ಅಲ್ಲಿಂದಾಚೆಗಿನ ಒಂದೂಕಾಲು ಶತಮಾನದಲ್ಲಿ ಇಂಗ್ಲಿಷರು ಅಟ್ಲಾಂಟಿಕ್ ತೀರದುದ್ದಕ್ಕೂ ನ್ಯೂ ಹ್ಯಾಂಪ್‌ಶೈರ್, ಮಸ್ಸಾಚುಸೆಟ್ಸ್, ಡೆಲವೇರ್, ಕನೆಕ್ಟಿಕಟ್, ರೋಡ್ ಐಲ್ಯಾಂಡ್, ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ಮೇರಿಲ್ಯಾಂಡ್, ವರ್ಜೀನಿಯಾ, ನಾರ್ತ್ ಕೆರೊಲಿನಾ, ಸೌತ್ ಕೆರೊಲಿನಾ, ಜಾರ್ಜಿಯಾ ಎಂಬ 13 ವಸಾಹತುಗಳನ್ನು ಕಟ್ಟಿಕೊಳ್ಳುವುದರಲ್ಲಿ ಯಶಸ್ವಿಯಾದರು. ಗಮನಿಸಬೇಕಾದ ಅಂಶವೆಂದರೆ ಕ್ರಿ.ಶ. 1732ರಲ್ಲಿ ಎಲ್ಲ 13 ವಸಾಹತುಗಳು ಅಸ್ತಿತ್ವಕ್ಕೆ ಬರುವುದರೊಂದಿಗೇ ಅಲ್ಲಿ ಸ್ವಾತಂತ್ರ್ಯದ ಗಾಳಿಯೂ ಬೀಸತೊಡಗಿದ್ದು. ಈ ಬೆಳವಣಿಗೆ ಸುತ್ತಲಿನ ಇತರ ಯೂರೋಪಿಯನ್ ವಸಾಹತುಗಳಿಗೆ ಆಗ ಸರಿಸುಮಾರು ಅಪರಿಚಿತ.