

ಪ್ರಶ್ನೆ: ನಾನು ಡಿ ದರ್ಜೆ ಹುದ್ದೆಯಲ್ಲಿ ನೇಮಕವಾಗಿ 10, 15 ವರ್ಷಗಳ ಕಾಲಮಿತಿ ವೇತನ ಬಡ್ತಿ ಹಾಗೂ 20 ವರ್ಷದ ವಿಶೇಷ ಬಡ್ತಿ ಪಡೆದಿದ್ದೇನೆ. ಈಗ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪದೋನ್ನತಿ ಪಡೆದು 10 ವರ್ಷ ಆಗಿದೆ. ಮತ್ತೊಮ್ಮೆ ಕಾಲಮಿತಿ ವೇತನ ಬಡ್ತಿಯನ್ನು ಪಡೆಯಲು ಅವಕಾಶವಿದೆಯೇ?
| ರಾಜಶೇಖರ ಯಾದಗಿರಿ
ಉತ್ತರ: 1983ರ ಕರ್ನಾಟಕ ಸರ್ಕಾರಿ ಸೇವಾ (ಕಾಲಬದ್ಧ ಮುಂಬಡ್ತಿ) ನಿಯಮಾವಳಿಯ ನಿಯಮ 3ರ ರೀತ್ಯಾ ಸರ್ಕಾರಿ ನೌಕರನಿಗೆ ಆತನ ಪೂರ್ಣ ಸರ್ಕಾರಿ ಸೇವಾವಧಿಯಲ್ಲಿ ಒಂದಕ್ಕಿಂತ ಹೆಚ್ಚು ಸಲ ಈ ಕಾಲಮಿತಿ ವೇತನ ಬಡ್ತಿಯನ್ನು ಪಡೆಯಲು ಅವಕಾಶವಿರುವುದಿಲ್ಲ. ಆದ್ದರಿಂದ ನಿಮಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಹತ್ತು ವರ್ಷದ ಕಾಲಮಿತಿ ವೇತನ ಬಡ್ತಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಕೃತಿಯನ್ನು ನೋಡಬಹುದು.