

ಬೆಂಗಳೂರು: ಸಾಧಿಸುವ ಛಲ, ಕಠಿಣ ಪರಿಶ್ರಮ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ಪ್ರಕೃತಿ ಚಿಕಿತ್ಸಾ ವೈದ್ಯರಾಗಿರುವ ಡಾ. ಸ್ವಾತಿ ಪ್ರದಿಪ್. ತಮ್ಮ ದಿಟ್ಟ ಹೆಜ್ಜೆಯಿಂದ ಇಂದು ಕರ್ನಾಟಕ ಮಾತ್ರವಲ್ಲದೆ, ದೇಶ&ವಿದೇಶಗಳಲ್ಲಿ ತಮ್ಮದೇ ಆದ "ಸದ್ಗುರು ಆಯುರ್ವೇದ' ಬ್ರಾಂಡ್ ಮೂಲಕ ಖ್ಯಾತಿ ಗಳಿಸಿದ್ದಾರೆ.
ಕಳೆದ 11 ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ "ಸದ್ಗುರು ಆಯುರ್ವೇದ' ಸದ್ಯ ಹೆಮ್ಮರವಾಗಿ ಬೆಳೆಯುತ್ತಿದೆ. ದೇಶ&ವಿದೇಶಗಳಲ್ಲಿ ಬೇಡಿಕೆ ಪಡೆದುಕೊಂಡಿದೆ. ಈ ಯಶಸ್ಸಿನ ಹಾದಿಯಲ್ಲಿ ಡಾ. ಸ್ವಾತಿ ಪ್ರದಿಪ್ ಅವರೊಂದಿಗೆ ಪತಿ ಡಿ.ಎಸ್. ಪ್ರದಿಪ್ ಕೈಜೋಡಿಸಿರುವುದು ಹೆಮ್ಮೆಯ ವಿಷಯ. ಬಾಲ್ಯದಿಂದಲೂ ವ್ಯಾಪಾರಿ ವೃತ್ತಿಯಲ್ಲಿ ಬೆಳೆದ ಡಿ.ಎಸ್. ಪ್ರದಿಪ್, 2006ರಲ್ಲಿ 8್ಡ10 ವಿಸ್ತೀರ್ಣದ ಚಿಕ್ಕ ಕೊಠಡಿಯೊಂದರಲ್ಲಿ ಮಿಕ್ಸಿ ರಿಪೇರಿ ಕೆಲಸ ಆರಂಭಿಸಿದರು. ನಂತರದಲ್ಲಿ "ಸದ್ಗುರು ಆಯುರ್ವೇದ' ಶುರು ಮಾಡಿದರು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಹತ್ತಾರು ಮಂದಿಗೆ ಉದ್ಯೋಗ ನೀಡಬೇಕು ಎಂಬ ಮಹತ್ವಾಕಾಂೆಯನ್ನು ಅವರು ಹೊಂದಿದ್ದರು. ಅವರ ಅಲೋಚನೆಯ ಪರಿಣಾಮವಾಗಿ ಇಂದು 150ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ. ಇವರಲ್ಲಿ ಶೇ.80 ಮಹಿಳೆಯರಿದ್ದಾರೆ. 500ಕ್ಕೂ ಹೆಚ್ಚು ವಿತರಕರನ್ನು ಹೊಂದಿದ್ದು, ಕರ್ನಾಟಕ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಬೇಡಿಕೆ ಪಡೆದುಕೊಂಡಿರುವ "ಸದ್ಗುರು ಆಯುರ್ವೇದ' ತನ್ನದೇ ಆದ ಗ್ರಾಹಕರನ್ನು ಹೊಂದಿದೆ.
ತಯಾರಿಸುತ್ತಿರುವ ಉತ್ಪನ್ನಗಳು
ಗ್ರಾಮ್ ಪ್ಲೋರ್ ಸೋಪು: ಕಡಲೆಹಿಟ್ಟಿನಿಂದ ತಯಾರಿಸಲ್ಪಟ್ಟ ಸೋಪು, ಇದನ್ನು ಬಳಸುವುದರಿಂದ ಚರ್ಮಕ್ಕೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬೇರೆ ಸೋಪುಗಳಿಗಿಂತ ಇದು ಉತ್ತಮವಾಗಿದ್ದು, ತ್ವಚೆಯ ಹೊಳಪು ಹೆಚ್ಚಿಸುತ್ತದೆ. ಮೈ ಕಡಿತ ಸೇರಿ ಚರ್ಮದ ಸಮಸ್ಯೆ ನಿವಾರಿಸಲಿದೆ.
ಅಲೊವೇರಾ ಸೋಪು: ಇದು ಸಹ ತ್ವಚೆ ರಕ್ಷಕ ಕಾಂತಿ ವರ್ಧಕ ಸೋಪಾಗಿದ್ದು, ಒಣ ಚರ್ಮ ಮೃದುಗೊಳಿಸಲು ಸಹಕಾರಿ ಆಗುತ್ತದೆ.
