ಜನಮತ; ಕಣ್ಣು ತೆರೆಸಿದ ಲೇಖನ

Janamata
Published on

‘ಕಾರ್ಯಕ್ರಮದಲ್ಲಿ ಶೋಕಿ ಬೇಡ, ಶೂನ್ಯಕಸವಾಗಿಸೋಣ’ ಎಂಬ ತೇಜಸ್ವಿನಿ ಅನಂತಕುಮಾರ್ ಅವರ ಲೇಖನ (ವಿಜಯವಾಣಿ ಜನವರಿ 30) ವಾಸ್ತವವನ್ನು ಮನದಟ್ಟು ಮಾಡಿಕೊಟ್ಟಿತು.

ಅವರು ನೀಡಿರುವ ಉಪಯುಕ್ತ, ವಿವೇಕಯುತ ಸಲಹೆಗಳು ಎಲ್ಲರೂ ಆಚರಣೆಗೆ ತರಬೇಕಾದ್ದೇ. ಸಮಾರಂಭಗಳಲ್ಲಿ ಅತಿಥಿ ಸ್ವಾಗತ ಕಮಿಟಿ, ಆಹಾರ ಸಮಿತಿ, ಸಭಾಲಂಕಾರ... ಇತ್ಯಾದಿಗಳು ಇರುವಂತೆ, ಪರಿಸರಕಾಳಜಿಗೂ ಸಮಿತಿ ಮಾಡಬೇಕು. ಛತ್ರಗಳಲ್ಲಿ, ಆಯಾ ತಿಂಗಳ ಮದುವೆ ತ್ಯಾಜ್ಯಗಳ ಅಂದಾಜು ಕೊಡಬೇಕು. ಸ್ಥಳೀಯ ಕಾರ್ಪೆರೇಟರ್​ಗಳಿಗೆ ಇದರ ಮಾಹಿತಿ ಕೊಡಬೇಕು.

ವಧು-ವರರ ತಂದೆ-ತಾಯಿಗಳಿಗೆ ಮದುವೆ ಹಾಲ್​ಗಳ ವ್ಯವಸ್ಥಾಪಕರು ಅರಿವು ಮೂಡಿಸಿ ಕಸ ತುಂಬ ಕಡಿಮೆಯಾಗುವಂತೆ (ಶೂನ್ಯಕಸವಾದರೆ ಉತ್ತಮ) ಮಾಡಬೇಕು. ಯುವಜೋಡಿಗಳು ಕೈ ಜೋಡಿಸಿ, ಪ್ರಕೃತಿಮಾತೆಯ ಸೌಂದರ್ಯ ಹೆಚ್ಚಿಸಬೇಕು. ತಾವಷ್ಟೇ ಸಿಂಗರಿಸಿಕೊಳ್ಳುವುದಲ್ಲ.

ಭೂಮಿತಾಯಿಯನ್ನು, ಗಂಗೆಯನು ಬರೀ ಹಾಡಿ, ಪೂಜಿಸುವುದಲ್ಲ. ಆರೋಗ್ಯಕರ ಕಾಳಜಿಯಿಂದ ರಕ್ಷಿಸೋಣ, ಸ್ವಚ್ಛ ಪರಿಸರ-ಸ್ವಚ್ಛ ಭಾರತ ಕಟ್ಟೋಣ. ಇಂಥ ಉಪಯುಕ್ತ ಲೇಖನಕ್ಕಾಗಿ ತೇಜಸ್ವಿನಿ ಅವರಿಗೂ, ವಿಜಯವಾಣಿಗೂ ಧನ್ಯವಾದಗಳು.

| ಸ್ವರೂಪ್ ಬೆಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net