

| ಕೇಶವಮೂರ್ತಿ ವಿ.ಬಿ. ಹಾವೇರಿ
ಹಾವೇರಿಯಲ್ಲಿ ಜನವರಿ 6, 7 ಹಾಗೂ 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಕ್ಕಾಗಿ ಭವ್ಯವಾದ ಕನ್ನಡದ ತೇರು ಸಜ್ಜಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ರಥ ನಿರ್ಮಿಸಲಾಗಿದೆ. ಈ ರಥ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಸಂಚರಿಸಿ, ಸಮ್ಮೇಳನಕ್ಕೆ ಬಹಿರಂಗ ಆಹ್ವಾನ ನೀಡಿ ಸ್ವಾಗತ ಕೋರಲಿದೆ. ಶಿಗ್ಗಾಂವಿಯ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ, ಚಿತ್ರಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಷಹಾಜಹಾನ್ ಮುದಕವಿ ನೇತೃತ್ವದ 25 ಕಲಾವಿದರು ಹಾಗೂ ತಂತ್ರಜ್ಞರ ತಂಡ ಈ ರಥ ಸಿದ್ಧಪಡಿಸಿದೆ. ಕೆಎಸ್ಆರ್ಟಿಸಿ ಇದರ ವೆಚ್ಚ ಭರಿಸುತ್ತಿದೆ.
ಬಸ್ಸೊಂದರ ಕವಚವನ್ನು ತೆಗೆದುಹಾಕಿ ಅದರ ಮೇಲೆ ಮೈಸೂರು ದಸರಾ ಸ್ತಬ್ಧಚಿತ್ರದ ಮಾದರಿಯಲ್ಲಿ ಭವ್ಯ ರಥ ಸಿದ್ಧಪಡಿಸಲಾಗಿದೆ. ಧ್ವನಿ&ಬೆಳಕಿನ ವ್ಯವಸ್ಥೆ ಮಾಡಿ, ಎಲ್ಇಡಿ ಪರದೆ ಅಳವಡಿಸಲಾಗಿದ್ದು, ಇದರಲ್ಲಿ ನಿರಂತರವಾಗಿ ಕನ್ನಡ ನಾಡು, ನುಡಿಗೆ ಸಂಬಂಧಿಸಿದ ದೃಶ್ಯಾವಳಿಗಳು ಪ್ರಸಾರವಾಗಲಿವೆ. ರಥದ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ಮಂಟಪಗಳನ್ನು ಮಾಡಲಾಗಿದೆ. ಅದರ ಮೇಲೆ ತಾಯಿ ಭುವನೇಶ್ವರಿ ದೇವಿಯ ಒಂದೊಂದು ವಿಗ್ರಹ ಇಡಲಾಗಿದೆ. ಮಧ್ಯ ಭಾಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸತ 8 ಕನ್ನಡ ಸಾಹಿತಿಗಳ ಭಾವಚಿತ್ರ, ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸತಿ ಸಚಿವ ಸುನೀಲ್ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಸಮ್ಮೇಳನ ಸರ್ವಾಧ್ಯಕ್ಷ ಪ್ರೊ. ದೊಡ್ಡರಂಗೇಗೌಡ, ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಮತ್ತಿತರರ ಭಾವಚಿತ್ರ ಅಳವಡಿಸಲಾಗಿದೆ.
