

ಅದು 1960ರ ದಶಕ, ಮಹಾಶಕ್ತಿಗಳೆರಡರ ನಡುವಿನ ಶಸ್ತ್ರಾಸ್ತ್ರ ಪೈಪೋಟಿ ಅತ್ಯುಗ್ರವಾಗಿದ್ದು, ಶೀತಲಸಮರ ಯಾವ ಗಳಿಗೆಯಲ್ಲಾದರೂ ಅಣ್ವಸ್ತ್ರಸಮರವಾಗಿ ಬದಲಾಗಿಬಿಡಬಹುದಾಗಿದ್ದಂತಹ ಅಪಾಯಕಾರಿ ದಿನಗಳವು. ಸೇನಾಶಕ್ತಿಯಲ್ಲಿ ತನ್ನನ್ನು ಸದಾ ಸರಿಗಟ್ಟುತ್ತಲೇ ಇರುವ, ಕೆಲವೊಮ್ಮೆ ಮುಂದಕ್ಕೇ ಹೋಗಿಬಿಡುತ್ತಿದ್ದ ಸೋವಿಯೆತ್ ಯೂನಿಯನ್ಅನ್ನು ಹಳ್ಳಕ್ಕೆ ಕೆಡವುವುದು ಹೇಗೆಂದು ಅಮೆರಿಕದ ಸಾಮರಿಕ ತಜ್ಞರು ತಲೆಕೆಡಿಸಿಕೊಳ್ಳುತ್ತಲೇ ಇದ್ದರು. ಅವರಿಗೆ ಬೆಳಕು ತೋರಿದ್ದು ಇಬ್ಬರು ಸಮಾಜಶಾಸ್ತ್ರಜ್ಞರು!
ನಂತರ ಶಾರ್ಪ್ ವಿಧಾನಗಳು ಬಳಕೆಯಾದದ್ದು ಸರ್ವಿಯಾದಲ್ಲಿ. ಯುಗೋಸ್ಲಾವಿಯಾ ಛಿದ್ರಗೊಂಡ ನಂತರ ಸರ್ಬಿಯಾದಲ್ಲಿ ಅಧಿಕಾರಕ್ಕೆ ಬಂದ ಸ್ಲೊಬೊದಾನ್ ಮಿಲೋಸೆವಿಚ್ ಸರ್ವಾಧಿಕಾರಿ ನಿಜ, ಅದಕ್ಕಿಂತಲೂ ಮುಖ್ಯವಾಗಿ ಆತ ಸರ್ವಿಯನ್ ರಾಷ್ಟ್ರೀಯವಾದಿ. ಹಾಗಾಗಿ ಬಾಲ್ಕನ್ನಲ್ಲಿ ಅಮೆರಿಕಾ ಹಾಗೂ ನ್ಯಾಟೋದ ಪ್ರಭಾವ ವಿಸ್ತರಣೆಗೆ ಆತ ದೊಡ್ಡ ಅಡ್ಡಿಯಾಗಿದ್ದರು. ಅವರನ್ನು ಮಣಿಸಲು ಬಿಲ್ ಕ್ಲಿಂಟನ್ 1999ರಲ್ಲಿ ರಾಜಧಾನಿ ಬೆಲ್ಗ್ರೇಡ್ ಮೇಲೆ ಬಾಂಬ್ ದಾಳಿ ನಡೆಸಿದರು. ಮಿಲೋಸೆವಿಚ್ ಅದಕ್ಕೂ ಜಗ್ಗದಿದ್ದಾಗ ಕ್ಲಿಂಟನ್ ಬಳಸಿದ್ದು ಶಾರ್ಪ್ ವಿಧಾನ. ಮಿಲೋಸೆವಿಚ್ ಸರ್ವಾಧಿಕಾರಿ ಆಗಿದ್ದುದರಲ್ಲಿ ಅಸಹಜತೆಯೇನೂ ಇರಲಿಲ್ಲ. ಅಲ್ಲಿಯವರೆಗಿನ ಆ ಪ್ರದೇಶದ ರಾಜಕೀಯ ಪರಂಪರೆ ಸರ್ವಾಧಿಕಾರವೇ.
ಆದರೆ ಅದನ್ನೇ ದೊಡ್ಡದು ಮಾಡಿ, ಲೇವಡಿ, ಕೆಟ್ಟ ಮಾತು, ಘೊಷಣೆಗಳ ಮೂಲಕ ಅವರನ್ನು ಅವಮಾನಿಸುವ ಶಾರ್ಪ್ ವಿಧಾನಗಳನ್ನು ಅಮೆರಿಕಾ ಅನುಸರಿಸಿತು. ಸಿಐಎ ಮೂಲಕ ಒಂದಿಷ್ಟು ಹಣ ಚೆಲ್ಲಿದರೆ ಶ್ವೇತಭವನದ ತಾಳಕ್ಕೆ ತಕ್ಕಂತೆ ಕುಣಿಯುವವರು ಸಿಗದಿರುತ್ತಾರೆಯೇ? ಅಂತಿಮವಾಗಿ ಆದದ್ದು ಹಾಗೆಯೇ. ತಥಾಕಥಿತ ಜನವಿರೋಧ ತಾಳಲಾಗದೇ ಮಿಲೋಸೆವಿಚ್ 2000ರಲ್ಲಿ ಅಧಿಕಾರದಿಂದ ಕೆಳಗಿಳಿದರು. ಬುಲ್ಡೋಜರ್ ಕ್ರಾಂತಿ ಎಂದು ಕರೆಯಲಾಗುವ ಆ ತಥಾಕಥಿತ ಜನಕ್ರಾಂತಿಯ ನಂತರ ಬೆಲ್ಗ್ರೇಡ್ನಲ್ಲಿ ರಚನೆಯಾದ ಅಮೆರಿಕಾದ ಕೈಗೊಂಬೆ ಸರ್ಕಾರ ಮಿಲೋಸೆವಿಚ್ರನ್ನು ವಿಚಾರಣೆಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಿತು! ಆ ಬಡಪಾಯಿ ಜೈಲಿನಲ್ಲೇ ಹೃದಯಾಘಾತದಿಂದ ತೀರಿಕೊಂಡರು.