

ವಿದೇಶಿ ನೆರವು ಮತ್ತು ವಿರೋಧ ಪಕ್ಷಗಳ ಸಹಕಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನಿಜವಾದ ರೈತರಿಗೆ ಅಸಹ್ಯ ಪಡುವಂತೆ ಮಾಡಿದೆ. ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿದರೂ ಉದ್ಧಟತನವನ್ನು ತೋರಿಸುವ ಪ್ರವೃತ್ತಿ ನನ್ನಂಥ ಅನೇಕ ರೈತರಿಗೆ ನೋವುಂಟು ಮಾಡಿದೆ. ಯಾವುದೇ ಸಮಸ್ಯೆಯನ್ನು ಮುಕ್ತ ಮನಸ್ಸಿನಿಂದ, ಸಂವಾದದ ಮೂಲಕ ಪರಿಹರಿಸಲು ಸಾಧ್ಯ. ದಿನಕ್ಕೊಂದು ಹೊಸ ಶರತ್ತು ಒಡ್ಡಿ ವಿರೋಧ ಪಕ್ಷಗಳ ಗೌಪ್ಯಬೆಂಬಲ, ರಹಸ್ಯವಾಗಿ ವಿದೇಶಿ ದೇಣಿಗೆ ಪಡೆದು ದೊಂಬಿ, ಗಲಭೆ ಹುಟ್ಟು ಹಾಕಿ ಭವ್ಯ ಭಾರತದ ಭದ್ರತೆಗೆ ಸವಾಲಾಗಿರುವ ‘ಸೋಕಾಲ್ಡ್’ ರೈತ ಪ್ರತಿನಿಧಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದೇಶವನ್ನು ಒಡೆಯುವ ದುಷ್ಟರ ಸಂಹಾರಕ್ಕೆ ಕೇಂದ್ರ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಲೇಬೇಕು. ಅನಾವಶ್ಯಕ ಪ್ರತಿಭಟನೆಗಳಿಗೆ ಕಡಿವಾಣ ಹಾಕಲೇಬೇಕು. ಕರೊನಾ ಪಿಡುಗನ್ನು ಸಮರ್ಥ ರೀತಿಯಲ್ಲಿ ಎದುರಿಸಿ ವಿಶ್ವದ ವಿಶ್ವಾಸ, ಪ್ರಶಂಸೆಗೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿಯವರು ಈ ಅಗ್ನಿಪರೀಕ್ಷೆಯನ್ನು ದಿಟ್ಟಹೆಜ್ಜೆ ಇಟ್ಟು ವಿಜಯಿಯಾಗಿ ಹೊರಬರಲು ಒಂದು ವೇದಿಕೆ. ರಾಷ್ಟ್ರದ ಹಿತ ನಮ್ಮೆಲ್ಲರ ಹಿತ ಮತ್ತು ಆದ್ಯತೆಯಾಗಲಿ.
| ಕೆ.ವಿ.ಸೀತಾರಾಮ್ ಮಂಗಳೂರು