ರಾಜಧರ್ಮ- ರಾಜನೀತಿ: ಬಂಗಾರ ಕಳ್ಳಸಾಗಣೆಯ ಜಾಲ ಕೇರಳ

Edit-1
Published on

2019ರ ನವೆಂಬರ್​ನಲ್ಲಿ ಒಂದು ಕೆನಡಾ ಸಂಸ್ಥೆ ವಿಸ್ತಾರವಾದ ವರದಿ ಮಾಡಿತ್ತು. ಅಂಕಿ, ಅಂಶ, ಸಾಗಣೆಯ ಬಂಗಾರದ ಲೆಕ್ಕ ,ಅದರ ಬೆಲೆ, ಮಾರಾಟ, ಏಜೆಂಟರು, ಇಲ್ಲಿನ ಧೂರ್ತರು- ಎಲ್ಲ ಈ ವರದಿಯಲ್ಲಿದೆ. ಬರಿ 700 ಕೆಜಿ ಬಂಗಾರ ಅಲ್ಲ, 2013ರಲ್ಲಿಯೇ 150 ಟನ್ ಬಂಗಾರ ಹೀಗೇ ಭಾರತಕ್ಕೆ ಬಂತು!

ಕೇರಳ ಎಂದರೆ ತಿರುವನಂತಪುರದ ಶ್ರೀ ಅನಂತ ಪದ್ಮನಾಭಸ್ವಾಮಿ, ಗುರುವಾಯೂರು ಶ್ರೀಕೃಷ್ಣ, ಶಬರಿಮಲೈ ಅಯ್ಯಪ್ಪನ ನಾಡು, ಭಗವತೀ ದುರ್ಗೆಯ ದೇವಾಲಯಗಳ-‘ದೇವರನಾಡು’ ಎಂಬುದು ಒಂದು ನಂಬಿಕೆ. ಈ ಚಿತ್ರವನ್ನು ಬದಲಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವವರು ಕಾಮ್ರೇಡರು, ‘ಮಲಪು್ಪರಂ’, ಕನ್ನೂರುಗಳ ಇಸ್ಲಾಮಿ ಧುರೀಣರು- ‘ವೈನಾಡು’ ಮರೆಯದಿರಿ! ಹಿಂದೆ ಮೋಪ್ಲಾ ಹಿಂಸಾಕಾಂಡದ ಮರೆಯಲಾಗದ ಮತಾಂತರ ದೀಕ್ಷಿತರು, ಅರಬ್ಬೀ ನಂಟು ಉಳ್ಳವರು, ಹಾಗೂ ಈಸಾಯಿಗಳು, ಇವರ ಪ್ರೋತ್ಸಾಹಕ ಕಾಂಗ್ರೆಸ್ಸು, ಇನ್ನಿತರ ಸಮಯ ಸಾಧಕರು ಎನ್ನಿ. ಅಶೋಕನ ಸಮಗ್ರ ಭಾರತ ಭೂಪಟದಲ್ಲೂ, ಔರಂಗಜೇಬನ ಮೊಗಲ್ ಭೂಪಟದಲ್ಲೂ ಕೇರಳದ ಸೇರ್ಪಡೆ ಕಾಣುವುದಿಲ್ಲ. ಸೇರಿಸಲು ಹೊರಟ ಟಿಪು್ಪಗೆ ಸುಲ್ತಾನ್ ಬರ್ತೆರಿಯಲ್ಲಿ ಹಿಂದೂಗಳು ಕಾಲನ್ನು ಮುರಿದರು. ಇದೆಲ್ಲ ನಮಗೆ ನೆನಪಾಗುವುದೇ ಇಲ್ಲ.

