ಜನಮತ: ಯುವ ಮನಸುಗಳಿಗೆ ಕಿವಿಮಾತು ಸ್ವಾಗತಾರ್ಹ

Janamata
Published on

ಪ್ರಧಾನಮಂತ್ರಿಗಳು ಇತ್ತೀಚೆಗೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಸಿದ್ದು ಸ್ವಾಗತಾರ್ಹ. ಧನಾತ್ಮಕ ಮನೋಧೋರಣೆ, ಪೋ›ತ್ಸಾಹ, ಆಸಕ್ತಿ, ಛಲದಂಥ ಮೌಲ್ಯಗಳನ್ನು ತುಂಬುವ ಇಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿ, ಪರೀಕ್ಷಾ ಭಯ ಹೋಗಲಾಡಿಸುವಲ್ಲಿ ಪೂರಕವಾಗಿ ಪರಿಣಮಿಸುತ್ತವೆ.

ಯುವ ಮನಸ್ಸುಗಳಲ್ಲಿ ಕನಸುಗಳು ತುಂಬುವ ಕಾರ್ಯಕ್ರಮವನ್ನು ಆಗಾಗ ಪ್ರಧಾನಮಂತ್ರಿಗಳು ನಡೆಸಬೇಕು. ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆ, ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತುವ ಸಂವಾದಗಳು ಹೆಚ್ಚಬೇಕು. ಈ ಮೂಲಕ ಭರವಸೆಯ ಬೆಳಕು ಮೂಡಿಸಬೇಕು. ಹೊಸ ಆಶೋತ್ತರಗಳ ಮೂಲಕ ಕೌಶಲಭರಿತ ಮಾನವ ಸಂಪನ್ಮೂಲ ಸಿದ್ಧಗೊಳಿಸಲು ಪ್ರಧಾನಿ ಮಾತುಗಳು ಯುವ ಮನಸುಗಳಿಗೆ ಸ್ಪೂರ್ತಿಯಾಗಬೇಕು.

| ಪ್ರಹ್ಲಾದ್ ವಾ ಪತ್ತಾರ, ಯಡ್ರಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net