ತುಳಸಿ ಸೋಪು: ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಇದ್ದು, ತ್ವಚೆಯ ಮೇಲಿನ ಸೋಂಕನ್ನು ಕಡಿಮೆ ಮಾಡುವ ಶಕ್ತಿಯನ್ನೂ ಹೊಂದಿರುತ್ತದೆ. ತುಳಸಿ ಸಾರದಿಂದ ತಯಾರಾಗಿರುವ ಈ ಸೋಪು ತ್ವಚೆಯ ಮೇಲಿನ ಕಪು$್ಪ ಕಲೆಗಳು, ಬೆವರುಸಾಲೆ, ತುರಿಕೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ.
ರಕ್ತಚಂದನ: ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಬಹಳ ದಿನಗಳ ಕಣ್ಣಿನ ಕೆಳಭಾಗದ ಕಪು$್ಪ ಕಲೆ, ಮೊಡವೆ ಕಲೆ ಹಾಗೂ ಅಕಾಲಿಕ ಚರ್ಮದ ಸುಕ್ಕನ್ನು ಕಡಿಮೆ ಮಾಡುತ್ತದೆ. ಒಂದು ರೀತಿಯಲ್ಲಿ ಸುವಾಸನೆ ಭರಿತವೂ ಹಾಗೂ ದೇಹ ಕಾಂತಿ ಹೆಚ್ಚಿಸುವ ಸೋಪಾಗಿದೆ.
ಇತರ ಉತ್ಪನ್ನಗಳು
ಅಲೊವೇರಾ ಶ್ಯಾಂಪೂ ಮತ್ತು ಕಂಡೀಷನರ್: ಈ ಉತ್ಪನ್ನವು ಒಂದೇ ವಸ್ತುವಿನಲ್ಲಿ ಎರಡು ಲಾಭಗಳನ್ನು ಗ್ರಾಹಕರಿಗೆ ನೀಡುತ್ತದೆ. ಇದನ್ನು ಉಪಯೋಗ ಮಾಡುವುದರಿಂದ ಕೂದಲು ಉದುರುವುದು ಕಡಿಮೆ ಆಗುವುದರ ಜತೆಗೆ ಕಂಡೀಷನರ್ ಸಹ ಹೊಂದಿರುವ ಕಾರಣ ಕೂದಲನ್ನು ನುಣುಪಾಗಿಸಿ ಹೊಳೆಯುವಂತೆ ಮಾಡುತ್ತದೆ.
ಫಾಸ್ಟ್ ಕೋನ್: ತುಳಸಿ, ಸಿಟ್ರೋನೆಲ್ಲಾ, ಲೆಮೆನ್ ಗ್ರಾಸ್, ಮುಂತಾದ ಆಯುರ್ವೇದ ಮಿಶ್ರಣದೊಂದಿಗೆ ತಯಾರಿಸಿದ ಅತಿ ವೇಗವಾಗಿ ಲಿತಾಂಶ ನೀಡುವ ಸೊಳ್ಳೆಯ ಬತ್ತಿ ಇದಾಗಿದೆ. ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ದರದಲ್ಲಿ ಲಭ್ಯ.
ಗೋ ಫಾಸ್ಟ್ ಲಿಕ್ವಿಡ್: ತುಳಸಿ, ಸಿಟ್ರೋನೆಲ್ಲಾ, ಲೆಮೆನ್ ಗ್ರಾಸ್, ಮಿಶ್ರಣದಿಂದ ತಯಾರಿಸಿದ ಮಾರುಕಟ್ಟೆಯಲ್ಲಿರುವ ಬಹುತೇಕ ಮಷಿನ್ಗಳಿಗೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ರಾತ್ರಿ ಇಡೀ ಹೊರಸೂಸುವ ಗಿಡಮೂಲಿಕೆಗಳ ಸಾರದ ಜತೆಗೆ ಸೊಳ್ಳೆಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದ್ದು, ತನ್ನದೇ ಗ್ರಾಹಕರನ್ನು ಸೃಷ್ಟಿಸಿಕೊಂಡಿದೆ ಈ ಗೋ ಾಸ್ಟ್ ಲಿಕ್ವಿಡ್.
ಶರಣಂ: ಶ್ರೀಗಂಧ, ಸಂಪಿಗೆ, ಮಲ್ಲಿಗೆ, ಗುಲಾಬಿ ನಾಲ್ಕು ವಿಧಗಳಲ್ಲಿ ದೊರೆಯುವ ದೂಪದ ಬತ್ತಿ. ಇದರಲ್ಲಿ ಕಡಿಮೆ ಹೊಗೆ ಇದ್ದು, ಹೆಚ್ಚು ಸುವಾಸನೆ ನೀಡುವಂತಹ ಹೊಸ ತಂತ್ರಜ್ಞಾನದೊಂದಿಗೆ ತಯಾರಿಸಲ್ಪಟ್ಟ ಪೂಜೆಗೆ ಉಪಯೋಗಿಸುವ ಬತ್ತಿಯೇ ಶರಣಂ.