ಕಾಮ್ರೇಡರ ಬಿಗಿ ಕುಣಿಕೆ ತಪ್ಪಿಸಲು ಮೆನನ್, ನಾಯರ್, ನಂಬೂದ್ರಿ, ‘ಎಳುವ’ (ನಾರಾಯಣ ಗುರು ಶಿಷ್ಯರು) ಜನ ಏನೆಲ್ಲ ಸಾಮಾಜಿಕ, ರಾಜಕೀಯ, ಅಭಿವೃದ್ಧಿ ನೆಲೆಗಳನ್ನು ಹಿಡಿಯಲು ಯತ್ನಿಸಿಯೂ, ಅಲ್ಲಿ ಹಿಂದೂ ರಾಜಕೀಯ ಶಕ್ತಿ ಮೇಲೇಳಲು ಆಗುತ್ತಿಲ್ಲ. ಇದೀಗ ಬಂಗಾರ ಕಳ್ಳಸಾಗಣೆಯ ಜಾಲದಲ್ಲಿ ಸ್ವಪ್ನಾ ಸುರೇಶ್ ಎಂಬ ಮಹಿಳಾ ಮಣಿಯೂ, ರಾಜಕಾರಣಿಗಳು ಅದರಲ್ಲಿ ಪಿಣರಾಯ್ ವಿಜಯನ್ ಇನ್ನಿತರರ ಹೆಸರುಗಳೂ ಕೇಳಿಬರುತ್ತಿವೆ. ಇದೀಗ ಆಪ್ತವಾಗಿ ಕೇರಳದಿಂದ ಬಂದು ತಲುಪಿರುವ ಮಾಹಿತಿಯನ್ನೂ, ಅದರ ಹಿಂದಿನ ಸಂಭವಗಳನ್ನೂ ಇಲ್ಲಿ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಈ ಸ್ವಪ್ನಾ ಸುರೇಶ್ ಎಂಬುವಳು ಯಾರು? ಈಕೆಯ ನಿಜವಾದ ಹೆಸರು ‘ಮಮತಾಜ್ ಇಸ್ಮಾಯಿಲ್’! ಇವಳು 18 ವರ್ಷದವಳಾಗಿದ್ದಾಗ ಲವ್ ಜಿಹಾದ್ ಜಾಲದಲ್ಲಿ ಇಸ್ಮಾಯಿಲ್ ಎಂಬುವನಿಗೆ ಬಲಿಯಾದಳು! ಮತಾಂತರಗೊಂಡಳು. ಗಂಡ ಇಸ್ಮಾಯಿಲ್ ಒಂದು ಖಟ್ಲೆಯಲ್ಲಿ ಸಿಕ್ಕಿ ಜೈಲು ಸೇರಿದ್ದು, ಅಲ್ಲೇ ಇದ್ದಾನೆಂದು ವರದಿ. ಈ ಮತಾಂತರ ಎಲ್ಲಾಯಿತೋ. ಪ್ರಾಯಶಃ ಅರಬ್ಬೀ ದೇಶ ಒಂದರಲ್ಲಿ. ನಂತರ ಈ ಮಮ್ತಾಜ್ ಭಾರತಕ್ಕೆ ಕಳುಹಲ್ಪಡುತ್ತಾಳೆ. ಎಲ್ಲೆಲ್ಲೂ ಆಯಕಟ್ಟು ಜಾಗಗಳಲ್ಲಿ ಇಡಲ್ಪಟ್ಟು ಕ್ರಮೇಣ ಜಾಗ ಬದಲಿಸುತ್ತ ಯುಎಇ ಕಾನ್ಸಲ್ ಜನರಲ್ ಕಚೇರಿಯಲ್ಲಿ ‘ಕಾರ್ಯನಿರತ’, ಸೆಕ್ರೆಟರಿಯಾಗಿ ನಿಯೋಜಿಸಲ್ಪಡುತ್ತಾಳೆ. ‘ಎಕ್ಸಿಕ್ಯೂಟಿವ್’ ಹುದ್ದೆ! ತಿಳಿಯಿತೆ? ಆಕೆ ಓದಿದ್ದು ಬರೀ ಎಸ್​ಎಸ್​ಎಲ್​ಸಿ! ಸಾಕಲ್ಲ? ಅಲ್ಲೊಬ್ಬ ತಿರುವನಂತಪುರದ ಎಂ.ಪಿ ದೋಸ್ತಿ ಇವಳಿಗೆ ಸಿಗುತ್ತದೆ. ಅವನು ಕಾಂಗ್ರೆಸ್ಸಿನ ‘ಹೆವಿವೇಟ್’. ಅವನು ಈಕೆಗೆ ರಕ್ಷಾಕವಚ. ಯಾರು? (ಹೆಸರು ಬೇಡ. ಹೇಳದೆಯೂ ತಿಳಿಯುತ್ತದೆ. ಹೆಂಡತಿ ಸಾವಿನ ಪ್ರಕರಣದಲ್ಲಿ ಹೆಸರು ಕೇಳಿಬಂದಿತ್ತು!) ಅವನು ಕಾಂಗ್ರೆಸ್ಸಿನ ನಾಯಕೋತ್ತಮರ ಒಳ ಹೊರಗು ಬಲ್ಲವನು, ಹೊರಗೆ ಬಂದರೆ ಕೊಲ್ಲುತ್ತಾರೆ. ‘ದ ಮ್ಯಾನ್ ಹೂ ನ್ಯೂ ಟೂ ಮಚ್’ ಆಂಗ್ಲ ಸಿನಿಮಾದ ಕಥೆಯಂತೆ. ಈತ ಅರಬ್ಬರಿಗೆ, ಚೀನೀಯರಿಗೆ, ರಷ್ಯಾ, ಎಲ್ಲ ಕಡೆ ಗೂಢಚರ್ಯು ಪಡೆಯ ಕಾರ್ಯನಿರತ ಚತುರ.

