ಬೀದರನ ಶಾಹಿನ ಕಾಲೇಜ್ನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನಾಟಕ ಮಾಡಿಸಿ ಎನ್ಆರ್ಸಿ, ಸಿಎಎ ವಿರೋಧಿಸುವ ಭರದಲ್ಲಿ ದೇಶದ ಪ್ರಧಾನಿಯವರನ್ನು ಅವಮಾನಿಸಿರುವ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಪುಲ್ವಾಮಾ ದಾಳಿಯನ್ನು ಸಮರ್ಥಿಸಿ ಪಾಕಿಸ್ತಾನದ ಪರ ಘೊಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟುರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ನಮ್ಮ ದೇಶದಲ್ಲಿ ಉಳಿದು, ಇಲ್ಲಿಯ ಅನ್ನ ತಿಂದು ಪಾಕಿಸ್ತಾನದ ಪರ ಘೊಷಣೆ ಕೂಗುವ ಇಂತಹ ದೇಶವಿರೋಧಿ ಮನಸ್ಥಿತಿಯವರಿಗೆ ತಕ್ಕ ಶಿಕ್ಷೆಯಾಗಬೇಕು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನಿನಲ್ಲಿ ಸೂಕ್ತ ಬದಲಾವಣೆ ತಂದು ದೇಶದ ವಿರುದ್ಧ ಮಾತನಾಡುವವರಿಗೆ ಕಠಿಣ ಶಿಕ್ಷೆ ವಿಧಿಸಿದರೆ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ. ದೇಶವಿರೋಧಿ ಘೊಷಣೆ ಹಾಗೂ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಯಾವದೇ ಪಕ್ಷದ ನಾಯಕರು ನೆರವು ನೀಡಬಾರದು ಹಾಗೂ ಅಂಥವರ ಪರ ಯಾವೊಬ್ಬ ವಕೀಲರೂ ವಾದಿಸಬಾರದು.