

ಮಲ್ಲಿಗೆ ಗಿಡಗಳು ಸೊರಗು ರೋಗದಿಂದ ಒಣಗಿ ಹೊಗುತ್ತಿದ್ದು, ಇದನ್ನು ನಿಯಂತ್ರಿಸುವುದು ಹೇಗೆ?
| ಬಸವರಾಜ್ ಪಾಟೀಲ್ ಬಳ್ಳಾರಿ ತಾಲೂಕು
ಗಿಡದ ಕೆಳಗಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ತುದಿ ಎಲೆಗಳೂ ಹಳದಿ ಬಣ್ಣಕ್ಕೆ ತಿರುಗುತ್ತವೆ. ಆನಂತರ ರೋಗಕ್ಕೆ ತುತ್ತಾದ ಗಿಡವು ಒಣಗಿ ಸಾಯುತ್ತದೆ. ಬಾಧಿತ ಗಿಡಗಳನ್ನು ನಾಶಪಡಿಸಿ ಆ ಭೂಮಿಯನ್ನು ಶೇ.0.3ರ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ತೋಯಿಸಬೇಕು. ಅಥವಾ ಪ್ರತಿ ಗಿಡಕ್ಕೂ 1 ಗ್ರಾಂ ಕಾರ್ಬಂಡೈಜಿಮ್ 1 ಲೀ. ನೀರಿನಲ್ಲಿ ಬೆರೆಸಿ, ದ್ರಾವಣವನ್ನು ಗಿಡದ ಬುಡದ ಸುತ್ತ ಸುರಿಯಬೇಕು. ಕಾಂಪೋಸ್ಟ್ ಗೊಬ್ಬರ ಹಾಗೂ ಬೇವಿನ ಹಿಂಡಿಯನ್ನು ಯಥೇಚ್ಛವಾಗಿ ಬಳಸಬೇಕು.
| ಪ್ರಿಯಾಂಕ ಬಿ. ಸಸ್ಯರೋಗ ತಜ್ಞರು