ಇದು ಸುಮ್ಮನಿರಬೇಕಾದ ಸಮಯ!

SADGURU
Published on

ಸದ್ಗುರು

ಕ್ರಿಯೆಗಿಂತ ನಿಷ್ಕಿ›ಯತೆಯು ಹೆಚ್ಚು ಮಹತ್ವದ್ದಾಗಿರುವ ಸಂದರ್ಭಗಳಿವೆ. ಈಗ ಅಂತಹ ಸಮಯ ಬಂದಿದೆ. ನೀವು ಕಡಿಮೆ ಕೆಲಸ ಮಾಡಿದಷ್ಟೂ, ಹೆಚ್ಚು ಉತ್ತಮ- ಕೆಲಸದ ವಿಷಯದಲ್ಲಿ ಮತ್ತು ವಿಶೇಷವಾಗಿ ಪ್ರಯಾಣದ ವಿಷಯದಲ್ಲಿ. ಏಕೆಂದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ, ನಾವೇ ವಾಹಕಗಳು. ನಮ್ಮನ್ನು ನಾವು ಕೊಂದುಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ನಮ್ಮ ಕ್ರಿಯೆಗಳನ್ನು ಸಾಧ್ಯವಾದಷ್ಟೂ ತಗ್ಗಿಸಬೇಕು.

ನಾವು ತಯಾರಿ ಮತ್ತು ತಡೆಗಟ್ಟುವಿಕೆಯ ಪ್ರಯತ್ನವನ್ನು ನಮ್ಮ ದೇಶಕ್ಕಾಗಿ ಮಾತ್ರವಲ್ಲದೆ ನಮ್ಮೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದೇಶಗಳಿಗೂ ಮಾಡುತ್ತಿದ್ದೇವೆ. ಇದಕ್ಕೆ ಅಪಾರ ವೆಚ್ಚವಿದೆ, ಆದರೆ ಯಾವುದೇ ವೆಚ್ಚವು ಮೃತ್ಯುಸ್ವೀಕಾರಕ್ಕಿಂತ ಉತ್ತಮವಾಗಿರುತ್ತದೆ. ಸದ್ಯಕ್ಕೆ ಜೀವಂತವಾಗಿರುವುದರ ಕಡೆಗೆ ಗಮನ ಹರಿಸುವುದು ಮುಖ್ಯವಾಗಿದೆ. ಅದನ್ನು ಸಾಧಿಸಲು, ನೀವು ಕ್ರಿಯೆಯನ್ನು ತಗ್ಗಿಸಬೇಕು ಮತ್ತು ಪ್ರಯಾಣವನ್ನು ಮುಂದೂಡಬೇಕು.

ಈಗಿನ ಪರಿಸ್ಥಿತಿಯಲ್ಲಿ ನಮ್ಮ ವೈರಿಯು ಅಗೋಚರವಾದದ್ದಾಗಿದೆ. ಈ ಒಂದು ವಿಷಯವೇ ಅದನ್ನು ತುಂಬ ಅಪಾಯಕಾರಿಯನ್ನಾಗಿ ಮಾಡುತ್ತದೆ. ನಾವು ವಾಹಕಗಳಾಗಿರುವುದರಿಂದ, ಅದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹೋಗುತ್ತಿದ್ದಾಗ, ಒಬ್ಬ ವ್ಯಕ್ತಿಯು ಸರದಿಯಲ್ಲಿ ಕಾಣೆಯಾದರೆ, ಅದು ಮುಂದಿನ ವ್ಯಕ್ತಿಗೆ ಹೋಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಸ್ನೇಹ, ಜನರಿಗೆ ನಿಮ್ಮ ನಿಕಟತೆ, ಇದೆಲ್ಲವನ್ನೂ ಸ್ವಲ್ಪ ಸಮಯದವರೆಗೆ ತಪ್ಪಿಸಿಕೊಳ್ಳಬೇಕು. ಪ್ರೀತಿಯನ್ನು ಹೃದಯದಲ್ಲಿ ಪೋಷಿಸಬೇಕು; ಅದನ್ನು ಸ್ವಲ್ಪ ಸಮಯದವರೆಗೆ ವ್ಯಕ್ತಪಡಿಸಬೇಕಾಗಿಲ್ಲ. ನೀವು ಅಥವಾ ನಿಮ್ಮ ಸುತ್ತಮುತ್ತಲಿನ ಯಾರೊಬ್ಬರೂ ವೈರಸ್​ಗೆ ಬಲಿಯಾಗದಂತೆ ನೋಡಿಕೊಳ್ಳಿ. ವೈರಸ್ ನಿಮಗೆ ಬಂದರೆ, ಅದು ನಿಮ್ಮೊಂದಿಗೆ ನಿಲ್ಲಬೇಕು. ಇದು ಮುಗಿಯುವವರೆಗೂ ಈ ಬದ್ಧತೆಯೊಂದಿಗೆ ಬದುಕಬೇಕು. ಕೆಮ್ಮು ಇದ್ದರೆ, ಇತರರಿಂದ ದೂರವಿರಿ. ಇದು ತಾರತಮ್ಯವಲ್ಲ. ಕೇವಲ ವಿವೇಚನೆ. ವಿವೇಕವಂತರು ಈ ಸಂದರ್ಭಗಳಿಂದ ಬದುಕುಳಿಯುತ್ತಾರೆ. ಧೈರ್ಯಶಾಲಿಗಳಾದ ಅವಿವೇಕಿಗಳು ತೊಂದರೆಗೊಳಗಾಗುತ್ತಾರೆ. ಅದೇ ಸಮಯದಲ್ಲಿ, ಅದರ ಬಗ್ಗೆ ಹೆಚ್ಚು ಭೀತಿ ಉಂಟುಮಾಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಮತ್ತು ಭಯಭೀತರಾಗುವುದರ ನಡುವೆ ವ್ಯತ್ಯಾಸವಿದೆ-ಪ್ಯಾನಿಕ್(ಭೀತಿ) ಎಂದರೆ ನೀವು ತಪ್ಪು ಕೆಲಸಗಳನ್ನು ಮಾಡುತ್ತೀರಿ; ಮುನ್ನೆಚ್ಚರಿಕೆ ಎಂದರೆ ಸರಿಯಾದ ಕೆಲಸಗಳನ್ನು ಮಾಡುತ್ತೀರಿ. ಈಗ ಮಾಡಬಹುದಾದ ಸರಳ ವಿಷಯವೆಂದರೆ ಎಲ್ಲರಿಂದ ದೂರ ಕಾಯ್ದುಕೊಳ್ಳುವುದು.

