ಕರೊನಾ ಸಂಕಷ್ಟದಲ್ಲಿ ಆಂತರಿಕ ಕಚ್ಚಾಟ ಬೇಕೆ?

bsy
Published on

ನಾಗರಿಕತೆ ಬೆಳೆಯುತ್ತ ಹೋದಂತೆ, ಅನಾಗರಿಕವಾಗಿದ್ದ ಮಾನವ ನಿಧಾನವಾಗಿ ಸಂಸತಿಯತ್ತ ಬರತೊಡಗಿದ. ತನ್ನ ಜೀವನಕ್ಕೆ ಶಿಸ್ತುಬದ್ಧ ವ್ಯವಸ್ಥೆಯನ್ನು ತರುವ ದಿಶೆಯಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸತೊಡಗಿದ. ಆಡಳಿತದ ಹಾದಿಯನ್ನು ಹಿಡಿದ. ಆಡಳಿತಕ್ಕೆ ಸಂಟನೆಯ ಸ್ವರೂಪ. ಸಂಟನೆಗೆ ಆಡಳಿತ ಸ್ವರೂಪ. ಅದಕ್ಕಾಗಿ ವಿವಿಧ ೇತ್ರಗಳನ್ನು ವಿಂಗಡಿಸಿದ. ಆಡಳಿತ ವ್ಯವಸ್ಥೆಗೆ ರಾಜಕಾರಣ. ರಾಜಕೀಯ ೇತ್ರ. ಜನಪ್ರತಿನಿಧಿಗಳನ್ನು ಚುನಾವಣೆ ಮುಖಾಂತರ ಆಯ್ಕೆ ಮಾಡುವ ಪ್ರಕ್ರಿಯೆ. ಈ ನಡುವೆ ಬ್ರೀಟಿಷರದು ಸೂರ್ಯ ಮುಳುಗದ ಸಾಮ್ರಾಜ್ಯವಾಗಿತ್ತು. ಅವರು ವ್ಯಾಪಾರದ ಮುಖಾಂತರ ಭಾರತವನ್ನು ಪ್ರವೇಶಿಸಿದರು. ಇಲ್ಲಿನ ಗುಂಪುಗಾರಿಕೆ, ಅನೆಕ್ಯತೆ ಮುಂತಾದ ದೌರ್ಬಲ್ಯಗಳನ್ನು ಬಳಸಿಕೊಳ್ಳುತ್ತ ಇಡೀ ದೇಶವನ್ನು ಸ್ವಾಧಿನಪಡಿಸಿಕೊಂಡರು.

ತನ್ಮೂಲಕ ಬ್ರೀಟಿಷ್​ ಆಳ್ವಿಕೆ. ಸುಮಾರು 250 ವರ್ಷಕ್ಕಿಂತಲು ಸುದೀರ್ ಸಮಯದವರೆಗೆ ಭಾರತವನ್ನು ಆಳಿದರು. ಗಾಂಧೀಜಿ, ಸುಭಾಷಚಂದ್ರ ಬೋಸ್​, ವಲ್ಲಭಭಾಯಿ ಪಟೇಲ್​, ನೆಹರು, ಲಾಲ್​ಬಹದ್ದೂರ್​ ಶಾಸ್ತ್ರಿ ಮುಂತಾದವರ ನೇತತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಇಡೀ ಭಾರತ ಒಂದಾಯಿತು. ಬ್ರೀಟಿಷ್​ ಆಡಳಿತದ ವಿರುದ್ಧ ವ್ಯವಸ್ಥಿತವಾಗಿ ಹೋರಾಟ ಜರುಗಿತು. ಸತ್ಯ ಮತ್ತು ಅಹಿಂಸೆ ಎಂಬ ಪರಮಾಸ್ತ್ರ ಬಳಸುತ್ತ ಬ್ರೀಟಿಷರ ಹದಯವನ್ನು ಗೆಲ್ಲಲಾಯಿತು. ತತ್ಪರಿಣಾಮ 1947 ಆಗಸ್ಟ್​ 15ರಂದು ಭಾರತವು ಸ್ವಾತಂತ್ರ್ಯ ಪಡೆಯಿತು.

