ಜನಮತ; ಪ್ರಯಾಣ ದರ ಏರಿಕೆ ಬೇಡ

Janamata
Published on

ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯ ಕೆಎಸ್​ಆರ್​ಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡ 12ರಷ್ಟು ಏರಿಕೆ ಮಾಡಿರುವುದು ಅಕ್ಷೇಪಾರ್ಹ ಸಂಗತಿಯಾಗಿದೆ. ಈ ಮೊದಲೇ ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಕಂಗೆಟ್ಟಿರುವ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಸರ್ಕಾರದ ಈ ‘ದರಪ್ರಹಾರ’ದ ತೀರ್ವನದಿಂದ ಇನ್ನಷ್ಟು ಕಠಿಣವಾಗಲಿದೆ.

ಅಲ್ಲದೆ, ಈಗಾಗಲೇ ಸಾರ್ವಜನಿಕರಿಂದ ದೂರ ಆಗುತ್ತಿರುವ ಸಮೂಹ ಸಾರಿಗೆ ವ್ಯವಸ್ಥೆ ಈ ನಿರ್ಧಾರದಿಂದ ಇನ್ನಷ್ಟು ದೂರ ಸರಿಯಲಿದೆ. ಹೀಗಾಗಿ ಸರ್ಕಾರ ಡೀಸೆಲ್ ದರ ಹೆಚ್ಚಳದ ನೆವ ಹೇಳದೆ ಈಗೀರುವ ಪ್ರಯಾಣದರವನ್ನೇ ಮುಂದುವರಿಸಬೇಕು. ಹಾಗೂ ತನ್ನ ನಷ್ಟವನ್ನು ಬೇರೆ ಉಪಾಯ ಕ್ರಮಗಳ ಮೂಲಕ ಪರಿಹರಿಸಿಕೊಳ್ಳಬೇಕು.

| ರೂಪೇಶ್ ಬೆಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net