ಬದುಕು ನಮಗೇನು ಕೊಡುತ್ತದೆ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ, ಆದರೆ ಅದರಿಂದ ನಾವು ಏನು ಮಾಡುತ್ತೇವೆ ಎಂಬುದು ನಮ್ಮ ಆಯ್ಕೆ. ಇದೀಗ, ಕೆಲವು ಕಾರಣಗಳಿಗಾಗಿ, ಪ್ರಕೃತಿ ನಮ್ಮ ಮೇಲೆ ಮಾರಕ ವೈರಸ್ ಅನ್ನು ಹಾಕಿದೆ. ಅದರಿಂದ ಉತ್ತಮವಾದದ್ದನ್ನು ಮಾಡೋಣ. ಅದು ಶಾಶ್ವತವಾಗಿ ಉಳಿಯುವುದಿಲ್ಲ. ಆದರೆ ಅದು ಅಗೋಚರ ಶತ್ರುವಾದ್ದರಿಂದ, ತಲೆತಗ್ಗಿಸಿ ಸ್ವಲ್ಪ ಹೊತ್ತು ಕುಳಿತುಕೊಳ್ಳೋಣ. ಅದು ಹೊರಟುಹೋಗಲು ಅವಕಾಶ ಮಾಡಿಕೊಡಿ.

ಸುತ್ತಲಿನ ಜೀವನ ಬಿಕ್ಕಟ್ಟಿನಲ್ಲಿದ್ದಾಗ, ಬುದ್ಧಿವಂತಿಕೆ, ದೈಹಿಕ ಆರೋಗ್ಯ, ಸಮತೋಲನ ಪ್ರಜ್ಞೆ ಎಲ್ಲವೂ ಅತ್ಯಂತ ಮೌಲ್ಯಯುತವಾಗುತ್ತದೆ. ಈ ರೀತಿಯ ಹೋರಾಟವನ್ನು ಎದುರಿಸಿದಾಗ, ಇದು ಅಂತಮುಖವಾಗಿ ತಿರುಗುವ ಸಮಯ. ಇದು-ನಮ್ಮ ಜೀವನವನ್ನು ಹತ್ತಿರದಿಂದ ನೋಡುವುದು, ಪ್ರತಿಬಿಂಬಿಸುವುದು, ಜೀವನವು ಏನಾಗಬೇಕೆಂದು ಬಯಸುತ್ತೇವೆ ಎಂಬುದರ ಪಥವನ್ನು ಕಾರ್ಯತಂತ್ರ ಗೊಳಿಸುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಅಸ್ತಿತ್ವದ ದುರ್ಬಲ ಸ್ವರೂಪವನ್ನು ಅರಿತುಕೊಳ್ಳುವ ಸಮಯ. ಬಹುತೇಕರು ಇದನ್ನು ದಿನನಿತ್ಯದ ಆಧಾರದ ಮೇಲೆ ಅರ್ಥಮಾಡಿಕೊಳ್ಳುವುದಿಲ್ಲ. ಜೀವನ ತುಂಬ ದುರ್ಬಲವಾಗಿದೆ- ಒಂದು ಸೂಕ್ಷ್ಮ ವೈರಸ್ ನಮ್ಮನ್ನು ಕೊಲ್ಲಬಲ್ಲದು. ಇದು ನಮ್ಮೆಲ್ಲರಿಗೂ ಒಂದು ರಿಯಾಲಿಟಿ ಚೆಕ್! ಈಗ ನೀವು ‘ಹೆಚ್ಚು ಮಾಡದೆ’ ಹೇಗೆ ಇರುವುದೆಂದು ಕಲಿಯಬೇಕು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಯೋಗ ಮಾಡಲು ಸಮಯವಿಲ್ಲದವರಿಗೆ ಇದು ಸುಸಮಯ. ಇದುವರೆಗೂ ಬಹಳ ‘ಬಿಜಿ’ಯಾಗಿದ್ದರಿಂದ ನಿಮ್ಮ ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡಲು ಸಾಧ್ಯವಾಗಿರದಿದ್ದರೆ, ಇದು ಕಣ್ಣು ಮುಚ್ಚಿ ಕುಳಿತುಕೊಳ್ಳುವ ಸಮಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net