

ಅಗತ್ಯ ವಸ್ತುಗಳ ದರ ಏರಿಕೆಯಿಂದ ಬಸವಳಿದಿರುವ ಜನಸಾಮಾನ್ಯರಿಗೆ ಈಗ ಅಡುಗೆಎಣ್ಣೆ ದರ ಏರಿಕೆ ಆಘಾತ ನೀಡಿದೆ. ಭಾರತ ಜಗತ್ತಿನ ಅತಿ ದೊಡ್ಡ ಅಡುಗೆಎಣ್ಣೆ ಆಮದುದಾರ ದೇಶವಾಗಿದೆ. ಕೋವಿಡ್ ಕಾರಣದಿಂದಾಗಿ ಪಾಮ್ ಸನ್ಫ್ಲಾವರ್ ಮೊದಲಾದ ಎಣ್ಣೆಗಳ ಆಮದು ಕುಸಿತವಾಗಿದೆ. ಇದಲ್ಲದೆ ಅತಿವೃಷ್ಟಿಯಿಂದಾಗಿ ಶೇಂಗಾ, ಸೂರ್ಯಕಾಂತಿ, ಸೋಯಾಬಿನ್, ಸಾಸಿವೆ ಮುಂತಾದ ಬೆಳೆಗಳಿಗೆ ಹಾನಿಯಾಗಿದ್ದು, ಎಣ್ಣೆಬೀಜಗಳ ಉತ್ಪಾದನೆಯಲ್ಲೂ ಇಳಿಕೆಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಅಡುಗೆಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿದೆ, ಜನರು ಸಮಸ್ಯೆ ಎದುರಿಸುವಂತಾಗಿದೆ.
ಕರೊನಾದ ಆರ್ಥಿಕ ಸಂಕಷ್ಟದ ನಡುವೆಯೇ ಬೆಲೆಏರಿಕೆಯ ಭಾರ ಮತ್ತಷ್ಟು ಕಂಗೆಡಿಸಿದೆ. ಅಡುಗೆಎಣ್ಣೆ ದರ ನಿಯಂತ್ರಿಸಲು ಆಮದು ಸುಂಕ ಕಡಿಮೆ ಮಾಡಬೇಕು. ಆಮದು ಪ್ರಮಾಣ ಕಡಿಮೆ ಮಾಡಲು, ವಿದೇಶಗಳ ಅವಲಂಬನೆ ತಪ್ಪಿಸಲು ಭಾರತದಲ್ಲಿ ಅಡುಗೆಎಣ್ಣೆ ಉತ್ಪಾದನೆ ಹೆಚ್ಚಾಗುವಂತೆ ಕ್ರಮಗಳನ್ನು ರೂಪಿಸಬೇಕು. ಹೆಚ್ಚು ಇಳುವರಿ ಬರಲು ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ, ಸಲಕರಣೆ ಜತೆ ಪ್ರೋತ್ಸಾಹ ಧನ ಒದಗಿಸಬೇಕು. ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಲಿ.
| ಉದಯ ಯಂಡಿಗೇರಿ ಧಾರವಾಡ