

ನಮ್ಮ ದೇಶದಲ್ಲಿ ಕಳೆದೊಂದು ವರ್ಷದಿಂದ ಕರೊನಾ ವೆರಸ್ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಲೆಯೇರಿಕೆ ಬದುಕನ್ನು ಮತ್ತಷ್ಟು ದುಸ್ತರವಾಗಿಸಿದೆ. ಬೇಳೆಕಾಳುಗಳು, ಆಹಾರ ಪದಾರ್ಥ, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುವಂತಾಗಿದೆ.
ದೇಶದ ಅಭಿವದ್ಧಿ ಹಾಗೂ ಆದಾಯವನ್ನು ಸರಿದೂಗಿಸಲು ಅಗತ್ಯ ವಸ್ತುಗಳ ಬೆಲೆ ಏರಿಸುವುದೊಂದೇ ಪರಿಹಾರವಲ್ಲ ಎನ್ನುವುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನಗಾಣಬೇಕು. ಕಳೆದ ಮೂರು ತಿಂಗಳಿನಲ್ಲಿ ಹಲವಾರು ಬಾರಿ ಇಂಧನ ಬೆಲೆ ಏರಿಕೆಯಾಗಿದೆ. ಈಗಾಗಲೇ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಅಡುಗೆ ಎಣ್ಣೆ ಬೆಲೆ < 200ರ ಆಸುಪಾಸಿನಲ್ಲಿದೆ. ಇದು ಸಾಲದೆಂಬಂತೆ ರಾಜ್ಯ ಸರ್ಕಾರ ಈಗ ವಿದ್ಯುತ್ ಬೆಲೆಯನ್ನು ಪ್ರತಿ ಯುನಿಟ್ಗೆ 30 ಪೆಸೆಯಂತೆ ಹೆಚ್ಚಳ ಮಾಡಿದೆ. ಸರ್ಕಾರ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸೂಕ್ತ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.
> ಎನ್. ರಾಜೇಶ್ ಅಡಿಗ ಮಂಗಳೂರು