ಪ್ರಬಲ ರಾಜಕೀಯ ಶಕ್ತಿಯ ಬಲವಿಲ್ಲದೇ ಮೋಸ, ಕಳ್ಳಸಾಗಣೆ, ತೆರಿಗೆ ವಂಚನೆ, ಸ್ಮಗ್ಲಿಂಗ್, ಗೂಢಚರ್ಯ, ರಾಜಕೀಯ ಕೊಲೆಗಳು, ನಾನಾ ಹಗರಣಗಳು ನಡೆಯುವುದಿಲ್ಲ. ಎಲ್ಲಾ ಬಯಲಾಗುತ್ತಿವೆಯಲ್ಲಾ? ಈ ಎಂ.ಪಿ ಸಾಹೇಬ 88 ಕೋಟಿ ಹಣವನ್ನು ಈ ಮಮ್ತಾಜಳ ಮೂಲಕ ಭಾರತಕ್ಕೆ , ತನ್ನ ‘ಕುಳ’ಗಳಿಗೆ ಕಳುಹುವುದಿತ್ತು - ಎಲ್ಲಿಂದ ? ಯುಎಇ ಇಂದ. ಅದಕ್ಕೆ ಈ ಮಮ್ತಾಜಳು ‘ರವಾನೆಯ ಯಂತ್ರ’, ಏಜೆಂಟು! ಇದು ಮುಳುಗದ ಹಿಮಗಡ್ಡೆಯ ಬರೀ ಮೇಲುತಾರಿ! ‘ಟಿಪ್ ಆಫ್ ದ ಐಸ್ ಬರ್ಗ್’. ಅಲ್ಲಿ ಶುರುವಾಯಿತು ಬಂಗಾರದ ಕಳ್ಳಸಾಗಣೆಯ ಜಾಲ.

ಒಬ್ಬ ಭಾರತೀಯ ಸಂಜಾತ, ಈಗ ವಿದೇಶೀ- ಇವನಿಗೆ ಭಾರತದಲ್ಲಿ ಹಣ ಹೂಡಿಕೆಯ ಆಸೆ, ಚಪಲ, ‘ಟೆಂಪ್ಟೇಶನ್’ ಹಿಡಿಸಲಾಗುತ್ತದೆ. ಮೊದಲ ಹಂತದಲ್ಲಿ ಯಾವುದೋ ಪ್ರಾಜೆಕ್ಟು. ‘35 ಲಕ್ಷ ರೂಪಾಯಿ ಸಾಕು’ -ಮೊದಲ ಆಮಿಷ. ಇದರ ಫಲ, ಬದುಕಿರುವ ತನಕ, ಹೂಡಿಕೆಯ ಹಣದ ಹತ್ತು ಶೇಕಡ ಲಾಭ ಸಿಗುವ ಆಸೆ ತೋರಿಸುವುದು. ಈ ಹೂಡಿಕೆದಾರನಿಗೆ ಹತ್ತು ತಿಂಗಳಲ್ಲೇ ತಾನು ಹೂಡಿದ ಹಣ ವಾಪಸ್ಸಾಗಿ, ಬದುಕಿರುವ ತನಕ ಉಳಿದ ಸಂಪಾದನೆಯೆಲ್ಲ ಬೋನಸ್! ಹೇಗಿದೆ ಜಾಲ? ಯಾರು ತಾನೇ ಈ ಅವಕಾಶ ಬಿಡುತ್ತಾರೆ? ಎರಡನೆಯ ಹಂತ. ಯುಎಇಯಲ್ಲಿ ಒಂದು ಕೆಜಿ ಬಂಗಾರ ಕೊಳ್ಳುವುದು- ಭಾರತದಲ್ಲಿ ಬೆಲೆ 35 ಲಕ್ಷ ರೂಪಾಯಿ. ಮೂರನೆಯ ಹಂತ- ಈ ಬಂಗಾರವನ್ನು ಇಲ್ಲಿಗೆ ಸಾಗಿಸುವುದು ಹೇಗೆ? ಅದನ್ನು ಆಕ್ಸಿಡೈಸ್ ಎಂಬ ‘ಅರ್ಧ ಘನಾವಸ್ಥೆ’ಗೆ ಪರಿವರ್ತಿಸುವುದು. ಆಗ ಇದನ್ನು ಲೋಹ ಪರೀಕ್ಷೆಯ ಯಂತ್ರ ಗುರುತಿಸುವುದಿಲ್ಲವಂತೆ!

