ಜನಮತ | ಗ್ರಂಥಪಾಲಕರ ನೇಮಕಾತಿಗೆ ತಿಲಾಂಜಲಿ

Janamatha E
Published on

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 150 ಕಾಲೇಜುಗಳಲ್ಲಿ ಗ್ರಂಥಪಾಲಕರ ಹುದ್ದೆ ಖಾಲಿ ಇದ್ದು, ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಂಥಾಲಯದ ಬಳಕೆ ವಿದ್ಯಾರ್ಥಿಗಳಿಗೆ ದೊರೆಯದಂತಾಗಿದೆ. 12 ವರ್ಷಗಳಿಂದ ಗ್ರಂಥಪಾಲಕರ ನೇಮಕಾತಿಯನ್ನು ನಡೆಸದ ಇಲಾಖೆ ಈಗ ಗ್ರಂಥಾಲಯದ ಪ್ರಭಾರವನ್ನು ಸಹಾಯಕ ಪ್ರಾಧ್ಯಾಪಕರಿಗೆ ಕಡ್ಡಾಯವಾಗಿ ನೀಡಲು ಉಲ್ಲೇಖಿಸಿ, ನವೆಂಬರ್ 10ರಂದು ಸುತ್ತೋಲೆ ಹೊರಡಿಸಿದೆ.

ಈ ಮೂಲಕ ಗ್ರಂಥಪಾಲಕರ ನೇಮಕಾತಿಗೆ ತಿಲಾಂಜಲಿ ನೀಡಲು ಹೊರಟಿದೆ. ಇದರಿಂದಾಗಿ ಉದ್ಯೋಗದ ಕನಸು ಹೊತ್ತಿರುವ ಗ್ರಂಥಾಲಯ ವಿಜ್ಞಾನದ ನೂರಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿಯೇ ಉಳಿಯುವಂತಾಗಿದೆ. ಅದಲ್ಲದೆ ಪ್ರಭಾರ ವಹಿಸಿಕೊಳ್ಳಲಿರುವ ಸಹಾಯಕ ಪ್ರಾಧ್ಯಾಪಕರು ಅವರು ನೇಮಕ ಹೊಂದಿದ ಹುದ್ದೆಗೆ ನ್ಯಾಯ ಒದಗಿಸಲು ಸಾಧ್ಯವೇ ಎಂದು ಇಲಾಖೆ ಚಿಂತನೆ ನಡೆಸಲಿ. ಶೀಘ್ರದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯೊಂದಿಗೆ ಗ್ರಂಥಪಾಲಕರ ನೇಮಕಾತಿಯನ್ನೂ ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿಕೊಡಬೇಕಾಗಿದೆ.

| ಜಿ.ಮಂಜುನಾಥ ಸಿರಿಗೆರೆ (ಚಿತ್ರದುರ್ಗ ತಾಲ್ಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net