

ಗಾಣದ ಎಣ್ಣೆಯಿಂದಲೇ ತಿಂಗಳಿಗೆ 8 ರಿಂದ 9 ಲಕ್ಷ ರೂ. ಆದಾಯ: ತೋಟದಲ್ಲೇ 5 ಗಾಣದ ಎಣ್ಣೆ ಘಟಕಗಳನ್ನು ನಿರ್ಮಾಣ ಮಾಡಿರುವ ಮಂಡ್ಯ ಜಿಲ್ಲೆಯ ರೈತ ಕಮಲೇಶ್, ತಿಂಗಳಿಗೆ ಸುಮಾರು 3,500 ಲೀಟರ್ ಗಾಣದ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಕುಸಿಬೆ ಎಣ್ಣೆ, ಹರಳೆಣೆ, ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಉತ್ಪಾದನೆ ಮಾಡುತ್ತಿರುವ ಇವರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಸ್ ರೂಟ್ಸ್ ಆರ್ಗ್ಯಾನಿಕ್ಸ್ ಎನ್ನುವ ವೆಬ್ ಸೈಟ್ ನಿರ್ಮಾಣ ಮಾಡಿ ಅಲ್ಲಿಂದ ಆನ್ಲೈನ್ ಖರೀದಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಲೀಟರ್ ಎಣ್ಣೆಯನ್ನು ಸುಮಾರು 450 ರೂ.ಗಳಿಂದ 650 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಗಾಣದ ಎಣ್ಣೆಯಿಂದಲೇ ಸುಮಾರು 8 ರಿಂದ 9 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ. ಗಾಣದ ಎಣ್ಣೆ ಬಿಸಿನೆಸ್ ಮಾಡು ವವರಿಗೆ ಎಣ್ಣೆಯ ಜತೆಗೆ ಹಿಂಡಿಯಲ್ಲೂ ಆದಾಯವಿದೆ.
23ಕ್ಕೆ ತರಬೇತಿ ಕಾರ್ಯಾಗಾರ: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ನಿಂದ ಗಾಣದ ಎಣ್ಣೆ (ಆಯಿಲ್ ಮಿಲ್) ಬಿಸಿನೆಸ್ ತರಬೇತಿ ಕಾರ್ಯಾಗಾರ ಮತ್ತು ಉದ್ಯಮ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.23ರ ಭಾನುವಾರ ಬೆಂಗಳೂರಿನಲ್ಲಿ ಕಾರ್ಯಾಗಾರ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 7975465873ಕ್ಕೆ ಸಂರ್ಪಸಿ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್: ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಗಾಣದ ಎಣ್ಣೆ ಬಿಸಿನೆಸ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಗಾಣದ ಎಣ್ಣೆ ಅಂದ್ರೆ ಆಯಿಲ್ ಮಿಲ್ ಬಿಸಿನೆಸ್ನಲ್ಲಿ ಯಶಸ್ಸು ಕಂಡಿರುವ ಸಾಧಕರೇ ಇದರಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಗಾಣದ ಎಣ್ಣೆಯ ಘಟಕ ಆರಂಭಿಸುವ ಬಗ್ಗೆ ಇಂಚಿಂಚು ಮಾಹಿತಿ ಇದರಲ್ಲಿ ಅಡಕವಾಗಿದೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ ಗಾಣದ ಎಣ್ಣೆ ಬಿಸಿನೆಸ್ ಬಗ್ಗೆ ತಿಳಿದುಕೊಂಡು ಉದ್ಯಮ ಕಟ್ಟೋಕೆ ಶುರು ಮಾಡಿ.