ನಾನು ಇಷ್ಟು ಮೆಟಾಲಜಿ ಶಾಸ್ತ್ರ ತಿಳಿದವನಲ್ಲ್ಲ ನೋಡಿ, ವಿಜ್ಞಾನ, ತಂತ್ರಜ್ಞಾನ, ಮೋಸಗಾರರಿಗೆ ಹೇಗೆಲ್ಲ ಉಪಯುಕ್ತ! ನಾಲ್ಕನೇ ಹಂತ, ಇದನ್ನು ವಿಮಾನದಲ್ಲಿ ಸಾಗಿಸುವುದು. ಸಾಗಿಸಿದ ವ್ಯಕ್ತಿಗೆ ‘ಲಂಚ’, ‘ಪರಿಹಾರ ಧನ’ 50 ಸಾವಿರ ರೂ. ಭಾರತಕ್ಕೆ ಫ್ರೀ ಟಿಕೆಟ್ಟು. ಈಗ ಹೀಗೆ ಭಾರತಕ್ಕೆ ತಂದ ಬಂಗಾರಕ್ಕೆ 40 ಲಕ್ಷ ಬೆಲೆ ಆಗುತ್ತದೆ. ಈ ಹಣವನ್ನು, ಅಲ್ಲಿಂದ ಬಂಗಾರ ರವಾನಿಸಿದವನಿಗೆ ಪಾವತಿ ಮಾಡುವುದು, ಮುಂದಿನ ಹಂತ. ಪಾವತಿ? ‘ಹವಾಲಾ’ ಮೂಲಕ. ಅಲ್ಲಿಗೆ ಕೊಂಡ ಬೆಲೆ 35 ಲಕ್ಷ, ಇಲ್ಲಿ ಮಾರಿದ್ದು 40 ಲಕ್ಷಕ್ಕೆ. ಲಾಭ 5 ಲಕ್ಷ. ಇದರಲ್ಲಿ 1 ಲಕ್ಷ ರೂ. ಏರ್ ಟಿಕೆಟ್ಟಿಗೆ, ತಂದವನ ಕಮಿಷನ್ 50 ಸಾವಿರ ರೂ., ಅಲ್ಲಲ್ಲಿ ಲಂಚ. ಇದನ್ನೆಲ್ಲ ಏರ್ಪಡಿಸಿದವನಿಗೆ ಉಳಿಯುವುದು ಈಗ ಮೂರೂವರೆ ಲಕ್ಷ ರೂಪಾಯಿ! ಇದು ಒಬ್ಬನ ಕಥೆ. ಇಂಥ ನೂರಾರು ಬಂಡವಾಳ ಗಿರಾಕಿಗಳು, ಯುಎಇ ಇಂದ ಅಥವಾ ಅಲ್ಲಿ ನಿಂತ ‘ಭಂಡ’ ಭಾರತೀಯರಿಂದ ನಡೆಸಲ್ಪಡುವ ಈ ಬಂಗಾರ ಸಾಗಣೆಯ ದಂಧೆಯಲ್ಲಿ ಕೇರಳದ ಖದೀಮರು ಸಿರಿವಂತರಾಗದಿರಲು ಸಾಧ್ಯವೆ? ಅದರಲ್ಲಿ ಭಾರತವನ್ನು ಸಾಯಿಸಲು ಹೊರಟ ಕಾಂಗ್ರೆಸ್, ಕಾಮ್ರೇಡರು ಧೂರ್ತರಿಗೆ ಪಾಲು ಎಷ್ಟೆಷ್ಟು? ಯೋಚಿಸಿ. ಪ್ರತಿ ತಿಂಗಳೂ ಸರಾಸರಿ ಐನೂರು ಕೆಜಿ ಬಂಗಾರ ಹೀಗೆ ಕಳ್ಳದಾರಿಯಲ್ಲಿ ಬರುತ್ತಿದೆಯಂತೆ!

