ಸಂದರ್ಶನದ ಅಂಕ ಕಡಿತ ಸ್ವಾಗತಾರ್ಹ

Janamata
Published on

ರಾಜ್ಯ ಸರ್ಕಾರವು ಕೆಎಎಸ್ ಸಂದರ್ಶನದ ಅಂಕವನ್ನು 200ರಿಂದ 50ಕ್ಕೆ ಇಳಿಸಿರುವುದು ಸ್ವಾಗತಾರ್ಹ. ಇದು ಪ್ರತಿಭಾವಂತರ ಪಾಲಿಗೆ ಸಕಾರಾತ್ಮಕ ಬೆಳವಣಿಗೆ. ಸಂದರ್ಶನ ಶುದ್ಧ ನಾಟಕ ಎಂಬುದು ಜನಸಾಮಾನ್ಯರ ಭಾವನೆಯಾಗಿದೆ. ಇಂತಹ ಸಮಯದಲ್ಲಿ ಕನಿಷ್ಟಪಕ್ಷ ಸಂದರ್ಶನ ಅಂಕವನ್ನು ಕಡಿಮೆ ಮಾಡಿರುವುದು ಸಮಾಧಾನ ತಂದಿದೆ. ಇದರ ಜೊತೆಗೆ ಸ್ಪಟಿಕದಷ್ಟು ಪರಿಶುದ್ಧ ಆಗಿರುವವರನ್ನು ಕೆಪಿಎಸ್​ಸಿಗೆ ಅಧ್ಯಕ್ಷರನ್ನಾಗಿ ಮಾಡಬೇಕು. ಅದರ ಸದಸ್ಯರು ರಾಜಕೀಯೇತರ ವ್ಯಕ್ತಿಗಳಾಗಿರಬೇಕು. ಅಂತೆಯೇ ಪ್ರಾಮಾಣಿಕರಾದ ವಿಷಯ ತಜ್ಞರಾಗಿರಬೇಕು. ಅಭ್ಯರ್ಥಿಗಳ ಸಂದರ್ಶನದ ವಿಡಿಯೋ ಚಿತ್ರೀಕರಣ ಆಗಬೇಕು. ಒಟ್ಟಾರೆಯಾಗಿ ಪಿ.ಸಿ.ಹೋಟಾ ಸಮಿತಿಯ ವರದಿ ಜಾರಿ ಮಾಡಬೇಕು. ಅಂದಹಾಗೆ ಯಾವುದೇ ಸರ್ಕಾರಗಳ ನೀತಿನಿರೂಪಣೆ ಮಾಡುವ ಹಂತಗಳಲ್ಲಿ ಕೆಎಎಸ್ ಅಧಿಕಾರಿಗಳು ಇರುತ್ತಾರೆ. ಅವರ ಸೃಷ್ಟಿ ನ್ಯಾಯವಾದ ಮಾರ್ಗದಲ್ಲಿ ಮಾತ್ರ ಆಗಬೇಕು. ಆಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ. ಇಲ್ಲವಾದರೆ ಬೇವನ್ನು ಬಿತ್ತಿ ಮಾವನ್ನು ಬಯಸಿದಂತೆಯೇ ಸರಿ!

| ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ (ಚನ್ನಗಿರಿ ತಾಲ್ಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net