ಶ್ರೀಮಂತರಾಗಬೇಕಾ? ಈ ತಪ್ಪು ಮಾಡ್ಬೇಡಿ!: ಮನಿಮಾತು

Money Mathu 1
Published on
ಪ್ರತಿಯೊಬ್ಬರಿಗೂ ಶ್ರೀಮಂತರಾಗಬೇಕು ಎಂಬ ಆಸೆ ಇರುತ್ತೆ, ಆದರೆ ಶ್ರೀಮಂತರು ಮಾತ್ರ ಅತಿ ಶ್ರೀಮಂತರಾಗುತ್ತಿದ್ದಾರೆ ವಿನಃ ಶ್ರೀಮಂತಿಕೆಯನ್ನು ತೋರಿಸಿದವರು ಶ್ರೀಮಂತರಾಗುತ್ತಿಲ್ಲ. ಇಲ್ಲಿ ಒಂದು ವಿಷಯ ಮುಖ್ಯವಾಗಿದೆ. ಅದು ಏನಂದರೆ ಶ್ರೀಮಂತಿಕೆ ತೋರಿಸುವುದಕ್ಕೆ ಮಾಡಿರುವ ಖರ್ಚು ಅದೆಷ್ಟೋ ಜನರನ್ನು ಬಡವರಾಗಿ ಮಾಡುತ್ತೆ. ಸಾಕಷ್ಟು ಜನರು ನಾನು ಶ್ರೀಮಂತ ಎಂದು ತೋರಿಸಿಕೊಳ್ಳುವುದಕ್ಕೆ ಹೋಗಿ ಅದಕ್ಕೆ ಖರ್ಚು ಮಾಡಿ ಬಡವರಾಗುತ್ತಿದ್ದಾರೆ.

ಶ್ರೀಮಂತರಾಗಬೇಕು ಅಂದರೆ ಏನು ಮಾಡಬೇಕು?

ಈ ತಪ್ಪುಗಳನ್ನು ನೀವು ಯಾವತ್ತೂ ಕೂಡ ಜೀವನದಲ್ಲಿ ಮಾಡಬಾರದು. ನೀವು ಕೂಡ ಶ್ರೀಮಂತರಾಗಬೇಕು, ಶ್ರೀಮಂತರಾಗಿಯೇ ಇರಬೇಕು ಅಂದರೆ ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ನಾನು ಹೇಳಿಕೊಡುತ್ತೇನೆ.

1) ಶೋಕಿಗಾಗಿ ಕಾರ್ ಬೇಡ- ನೀವು ಒಬ್ಬ ಉದ್ಯಮಿಯಾಗಿ ಬೇರೆ ಯಾರನ್ನೋ ಭೇಟಿ ಮಾಡಲು ಹೋಗಬೇಕು ಅಂದಾಗ ಮಾತ್ರ ನೀವು ಒಳ್ಳೆಯ ಕಾರಿನಲ್ಲಿ ಹೋಗುವುದಕ್ಕೆ ಒಂದು ಅರ್ಥ ಇರುತ್ತೆ. ಅದರಿಂದ ಹೆಚ್ಚು ಅವಕಾಶ ಸಿಗುತ್ತೆ, ಗೌರವ ಸಿಗುತ್ತೆ ಅಂದಾಗ ಒಳ್ಳೆಯ ಕಾರ್ ತೆಗೆದುಕೊಳ್ಳುವುದು ಉತ್ತಮ. ಆದರೆ, ಬಹಳಷ್ಟು ಜನ ಸ್ನೇಹಿತರ ಜತೆ ಟ್ರಿಪ್ ಹೋಗುವುದಕ್ಕೆ, ಸಂಬಂಧಿಕರ ಮನೆಗೆ ಹೋಗುವುದಕ್ಕೆ ನಾನೊಬ್ಬ ಶ್ರೀಮಂತ ಎಂದು ತೋರಿಸಿಕೊಳ್ಳಲು ಹೆಚ್ಚು ಹಣ ಖರ್ಚು ಮಾಡಿ ಕಾರ್ ತೆಗೆದುಕೊಳ್ಳುತ್ತಾರೆ, ಇದು ಬೇಡ. ಅದನ್ನು ಬಿಟ್ಟು ಕಾರ್ ತೆಗೆದುಕೊಳ್ಳುವಾಗ ಅದರಿಂದ ಏನು ಉಪಯೋಗವಾಗುತ್ತೆ? ಬಿಸಿನೆಸ್​ಗೆ ಸಹಾಯವಾಗುತ್ತಾ? ಎಂಬುದನ್ನು ಲೆಕ್ಕ ಹಾಕಿ ಕಾರ್ ತೆಗೆದುಕೊಳ್ಳುವುದು ಬಹಳ ಮುಖ್ಯ.