ಕೇರಳದ ಸರಾಫ್ ಗಟ್ಟೆಯಲ್ಲಿ ಇದು ದಿನಾ ನಡೆಯುತ್ತ, ಅಲ್ಲಿ ಇದು ಗುಟ್ಟೆನಲ್ಲ್ಲ ಗುಟ್ಟಾಗುವುದು ಮುಗ್ಧ ಹಿಂದೂಗಳಿಗೆ, ಕೇರಳೇತರರಿಗೆ. ಈ ಹಣದಲ್ಲಿ ಎಷ್ಟು ವೋಟು ಕೊಳ್ಳಬಹುದು? ಬಿಟ್ಟಿ ಹಣಕ್ಕೆ ಮಾರಿಕೊಳ್ಳುವ ಮೂಢರಿಂದ ಕೇರಳವನ್ನು ಯಾರು ಹೇಗೆ ರಕ್ಷಿಸಬೇಕು?

ಯುಎಇ ಎಂದೆವಲ್ಲ? ಅರಬ್ಬೀ ದೇಶಗಳಲ್ಲಿ ಬಂಗಾರದ ಗಣಿಗಳಿಲ್ಲವಲ್ಲಾ? ಅಂತ ಹೌಹಾರಬೇಡಿ. ಅದು ಬೇರೆಲ್ಲಿಂದಲೋ ಬಂದ ಮಾಲಿಗೆ, ಇನ್ನೊಂದೆಡೆ ಸಾಗಿಸುವ, ಕಮಿಷನ್ ಏಜೆಂಟಿನಂತೆ ಕೆಲಸ ಮಾಡುವ ಒಂದು ಮಾರುಕಟ್ಟೆ. ಬೇರೆಲ್ಲಿಂದ? ಉಗಾಂಡ ಎಂಬುದೊಂದು ಆಫ್ರಿಕಾ ದೇಶ. ಪಶ್ಚಿಮ ಆಫ್ರಿಕಾದ ಅನೇಕ ದೇಶಗಳು ಬಂಗಾರ ಗಣಿಗಳನ್ನು ಹೊಂದಿವೆ. ಕರಿಯರಿಗೆ ‘ಯಾರಿಗೆ ಮಾರಿದರೆ ಎಷ್ಟು ಲಾಭ?’ ಅಂತ ಸಾಮಾನ್ಯವಾಗಿ ಗೊತ್ತಿರುವುದಿಲ್ಲ. ನಮ್ಮ ಮುಗ್ಧ ರೈತ ಬೆಳೆದುದನ್ನು, ದಲ್ಲಾಳಿ ವರ್ತಕರಿಗೆ ಮಾರಿ, ಅವನು ಕೊಟ್ಟಷ್ಟು ಹಣ ಪಡೆದು, ಮೋಸ ಹೋಗುತ್ತಾನೆ. ಏನೂ ಬೆಳೆಯದ ದಲ್ಲಾಳಿ ಕೊಬ್ಬಿ ಕುಬೇರನಾಗುತ್ತಾನೆ. ಹಾಗೇ ಅರಬ್ಬರ ಬುದ್ಧಿ!

2019ರ ನವೆಂಬರ್​ನಲ್ಲಿ ಒಂದು ಕೆನಡಾ ಸಂಸ್ಥೆ ಈ ಬಗ್ಗೆ ವಿಸ್ತಾರವಾದ ವರದಿ ಮಾಡಿತ್ತು. ಅಂಕಿ, ಅಂಶ, ಸಾಗಣೆಯ ಬಂಗಾರದ ಲೆಕ್ಕ, ಅದರ ಬೆಲೆ, ಮಾರಾಟ, ಏಜೆಂಟರು, ಇಲ್ಲಿನ ಧೂರ್ತರು- ಎಲ್ಲ ಈ ವರದಿಯಲ್ಲಿದೆ. ಬರಿ 700 ಕೆಜಿ ಬಂಗಾರ ಅಲ್ಲ ಸಾಹೇಬರೇ! 2013ರಲ್ಲಿಯೇ 150 ಟನ್ ಬಂಗಾರ ಹೀಗೇ ಭಾರತಕ್ಕೆ ಬಂತು! ಆಗ ಕೇಂದ್ರ ಸರ್ಕಾರ ಯಾರದ್ದು? ‘ಕಸ್ಟಮ್್ಸ’ ಹಿಡಿದದ್ದು ಬರೀ 2.34 ಟನ್ ಮಾತ್ರ ಅಂತ ವರದಿ. ಒಟ್ಟಿನ ಶೇಕಡ 2 ಮಾತ್ರ. ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ 11 ಪೈಕಿ ನಾಲ್ಕು ಕೇರಳದಲ್ಲೇ ಇವೆ! ಏಕೆ? ಹೇಗೆ? ಯೋಚಿಸುತ್ತೀರಾ?

