

ಮೌಲ್ಯಯುತ ಶಿಕ್ಷಣ, ಪಠ್ಯದಲ್ಲಿ ರಾಷ್ಟ್ರಭಕ್ತಿಗೆ ಹೆಚ್ಚಿನ ಒತ್ತು ನೀಡುವ ಕುರಿತಂತೆ ಪ್ರಸಕ್ತ ಬಜೆಟ್ನಲ್ಲಿ ಪ್ರಸ್ತಾಪಿಸಬೇಕಿತ್ತು. ಸಮಾಜದಲ್ಲಿ ನಡೆಯುತ್ತಿರುವ ಅನಾಹುತ, ಭ್ರಷ್ಟಾಚಾರ, ಹಿಂಸೆ, ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು, ಮಕ್ಕಳು ಸಂಸ್ಕಾರವಂತರಾಗಲು ಮೌಲ್ಯ ಶಿಕ್ಷಣ ತುಂಬ ಅಗತ್ಯ.
ಇಂದಿನ ಅನೇಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಸ್ಯೆಗಳಿಗೆ ರಾಷ್ಟ್ರವಾದದ ಶಿಕ್ಷಣವೇ ಪರಿಹಾರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮುಂದೆಯಾದರೂ ಉತ್ತಮ ಹೆಜ್ಜೆ ಇರಿಸಲಿ.
| ಎಂ.ಪರಮೇಶ್ವರ ಮದ್ದಿಹಳ್ಳಿ (ಹಿರಿಯೂರು ತಾಲ್ಲೂಕು)