ಮೈಸೂರು ದಸರಾ ಸ್ತಬ್ಧಚಿತ್ರದ ಮಾದರಿ ಯಲ್ಲಿ ಕನ್ನಡ ರಥ ನಿರ್ಮಿಸಲಾಗಿದೆ. ರಥದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಸಣ್ಣ ಪುಟ್ಟ ಕೆಲಸ ಮಾತ್ರ ಬಾಕಿ ಇದೆ. | ಪ್ರೊ. ಷಹಾಜಹಾನ್ ಮುದಕವಿ ಕನ್ನಡ ರಥದ ಉಸ್ತುವಾರಿ
ಕನ್ನಡ ಸಾಮ್ರಾಜ್ಯದ ಕುಲದೇವತೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಭುವನಗಿರಿಯಲ್ಲಿರುವ ಭುವನೇಶ್ವರಿ ದೇವಿ ಕನ್ನಡ ಸಾಮ್ರಾಜ್ಯದ ರಾಜರ ಕುಲದೇವತೆ. ಈ ದೇವಾಲಯ ಎತ್ತರದ ಗಿರಿ ಪ್ರದೇಶದಲ್ಲಿದ್ದು ಭಕ್ತರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. 125 ಮೆಟ್ಟಿಲುಗಳನ್ನು ಏರಿ ಒಮ್ಮೆ ಸುತ್ತಲೂ ವೀಸಿದರೆ ಕಣ್ಮನ ತಣಿಸುವ ಹಸಿರು ಸಿರಿ ಕಾಣುತ್ತದೆ. ಕನ್ನಡ ತಾಯಿ ಭುವನೇಶ್ವರಿ ಇಲ್ಲಿ ಶಾಂತಚಿತ್ತಳಾಗಿ ವಿರಾಜಮಾನ-ಳಾಗಿದ್ದು, ಭಕ್ತರ ಪಾಲಿನ ಶ್ರದ್ಧಾಕೇಂದ್ರವಾಗಿದೆ. ಸಿದ್ದಾಪುರ ತಾಲೂಕು ಬಿಳಗಿ ಹಿಂದೆ ಪ್ರಮುಖ ಸಂಸ್ಥಾನವಾಗಿತ್ತು. ಇದು ಹಿಂದೆ ವಿಜಯನಗರ ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು. ಬಿಳಗಿಯ ರಾಜ ಬಸವೇಂದ್ರ ಕ್ರಿ.ಶ. 1692ರಲ್ಲಿ ಶಿಲಾಮಯವಾದ ಭುವನೇಶ್ವರಿ ದೇವಾಲಯ ಕಟ್ಟಸಿ ನಿತ್ಯ ಪೂಜೆಯ ವ್ಯವಸ್ಥೆ ಮಾಡಿದ್ದರು. ಯಾತ್ರಾರ್ಥಿಗಳಿಗಾಗಿ ದೇವಾಲಯದ ದಾರಿ ಸಮೀಪ ಎಂದಿಗೂ ನೀರು ಬತ್ತದ ಕೆರೆಯೊಂದನ್ನು ಅವರು ಕಟ್ಟಿಸಿದರು. ಇಂದಿಗೂ ಈ ಕೆರೆ ಕಣ್ಮನ ಸೆಳೆಯುತ್ತಿದೆ. ಇಂದಿಗೂ ನಿತ್ಯಪೂಜೆ, ಪ್ರತಿ ವರ್ಷ ದೇವಾಲಯದಲ್ಲಿ ಮಹಾರಥೋತ್ಸವ, ದೀಪೋತ್ಸವ ನಡೆಯುತ್ತಿವೆ. ಹಲವು ವರ್ಷಗಳಿಂದ ನ. 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾತೃವಂದನಾ ಕಾರ್ಯಕ್ರಮ ನಡೆಯುತ್ತಿದೆ. ವರ್ಷವಿಡೀ ವಿವಿಧ ಧಾರ್ಮಿಕ, ಸಾಂಸತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ. ರಥಕ್ಕೆ ಇಂದು ಚಾಲನೆ ಕನ್ನಡದ ರಥದ ಸಂಚಾರಕ್ಕೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಭುವನಗಿರಿಯ ಭುವನೇಶ್ವರಿದೇವಿ ದೇವಸ್ಥಾನದಲ್ಲಿ ಡಿ.1ರಂದು ಚಾಲನೆ ನೀಡಲಾಗುವುದು. ಭುವನೇಶ್ವರಿ ದೇವಿಯ ಸನ್ನಿಧಿಯಿಂದ ದೀಪವನ್ನು ರಥದಲ್ಲಿ ಪ್ರಜ್ವಲಿಸಲಾಗುವುದು. ಅಲ್ಲಿಂದ ರಥ ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಜ. 6ರಂದು ಹಾವೇರಿಯ ಸಮ್ಮೇಳನವನ್ನು ಇದೇ ದೀಪದಿಂದ ಉದ್ಘಾಟಿಸಲಾಗುವುದು. ಮೊದಲ ಬಾರಿಗೆ ಈ ಪ್ರಯೋಗ ಮಾಡಲಾಗುತ್ತಿದ್ದು, ಈ ಪರಂಪರೆ ಮುಂದುವರಿಸಲಾಗುವುದು ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ.
ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕನ್ನಡದ ರಥ ಹೊರಡಿಸ-ಲಾಗುತ್ತಿದೆ. ಈ ಮೂಲಕ ರಾಜ್ಯಾದ್ಯಂತ ಹಾವೇರಿ ಸಮ್ಮೇಳನದ ಕುರಿತು ಪ್ರಚಾರ ಕಾರ್ಯ ಮಾಡಲಾಗುವುದು. | ಡಾ. ಮಹೇಶ ಜೋಶಿ ಕಸಾಪ ಅಧ್ಯಕ್ಷ