ಜನಮತ; ನಿರುದ್ಯೋಗ ಸಮಸ್ಯೆ ನಿವಾರಿಸಿ

Janamata
Published on

ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ನಿರುದ್ಯೋಗ ಸಮಸ್ಯೆಯಿಂದ ಯುವಕರ ಆತ್ಮಹತ್ಯೆ ಪ್ರಕರಣಗಳು ದಿನನಿತ್ಯ ವರದಿಯಾಗುತ್ತವೆ. ಪ್ರಜೆಗಳು ಪ್ರಜ್ಞಾವಂತರಾದರೆ ಪ್ರಜ್ಞಾವಂತ ಸಮಾಜ ರೂಪಿಸಲು ಸಾಧ್ಯ. ಜನರು ಭವಿಷ್ಯದ ಬಗ್ಗೆ ಚಿಂತಿಸದೆ ಆಮಿಷಕ್ಕೊಳಗಾಗಿ, ಸುಳ್ಳಿನ ಆಶ್ವಾಸನೆಗೆ ಬಲಿಯಾಗಿ ಮೋಸ ಹೋಗುತ್ತಿದ್ದಾರೆ. ಅದರ ಬದಲು ಜನರು ಎಚ್ಚೆತ್ತು ಕೆಲ ಪ್ರಾಯೋಗಿಕ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕು.

  • ಆಯಾ ಕ್ಷೇತ್ರದಲ್ಲಿರುವ ನಿರುದ್ಯೋಗಿಗಳ ಪಟ್ಟಿ ಮಾಡಿ, ಅವರ ಕೌಶಲಕ್ಕೆ ತಕ್ಕಂತೆ ಉದ್ಯೋಗ ಕಲ್ಪಿಸಿಕೊಡಬೇಕು.
  • ಈ ನಿಟ್ಟಿನಲ್ಲಿ 3 ಅಥವಾ 6 ತಿಂಗಳಿಗೊಮ್ಮೆ ನಿರುದ್ಯೋಗಿಗಳ ಪಟ್ಟಿ ತಯಾರಿಸಬೇಕು.ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು.
  • ವಾರಕ್ಕೊಮ್ಮೆ ಕ್ಷೇತ್ರದ ಒಂದು ಊರಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿ ಅರಿಯಬೇಕು, ಕುಂದುಕೊರತೆಗಳನ್ನು ಆಲಿಸಬೇಕು.
  • ಕ್ಷೇತ್ರದಲ್ಲಿರುವ ಪ್ರತಿಭಾವಂತರಿಗೆ ಸಹಾಯ ಮಾಡಲು ಮುಂದಾಗಬೇಕು.
  • ಬಡವರಿಗಾಗಿ ಇರುವ ಯೋಜನೆಗಳು ಸಮರ್ಪಕವಾಗಿ ಅವರಿಗೆ ತಲುಪಿಸಬೇಕು.
  • ಯುವಕರಿಗೆ, ವಿದ್ಯಾರ್ಥಿಗಳಿಗೆ, ಪ್ರತಿಭಾವಂತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಈ ಕ್ರಮಗಳನ್ನು ಸರಿಯಾಗಿ ಪಾಲಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

| ಬಿ.ಆರ್. ಸಂತೋಷ ಜಾಬೀನ್ ಸುಲೇಪೇಟ (ಚಿಂಚೊಳಿ ತಾಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net