ಮೇಲಧಿಕಾರಿ ಇಲಾಖಾ ವಿಚಾರಣಾ ನೋಟಿಸ್ ಕಳುಹಿಸಲು ಆದೇಶಿಸುವುದು ಸರಿಯೇ? | ಸರ್ಕಾರಿ ಕಾರ್ನರ್​

Sakari Corner
Published on

ಪ್ರಶ್ನೆ: ನಾನೊಂದು ಇಲಾಖೆಯಲ್ಲಿ ಶಾಖಾಧೀಕ್ಷಕನಾಗಿದ್ದು, ಇಲಾಖಾ ವಿಚಾರಣೆಗಳಿಗೆ ಮಂಡನಾಧಿಕಾರಿಯಾಗಿ ಶಿಸ್ತು ಪ್ರಾಧಿಕಾರಿಯವರು ನೇಮಿಸಿದ್ದಾರೆ. ಆದರೆ ವಿಚಾರಣಾಧಿಕಾರಿ ನಮ್ಮ ಮೇಲಾಧಿಕಾರಿಯಾಗಿದ್ದು ಅವರು ಇಲಾಖಾ ವಿಚಾರಣಾ ನೋಟಿಸ್ ಕಳುಹಿಸಲು ಆದೇಶಿಸುತ್ತಾರೆ. ಇದು ಸರಿಯಾದ ಕ್ರಮವೇ?

| ವಿಶ್ವನಾಥರಾವ್ ಮೈಸೂರು

ಉತ್ತರ: ಇದು ಸರಿಯಾದ ಕ್ರಮವಲ್ಲ. ವಿಚಾರಣಾಧಿಕಾರಿಯೇ ಆರೋಪಿತ ನೌಕರರಿಗೆ ಮತ್ತು ಸಾಕ್ಷಿದಾರರಿಗೆ ನೋಟಿಸ್ ನೀಡಬೇಕೆಂದು ಭಾರತದ ಸವೋಚ್ಛ ನ್ಯಾಯಾಲಯ ನೀಲಕಂಠ ವಿರುದ್ಧ ಕಾಶಿನಾಥ (ಅಐ 1962 (ಖಇ) 666) ಪ್ರಕರಣದಲ್ಲಿ ಸೂಚಿಸಿದೆ. ಆದ್ದರಿಂದ ನೀವು ಈ ವಿಷಯವನ್ನು ನಿಮ್ಮ ಶಿಸ್ತು ಪ್ರಾಧಿಕಾರದ ಗಮನಕ್ಕೆ ತನ್ನಿ. ಆಪಾದಿತ ಒಂದು ಪಕ್ಷವಾದರೆ ನೀವು ಮತ್ತೊಂದು ಪಕ್ಷವಾಗಿರುತ್ತೀರಿ. ಆದ್ದರಿಂದ ನ್ಯಾಯಾಧೀಶರಂತೆ, ವಿಚಾರಣಾಧಿಕಾರಿಗಳೇ ನೋಟೀಸ್ ಜಾರಿ ಮಾಡಲು ವಿನಂತಿಸಿ. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ಸಿ.ಸಿ.ಎ.ನಿಯಮಾವಳಿ - ಸಮಗ್ರ ಕೈಪಿಡಿ ಕೃತಿಯನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net