ ಹೆಚ್ಚಾದ ಕಾರಣ ಅವರು ಲಿಪೋಸಕ್ಷನ್ ಆಪರೇಷನ್ ಮಾಡಿಸಿಕೊಂಡಿದ್ದರು. ಅಡ್ಡ ಪರಿಣಾಮವಾಗಿ ಉಸಿರಾಟದ ಸಮಸ್ಯೆ ಎದುರಾಗಿ ಅವರು ನಿಧನರಾದರು. ಈಗ ಚೇತನಾ ರಾಜ್ ಸಹ ಬೊಜ್ಜು ಕರಗಿಸುವುದಕ್ಕೆ ಆಪರೇಷನ್ ಮಾಡಿಸಿ, ಸಮಸ್ಯೆಯಾಗಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಕೆಲವರಿಗೆ ಮಾರಣಾಂತಿಕ ಸಮಸ್ಯೆ ಎದುರಾಗದಿದ್ದರೂ, ಮೊದಲಿನಂತೆ ಇರುವುದಕ್ಕೆ ಅಥವಾ ಪುನಃ ಚಿತ್ರರಂಗದಿಂದ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವೇ ಆಗಿಲ್ಲ. ಈ ಕುರಿತು ಮಾತನಾಡಿರುವ ನಟಿ ಪ್ರಿಯಾಂಕಾ ಉಪೇಂದ್ರ, ’ಈ ತರಹದ ಚಿಕಿತ್ಸೆ ಪಡೆಯುವ ಮುನ್ನ ತಂದೆ-ತಾಯಿಯ ಗಮನಕ್ಕೆ ತರಬೇಕು. ಅವರು ಹಾಗೆ ಮಾಡಿಕೊಳ್ಳುವುದರಿಂದ ತಂದೆ-ತಾಯಿಗೆ ನಷ್ಟ. ಇನ್ನು, ಒಬ್ಬರ ಆಕಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವಾಗ ಎಚ್ಚರಿಕೆ ವಹಿಸಬೇಕು. ಹಲವರಿಗೆ ತಮ್ಮ ಬಗ್ಗೆ ಬರೆದಿದ್ದನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಕೆಲವರು ಮಾನಸಿಕ ಸಮಸ್ಯೆ ಎದುರಿಸಿದರೆ, ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರ ಬಗ್ಗೆ ಚರ್ಚೆಯಾಗಬೇಕು ಮತ್ತು ಮುಂದಿನ ದಿನಗಳಲ್ಲಿ ಈ ತರಹದ ದುರ್ಘಟನೆ ಆಗದಂತೆ ಎಚ್ಚರ ವಹಿಸಬೇಕು’ ಎನ್ನುತ್ತಾರೆ. ಒಟ್ಟಾರೆ, ಚೇತನಾ ರಾಜ್ ಅವರ ನಿಧನದ ವಿಷಯ ಚಿತ್ರರಂಗಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಇನ್ನಾದರೂ ಈ ನಿಟ್ಟಿನಲ್ಲಿ ಬರೀ ನಟ-ನಟಿಯರಷ್ಟೇ ಅಲ್ಲ, ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಸುಂದರವಾಗಿ ಕಾಣಲು ಅಥವಾ ದೇಹವನ್ನು ಚೆನ್ನಾಗಿಟ್ಟುಕೊಳ್ಳುವುದಕ್ಕೆ ಬೇರೆ ಮಾರ್ಗ ಹಿಡಿಯುವ ಬದಲು ಸರಿಯಾದ ದಾರಿಯಲ್ಲಿ ಮುನ್ನಡೆದರೆ, ಆಗ ಇಂತಹ ದುರಂತಗಳು ಸಂಭವಿಸುವುದಿಲ್ಲ.
ಮಹಿಳೆಯರು ಸಣ್ಣಗಿರಬೇಕು ಎಂಬ ಮಾನದಂಡ ಸೆಟ್ ಮಾಡಿಸಿದವರು ಪುರುಷರು. ನೀವು ಹೇಗಿರಬೇಕು ಎಂಬುದನ್ನು ಜಗತ್ತು ತೀರ್ವನಿಸುವುದಕ್ಕೆ ಬಿಡಬೇಡಿ, ನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ. | ರಮ್ಯಾ ನಟಿ-ಮಾಜಿ ಸಂಸದೆ