ಜನಮತ; ಕನ್ನಡ ಕಾಳಜಿ ಮೆರೆಯೋಣ

Janamata
Published on

ವಿಷಯ ಸಣ್ಣದಿರಬಹುದು, ಆದರೆ ಭಾಷೆಯ ವಿಷಯದಲ್ಲಿ ಪ್ರತಿಯೊಂದು ಸಣ್ಣ ವಿಷಯವೂ ದೂರಗಾಮಿ ಪರಿಣಾಮ ಬೀರಬಹುದಾದ ಸಾಧ್ಯತೆ ಇರುತ್ತದೆ. ಬ್ಯಾಂಕಿನಲ್ಲಿ ಕನ್ನಡ ಬಾರದ ಸಿಬ್ಬಂದಿ ಇರುತ್ತಾರೆ, ಅವರೊಡನೆ ಸಂವಹನ ಸಾಧ್ಯವಿಲ್ಲ.

ಪತ್ರ ವ್ಯವಹಾರದಲ್ಲಿ, ಪಾಸ್​ಬುಕ್ಕಿನಲ್ಲಿ ಕನ್ನಡ ಇಲ್ಲ, ಎಟಿಎಂನಲ್ಲಿ ಕನ್ನಡ ಇಲ್ಲ, ಹೀಗೆ ವಿವಿಧ ಹಂತದಲ್ಲಿ ಕನ್ನಡ ಮಾಯವಾಗುತ್ತಿದೆ ಎಂಬ ಆಪಾದನೆ ಮಾಡುವ ನಾವು ನಮ್ಮನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಬ್ಯಾಂಕಿಗೆ ಹಣ ಪಾವತಿಸುವ ನಮೂನೆಯಿರಲಿ, ಹಣ ಹಿಂದೆಗೆಯುವ ನಮೂನೆಯಿರಲಿ, ಅದರಲ್ಲಿ ಆಂಗ್ಲ ಭಾಷೆಯ ಜತೆಗೆ ಕನ್ನಡ ಕೂಡ ಇರುತ್ತದೆ.

ಆದರೆ ಎಷ್ಟು ಜನ ಕನ್ನಡದಲ್ಲಿ ಭರ್ತಿ ಮಾಡುತ್ತಾರೆ? ಚೆಕ್ ಕನ್ನಡದಲ್ಲಿ ಬರೆಯಲು ಅವಕಾಶವಿದ್ದರೂ ಎಷ್ಟು ಜನ ಬರೆಯುತ್ತಾರೆ? ಎಟಿಎಂನಲ್ಲಿ ‘ಆಯ್ಕೆಯ ಭಾಷೆ ಯಾವುದು’ ಎಂಬ ಸಂದೇಶ ಬಂದಾಗ ‘ಕನ್ನಡ’ ಎಂದು ಬರೆಯುವವರು ಎಷ್ಟು ಜನ? ಕನ್ನಡ ಇಲ್ಲ ಎಂದು ಪ್ರಶ್ನೆ ಮಾಡುವ ನಾವು ಕನ್ನಡದಲ್ಲಿ ವ್ಯವಹರಿಸಲು ಇರುವ ಅವಕಾಶಗಳನ್ನು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ ಎಂದು ಪ್ರಶ್ನಿಸಿಕೊಳ್ಳಬೇಕಲ್ಲವೇ?

| ಮೋಹನದಾಸ ಕಿಣಿ, ಕಾಪು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net