ಪರತಂತ್ರದಿಂದ ಬಿಡುಗಡೆ ಹೊಂದಿದ ಹೆಗ್ಗಳಿಕೆ. ನಮ್ಮದೇ ದೇಶ; ನಮ್ಮದೇ ಆಡಳಿತ. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್​ ನೆಹರು ಆಯ್ಕೆ. ಬಾಬಾಸಾಹೇಬ್​ ಅಂಬೇಡ್ಕರ್​ ನೇತತ್ವದಲ್ಲಿ ರಾಷ್ಟ್ರಕ್ಕೊಂದು ಸೂಕ್ತ ಹಾಗು ಸಮರ್ಥ ಸಂವಿಧಾನ ರಚಿಸಲ್ಪಟ್ಟಿತು. ಭಾರತ ಸ್ವಾತಂತ್ರ್ಯಕ್ಕೆ ಈಗ 75ವರ್ಷ. (ಅಮತ ಮಹೋತ್ಸವ ವರ್ಷ). ಪ್ರಗತಿ ಸಾಧಿಸಿದ್ದರೂ, ಕೆಲ ಹಂತದಲ್ಲಿ ಅಭಿವದ್ಧಿ ಸಾಧಿಸಬೇಕಾಗಿದೆ. ಈ ಮಧ್ಯೆ ಪಪ್ರಧಾನ ಆಳ್ವಿಕೆಗಳು ನಡೆದಿವೆ. ಪ್ರತಿಹಂತದಲ್ಲು ದೇಶದ ಸುಧಾರಣೆ. ಆದರೂ ನಿರೀತ ಮಟ್ಟವನ್ನು ತಲುಪುವಲ್ಲಿ ರಾಜಕಾರಣದಲ್ಲಿ ಇರಬಹುದಾದ ಕೆಲವೊಂದು ಸಮಸ್ಯೆಗಳು. ಸ್ವಜನಪಪಾತ (ಛಿಟಟಠಿಜಿಠಞ), ಗುಂಪುಗಾರಿಕೆ, ಹಗರಣ ಮಿಶ್ರಿತ (ಖ್ಚಚ್ಞಛಚ್ಝ) ಆಡಳಿತ. ಅದರಲ್ಲು ಅಸ್ಥಿರತೆ. ರಾಜಕೀಯ ೇತ್ರದ ಬಹುದೊಡ್ಡ ಸಮಸ್ಯೆ ಇದು. ಪರಸ್ಪರ ಆರೋಪ&ಪ್ರತ್ಯಾರೋಪಗಳಲ್ಲಿ ಸಮಯ ವ್ಯರ್ಥ. ಅಭಿವದ್ಧಿ ರಾಜಕಾರಣದತ್ತ ರ್ನಿಲಕ್ಷ$್ಯ. ಪ ರಾಜಕಾರಣ. ಹೀಗಿರುವಾಗ ಆಗಾಗ ಅಸ್ಥಿರತೆಯು ಸರ್ಕಾರವನ್ನು ಕಾಡುತ್ತಿರುವುದು. ಸರ್ಕಾರ ಎಡವಿದಾಗ ಟೀಕಿಸುವ ಮತ್ತು ಸರಿಪಡಿಸುವ ಅವಕಾಶವಿದೆ.

