

ಮರ್ಯಾದಾ ಪುರುಷೋತ್ತಮ ರಾಮನನ್ನೇ ಟೀಕಿಸಿದ ಸಮಾಜ, ಕೃಷ್ಣನನ್ನು ಜರೆದ ಜನ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕರಿನೀರಿನ ಶಿಕ್ಷೆ ಅನುಭವಿಸಿದ ಸಾವರ್ಕರ್ರನ್ನೂ ಬಿಡಲಿಲ್ಲ. ಆದರೆ, ‘ಸ್ವಾತಂತ್ರ್ಯ ಹೋರಾಟಗಾರ’ ಎನ್ನುವ ಹಣೆಪಟ್ಟಿ ಕಟ್ಟಿಕೊಂಡು ಹಿರಿಯ ಗಾಂಧಿವಾದಿ ಎಂದು ಹೇಳಿಕೊಳ್ಳುವವರು ಕೆಲವೊಂದು ಪಕ್ಷ ಹಾಗೂ ಸಂಘಟನೆಗಳ ಜೊತೆ ಗುರುತಿಸಿಕೊಂಡಾಕ್ಷಣ ಅವರು ಹೇಳಿದ್ದು ವೇದವಾಕ್ಯವಾಗಲು ಹೇಗೆ ಸಾಧ್ಯ?
ದೇಶದಲ್ಲಿ ಅನೇಕ ಸಂಘಟನೆಗಳು ದೇಶವಿದ್ರೋಹದ ಕೆಲಸ ಮಾಡುತ್ತಿರುವಾಗ ಅವರ ಜೊತೆ ಸೇರಿ ಪ್ರತಿಭಟನೆ ಮಾಡುವುದು ಎಷ್ಟು ಸರಿ? ದೇಶವನ್ನು ತೆಗಳುವುದು, ಧರ್ಮವನ್ನು ಬಯ್ಯುವುದು, ಸಂಸ್ಕೃತಿಯನ್ನು ಬಯ್ಯುವವರ ಜೊತೆ ಪ್ರಗತಿಪರರೆಂದು ಹೇಳಿ ಕೊಳ್ಳುವವವರ ಜೊತೆ ದೇಶವಿದ್ರೋಹವನ್ನು ಖಂಡಿಸದೆ ಬರೀ ಮೋದಿ, ಅಮಿತ್ ಷಾರನ್ನು ಬಯ್ಯುತ್ತಾ ಇದ್ದರೇ ಅವರನ್ನು ಟೀಕಿಸದೇ ಇರಲು ಹೇಗೆ ಸಾಧ್ಯ?
| ಎಂ.ಪರಮೇಶ್ವರ ಮದ್ದಿಹಳ್ಳಿ (ಹಿರಿಯೂರು ತಾಲೂಕು)