ಕೇಂದ್ರ ಎಂದೆನಲ್ಲ? ಆಗಿನ ಕಾಂಗ್ರೆಸ್ಸು ಅಧಿಕಾರದಲ್ಲಿತ್ತು, ಕಾಮ್ರೇಡರ ಒಳಸ್ನೇಹಿತರು! ಈಗ ಚೀನಾದಿಂದ ರಾಜೀವ್ ಟ್ರಸ್ಟ್​ಗೆ ಹಣ ಬಂದರೆ, ಏನೆಲ್ಲಾ ಕಡೆಯಿಂದ ಹಣ ಸಂಪಾದನೆ ದಾರಿಯನ್ನು ಆ ನಾಯಕರು ಬಿಟ್ಟಾರೆಯೇ? ಈಗ ಸಿಕ್ಕಿ ಬಿದ್ದ ಮಮ್ತಾಜ್ ಇಸ್ಮಾಯಿಲ್, ಪೂರ್ವಾಶ್ರಮದ ಸ್ವಪ್ನಾ ಸುರೇಶಳು ಚೀನಾ, ಪಾಕಿಸ್ತಾನ, ಇಸ್ರೇಲ್, ಇನ್ನಿತರ ದೇಶಗಳ ಗೂಢಚಾರಣಿಯಾಗಿ ಭಾರತದ ಐಟಿ ಇಲಾಖೆ ಹಾಗೂ ಇಸ್ರೋ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದಾಳೆಂದು ವರದಿ! ಅಂದರೆ ಇದು ವಿಷಕನ್ಯೆಯ ಕಥೆ.

ಚೀನೀ ರಾಯಭಾರಿಯೊಬ್ಬಳು, ನೇಪಾಳಿ ಪ್ರಧಾನಿಯನ್ನೇ ಬುಟ್ಟಿಗೆ ಹಾಕಿಕೊಂಡು ಚಳ್ಳೆಹಣ್ಣು ತಿನ್ನಿಸಿ ಭಾರತದ ವಿರುದ್ಧ ಅವನು ಕಾರ್ಯಾಚರಣೆ ನಡೆಸುವಂತೆ ಆದ ವರದಿಗಳನ್ನು ಓದುವಾಗ ನನಗೆ ಭಾರತ ವಿಭಜನೆಯ ಸಂದರ್ಭ, ನೆಹರೂ, ಎಡ್ವಿನಾ ಮೌಂಟ್​ಬ್ಯಾಟನ್ ಇವರ ನೆನಪು ಬರುತ್ತದೆ. ರಾಮ ರಾಮಾ! ಇಂಥ ಸ್ತ್ರೀಯರು ಪುರುಷರಿಗೆ ಸಮಾನ ಮಾತ್ರವಲ್ಲ, ಪುರುಷಾಧಮರಿಗೆ, ಅಧಮರಿಗಿಂತ ಹೆಚ್ಚಿನ ಬಲಾಢ್ಯರು! ಈಗ ಮೋದಿಯವರ ಬ್ರಹ್ಮಚರ್ಯ. ಇಂಥಾ ನಾಯಕರು ಎಲ್ಲ ರಾಜ್ಯಗಳಲ್ಲೂ, ಕೋರ್ಟು, ಆಡಳಿತ ಯಂತ್ರಗಳು, ಪಕ್ಷಗಳು, ಪೊಲೀಸು, ಸೇನೆ, ಪೋಸ್ಟು, ವಿಮಾನ, ಎಲ್ಲೆಲ್ಲೂ ಬೇಕಾಗುತ್ತಾರೆ! ಇಲ್ಲವಾದರೆ ಮಮ್ತಾಜ್​ರಂಥ ಲವ್ ಜಿಹಾದಿಗಳು ಆಟಿಕೆಯ ಆಟವಾಗಿ, ಭಾರತವನ್ನೇ ಮಾರುವುದು ಆಗುತ್ತದೆ. ಆಗಲು ಬಿಡುತ್ತೀರಾ?

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net