ಅಸ್ಥಿರತೆಗೆ ಮುಖ್ಯ ಕಾರಣವೆಂದರೆ, ಗುಂಪುಗಾರಿಕೆ. ಇದು ಒಮ್ಮೊಮ್ಮೆ ಆಂತರಿಕ ಕಚ್ಚಾಟಕ್ಕೆ ಅವಕಾಶ ಮಾಡಿಕೊಡುತ್ತದೆ. ಆಂತರಿಕ ಕಚ್ಚಾಟದಿಂದಲೆ ಈ ಹಿಂದೆ ಅಧಿಕಾರ ಕಳಕೊಂಡಂತಹ ಕಹಿ ಅನುಭವ ಇರುವಾಗ ಮತ್ತೆ ಅದನ್ನು ಆರಂಭಿಸಿರುವುದು ಉತ್ತಮ ವಿದ್ಯಮಾನವಲ್ಲವೆಂದು ಹೇಳಲಾಗುತ್ತಿದೆ. ಒಂದೆಡೆ ಕರೊನಾ ಕಾಡಾಟ; ಇನ್ನೊಂದೆಡೆ ದಿನಬೆಳಗಾದರೆ ಆಂತರಿಕ ಕಚ್ಚಾಟ. ಕಳೆದ ಆರು ತಿಂಗಳಿಂದ ಮುಖ್ಯಮಂತ್ರಿ ಬದಲಾಗುತ್ತಾರೆಂಬ ಹೇಳಿಕೆ ನೀಡುತ್ತ ಬರಲಾಗಿದೆ. ಆಯ್ಕೆಯಾದ ಜನಪ್ರತಿನಿಧಿಗಳಿಗೆ ನಾಯಕನನ್ನು ಆಯ್ಕೆ ಮಾಡುವ ಅವಕಾಶವಿದೆ. ಕಳೆದ ಸಲ ಬಿಜೆಪಿ ಆಡಳಿತ ಇದ್ದಾಗ ಬಿಎಸ್​ವೆ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗಲೂ ಆಂತರಿಕ ಕಚ್ಚಾಟ ಶುರುವಾಗಿ, ಐದು ವರ್ಷದಲ್ಲಿ ಮೂರು ಜನ ಮುಖ್ಯಮಂತ್ರಿಗಳಾದರು. ಯಾವುದನ್ನು ಶಿಸ್ತಿನ ಪವೆಂದು ಹೇಳಲಾಗುತ್ತದೋ, ಅದರಲ್ಲಿಯೇ ಎಲ್ಲಿಲ್ಲದ ಆಂತರಿಕ ಕಚ್ಚಾಟ. ಇದಕ್ಕೊಂದು ಮಿತಿ ಹಾಕಬೇಕು, ಮುಕ್ತಾಯ ಹೇಳಬೇಕೆಂದು ಸ್ವತ@ ಮುಖ್ಯಮಂತ್ರಿಗಳೇ& ಹೆಕಮಾಂಡ್​ ಬಯಸಿದರೆ ತಾವು ರಾಜೀನಾಮೆ ಕೊಡುವುದಾಗಿ ೂಷಿಸಿರುವುದು ಪ್ರಜ್ಞಾವಂತಿಕೆಯ ಅಷ್ಟೇ ಸೌಜನ್ಯದ ನಡೆ ಆಗಿರುತ್ತದೆ. ಇಂಥ ಸಮಸ್ಯೆಗಳಿಗೆ ಪ್ರಬುದ್ಧ ನಡೆ; ಪ್ರಬುದ್ಧ ನುಡಿಯೊಂದೇ ಪರಿಹಾರ.

ನಾಯಕತ್ವ ಬದಲಾವಣೆ ಮಾಡುವವರು ಯಾರು? ಆಯಾ ಪದ ಹೆಕಮಾಂಡ್​. ನಾಯಕತ್ವ ಬದಲಾವಣೆಯ ಕೂಗು ಕೇಳಿಬಂದಾಗಲೆಲ್ಲ ಹೆಕಮಾಂಡ್​ನಿಂದ ಇಲ್ಲವೆಂಬ ಪ್ರತಿಹೇಳಿಕೆ. ನಾಯಕತ್ವ ಬದಲಾವಣೆಯೆಂದು ಹೇಳುವವರ ಧ್ವನಿಯಲ್ಲಿ ಶಕ್ತಿ ಇಲ್ಲವೋ? ನಾಯಕತ್ವ ಬದಲಾವಣೆ ಇಲ್ಲವೆಂದು ಹೇಳುವವರಲ್ಲಿ ಶಕ್ತಿ ಇಲ್ಲವೋ? ತಿಳಿಯದಾಗಿದೆ. ಇನ್ನಿಲ್ಲದ ಅನುಮಾನಕ್ಕೆ ಅವಕಾಶ. ನಾಯಕತ್ವ ಬದಲಿಸುವುದಿದ್ದರೆ, ಬದಲಿಸಲೆಂದು ಹೇಳಿ ಆಗಿದೆ. ಮತ್ತೆಮತ್ತೆ ಅದೇ ವಿಚಾರವನ್ನು ಮುನ್ನಲೆಗೆ ತರುವುದು ಸೂಕ್ತವಲ್ಲ. ಜಾಣತವೂ ಅಲ್ಲ. ಪ್ರತಿದಿನವೂ ಭಿನ್ನಮತೀಯ ಚಟುವಟಿಕೆಗಳು. ಅದಕ್ಕೆ ಸಂಬಂಧಿಸಿದ ಹೇಳಿಕೆ; ಪ್ರತಿಹೇಳಿಕೆ. ಇದಕ್ಕೊಂದು ಇತಿಶ್ರೀ ಹೇಳಬೇಕು. ಅಸ್ಥಿರತೆಯು ಆಡಳಿತವನ್ನು ದುರ್ಬಲಗೊಳಿಸುತ್ತದೆ. ಇದೇ ಪರಿಸ್ಥಿತಿ ಮುಂದುವರಿದಾಗ ಜನರಲ್ಲಿ ಜುಗುಪ್ಸೆ; ಆಡಳಿತ ನಡೆಸುವವರಲ್ಲಿ ಮುಜುಗರ.

ಮುಖ್ಯಮಂತ್ರಿ ಪದವಿಯ ಆಕಾಂಗಳು ಕೆಲವರು ಇರಬಹುದು. ಮುಖ್ಯಮಂತ್ರಿ ಸ್ಥಾನವು ಖಾಲಿಯಿಲ್ಲವೆಂಬ ಮಾತು ಆಗಾಗ ಕೇಳಿಬರುತ್ತದೆ. ಆ ಸ್ಥಾನ ಖಾಲಿಯಿಲ್ಲವೆಂದ ಮೇಲೆ ಅದರ ಬಗೆಗೆ ಅಪಸ್ವರಗಳೇಕೆ? ಬದಲಾವಣೆ ಮಾಡದಿದ್ದರೆ ಒಂದೇ ಸಮಸ್ಯೆ, ಬದಲಾವಣೆಯಾದರೆ ಹಲವಾರು ಸಮಸ್ಯೆಗಳು. ನಾಯಕತ್ವ ಬದಲಾವಣೆ ಕುರಿತು ಮಾತನಾಡುವುದು ಸುಲಭ. ನಾಯಕತ್ವ ಬದಲಾದ ಪರಿಸ್ಥಿತಿಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾಗುತ್ತದೆ. ಅಧಿಕಾರ ಬಂದಾಗ ಅಭಿವದ್ಧಿ ಕಾರ್ಯಗಳತ್ತ ಗಮನಕೊಡದೆ ಕೆಲವರು ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದರ ಬಗೆಗೆ ಸಾರ್ವಜನಿಕ ವಲಯದಲ್ಲಿ ವಿಷಾದ ಕೇಳಿಬರುತ್ತಿದೆ. ಅಸ್ಥಿರತೆಯು ಆಡಳಿತದ ದೊಡ್ಡ ತೊಡಕು. ಅದನ್ನು ನಿವಾರಿಸಬೇಕಾಗುತ್ತದೆ.

ಯಡಿಯೂರಪ್ಪನವರನ್ನು ಸರಿ ಗಟ್ಟುವಂತಹ ನಾಯಕ ಇಷ್ಟೊತ್ತಿಗಾಗಲೆ ನಿರ್ಮಾಣ ಆಗಬೇಕಿತ್ತು. ಈ ಹಂತದಲ್ಲಿ ಎರಡನೆಯ ಸಾಲಿನ ನಾಯಕತ್ವ ಕಂಡುಬರಬೇಕಿತ್ತು ಎಂಬ ವಾದವಿದೆ. ಅಪಾರ ಸಂಟನಾ ಸಾಮರ್ಥ್ಯ, ರಾಜಕೀಯ ಏರಿಳಿತಗಳು ಉಂಟಾದಾಗ ಆದಂತಹ ಅನುಭವ, ರಾಜಕಾರಣದ ಒಳಪಟ್ಟುಗಳನ್ನು ಬಲ್ಲಂತಹ ಒಬ್ಬ ಮುತ್ಸದ್ಧಿ ಎದ್ದುಬರಬೇಕಿದೆ. ತಳಮಟ್ಟದಿಂದ ಪವನ್ನು ಸಂಟಿಸುತ್ತ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆಯುವಲ್ಲಿ ಬಿಎಸ್​ವೈ ಯಶಸ್ವಿ ಆಗುತ್ತ ಬಂದಿದ್ದಾರೆ. ತನ್ಮೂಲಕ ದಣ ಭಾರತದಲ್ಲಿ ಪದ ಸರ್ಕಾರ ರಚನೆ ಆಗುವಂತೆ ನೋಡಿಕೊಂಡಿರುವುದು ಸಾಮಾನ್ಯವಲ್ಲ. ಬಿಎಸ್​ವೆ ಅವರಂಥ ಅನುಭವಿ ಆಡಳಿತಗಾರ ರನ್ನು ಅಧಿಕಾರದಿಂದ ಇಳಿಸುವ ಹುನ್ನಾರ ನಡೆದಿದೆ. ಅಂಥವರನ್ನೆ ಇಳಿಸಲಾಗುತ್ತದೆಯೆಂದಾದರೆ, ಇಳಿಸಿದವರು ಎಷ್ಟುದಿನ ಉಳಿಯುವರು? ಎಂಬ ಸಂದೇಹ. ಮುಖ್ಯಮಂತ್ರಿಗಳಾಗ ಬೇಕೆನ್ನುವವರು ಈಗಿನಿಂದಲೆ ಸಂಟನೆ, ಸ್ವಸಾಮರ್ಥ್ಯ ಮತ್ತು ತಮ್ಮ ಬುದ್ಧಿಮತ್ತೆಯನ್ನು ಸಾಬೀತುಪಡಿಸುತ್ತ ಹೋಗಲಿ; ಮುಂದೆ ಅವರಿಗೂ ಅಂತಹ ಅವಕಾಶ ದೊರೆಯುವಂತಾಗಲಿ.

ಯಡಿಯೂರಪ್ಪನವರದು ಧೀರ ನಡೆ; ನೇರ ನುಡಿ. ಪ ರಾಜಕಾರಣಕ್ಕಾಗಿ ಒಂದಷ್ಟು ಆರೋಪ&ಪ್ರತ್ಯಾರೋಪಗಳನ್ನು ಮಾಡಿರಬಹುದು. ಅದನ್ನು ಹೊರತುಪಡಿಸಿದರೆ, ಪ್ರತಿಕಾರ ರಾಜಕಾರಣ ಮಾಡಿದವರಲ್ಲ: ಬದಲಾಗಿ ಸರ್ವಪಗಳ ಭಾವನೆಗೆ ಸ್ಪಂದಿಸಿದವರು. ರಾಜ್ಯದಲ್ಲಿ ಅವರ ನೇತತ್ವದ ಸರ್ಕಾರ ಇದ್ದಾಗ್ಯು ಸರ್ವರ ಸರ್ಕಾರವೆಂಬ ಭಾವನೆಗೆ ಸಾ. ತನ್ಮೂಲಕ ಸಾಪ್ರಜ್ಞೆಯ ಸಂಕೇತವಾಗಿದ್ದಾರೆ. ಸರ್ವಧರ್ಮ ಹಾಗು ಸರ್ವಜನಾಂಗವನ್ನು ಪ್ರೀತಿಸುವ ಸಮಭಾವದ ರಾಜಕಾರಣಿ. ಸಮತೋಲನದ ನಡೆ, ನುಡಿ. ಸಮಷ್ಟಿ ಪ್ರಜ್ಞೆಯ ರಾಜಕಾರಣಿ. ಧರ್ಮ ಮತ್ತು ರಾಜಕಾರಣದ ನಡುವಿನ ಅಂತರವನ್ನು ಕಾಪಾಡಿಕೊಳ್ಳುತ್ತ ಸರ್ವ ಮಠಗಳಿಗೆ ಅನುದಾನ ಬಿಡುಗಡೆಗೊಳಿಸುತ್ತ, ಅವುಗಳಿಗೆ ಕಾಯಕಲ್ಪ ನೀಡಿದ ಮೊದಲಿಗರು. ಈ ಕಾರಣಕ್ಕಾಗಿ ಮಠಾಧೀಶರ ಅಂತ@ಕರಣ. ಅದನ್ನು ಸಿದ್ಧರಾಮಯ್ಯ ಮತ್ತು ಎಚ್​.ಡಿ. ಕುಮಾರಸ್ವಾಮಿ ಸರ್ಕಾರಗಳು ಮುಂದುವರಿಸಿದ್ದು, ಒಂದು ಸತ್ಪರಂಪರೆಗೆ ನಾಂದಿ ಹಾಡಿದ ಕೀರ್ತಿ ಬಿಎಸ್​ವೆ ಅವರದು. ಇಳಿವಯಸ್ಸಿನಲ್ಲಿ ಯಾವುದೇ ಅನಾಹುತಗಳಿಗೆ ಅವಕಾಶ ಆಗಬಾರದು; ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದೆಂದು ಸದಾ ಅವರ ಬೆನ್ನಹಿಂದೆ ನಿಂತಿರುವ ವಿಜಯೇಂದ್ರ ಅವರ ಭಾವನೆ. ಅದನ್ನು ಹೊರತುಪಡಿಸಿದರೆ, ಮತಾವ ಮಹತ್ವಾಕಾಂೆ ಸದ್ಯಕ್ಕೆ ಇರುವುದಿಲ್ಲ ಎಂಬುದು ಅವರ ಅನಿಸಿಕೆ. ಪ್ರಯತ್ನಪೂರ್ವಕವಾಗಿ ಮತ್ತು ಪದ ಸಂಟನೆ ಮಾಡುತ್ತ ಅಂತಹ ಸಂದರ್ಭ ಒದಗಿದರೆ, ತಾನು ಆ ಕಾರ್ಯವನ್ನು ನಿರ್ವಹಿಸುವ ಬದ್ಧತೆ ಯನ್ನು ತೋರಿದ್ದಾರೆ.

(ಲೇಖಕರು ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net