2) ಶ್ರೀಮಂತಿಕೆ ತೋರಿಕೆಗೆ ಮನೆ ಬೇಡ - ಸಾಮಾನ್ಯವಾಗಿ ಮನೆ ನಿರ್ಮಾಣ ಮಾಡುವಾಗ ಪ್ರತಿಯೊಬ್ಬರು ಯಾವಾಗ್ಲೂ ಹೇಳ್ತಾ ಇರುತ್ತಾರೆ, ‘ಮನೆ ಒಂದು ಹೊಣೆಗಾರಿಕೆ ಅದು ಆಸ್ತಿಯಲ್ಲ’ ಅಂತ. ಇದು Rich Dad Poor Dad ಬುಕ್ ಓದಿದ್ರೆ ತಿಳಿಯುತ್ತೆ. ಮನೆಯಿಂದ ಯಾವುದೇ ಆದಾಯ ಬರುವುದಿಲ್ಲ. ಬದಲಿಗೆ ಪ್ರತಿ ಬಾರಿ EMI ಕಟ್ಟ ಬೇಕಾಗುತ್ತೆ. ಆದ್ದರಿಂದ ಮನೆಯನ್ನು ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವುದಕ್ಕೆ ಕಟ್ಟಬೇಡಿ, ಅದರ ಬದಲಿಗೆ ಮನೆಯಿಂದ ಆದಾಯ ಬರುತ್ತಾ? ಮುಂದೊಂದು ದಿನ ಮನೆಯ ಸೈಟ್ ವ್ಯಾಲ್ಯೂ ಹೆಚ್ಚುತ್ತಾ? ಇದು ಒಂದು ಇನ್ವೆಸ್ಟ್​ಮೆಂಟ್ ಅಗುತ್ತಾ ಎಂಬುದನ್ನು ಅರ್ಥ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ರೆ ಉತ್ತಮ. ಬದಲಿಗೆ ಶ್ರೀಮಂತಿಕೆ ತೋರಿಸಿಕೊಳ್ಳುವುದಕ್ಕೆ ಲಕ್ಷಾಂತರ ರೂ. ಬಂಡವಾಳ ಹಾಕಿ ಮನೆ ನಿರ್ವಣ, ಗೃಹ ಪ್ರವೇಶ ಮಾಡಿದ್ರೆ ಅದು ವೇಸ್ಟ್.

ಉದಾ: ನೀವು 50 ಲಕ್ಷ ರೂ. ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಿದ್ರೆ 5 ಸಾವಿರ ರೂ. ಖರ್ಚಿನಲ್ಲಿ ಗೃಹ ಪ್ರವೇಶ ಮಾಡುವುದು ಸೂಕ್ತ. ಅದರೆ, ಕೆಲವರು 50 ಲಕ್ಷ ರೂ. ಮನೆ ನಿರ್ವಣಕ್ಕೆ ಖರ್ಚು ಮಾಡಿದ್ರೆ ಅದರ ಗೃಹ ಪ್ರವೇಶಕ್ಕೆ 5 ಲಕ್ಷ ರೂ. ಖರ್ಚು ಮಾಡುತ್ತಾರೆ ಇದು ವೇಸ್ಟ್. ಇದು ಬೇಕಾ?

3) ವೈಭೋಗದ ಜೀವನ ಬೇಡ - ಕೆಲವೊಂದಿಷ್ಟು ಜನರಿಗೆ ಒಂದು ಅಭ್ಯಾಸವಿರುತ್ತೆ. ಬೇರೆ ಯಾವುದೇ ದೂರದ ಊರಿಗೆ ಹೋದ್ರು ಅವರು ಸ್ಟೇ ಆಗೋದೇ ಸ್ಟಾರ್ ಹೋಟೆಲ್​ನಲ್ಲಿ, ಇದು ಬೇಡಾ. ಏಕೆಂದರೆ, ಅಲ್ಲಿ ದಿನದ ಬಾಡಿಗೆ 10, 15 ಅಥವಾ 20 ಸಾವಿರ ರೂ. ಇರುತ್ತೆ. ಇಲ್ಲಿ ಶ್ರೀಮಂತಿಕೆ ತೋರಿಸಿಕೊಳ್ಳುವುದಕ್ಕೆ ಅನವಶ್ಯಕ ಖರ್ಚು ಬೇಡ. ಎಲ್ಲಿ ನಿಮ್ಮ ಬಿಸಿನೆಸ್​ಗೆ ಸಹಾಯವಾಗುತ್ತೋ ಅಲ್ಲಿ ಈ ಲೈಫ್ ನಡೆಸಿ ಇಲ್ಲಾ ಅಂದರೆ ಬೇಡ.

ನಾವು ಬಟ್ಟೆ ಯಾಕೆ ಹಾಕುತ್ತೇವೆ? ಹೋದಲ್ಲಿ ನೀಟಾಗಿ ಕಾಣಬೇಕು ಅಂಥ. ಅದರೆ, ಎಷ್ಟೋ ಜನ ಬಟ್ಟೆ ತೆಗೆದುಕೊಳ್ಳುತ್ತಾರೆ. ಅದು ಹೇಗೆ ಅಂದರೆ ಅದು ಯಾವ ಮಟ್ಟದಲ್ಲಿಯೂ ಇವರಿಗೆ ಲಾಭ ತರುವುದಿಲ್ಲ. ಅದ್ದರಿಂದ ನಾವು ಹಾಕುವಂಥ ಬಟ್ಟೆ ನಮ್ಮ ಬಿಸಿನೆಸ್​ನಲ್ಲಿ ಲಾಭ ತಂದುಕೊಡುವಂತಿರಬೇಕು. ಅದನ್ನು ಬಿಟ್ಟು ಬಟ್ಟೆಗಾಗಿ ಸುಮ್ನೆ ಖರ್ಚು ಮಾಡಿದ್ರೆ ಏನು ಲಾಭ?

4) ಆಡಂಬರದ ಜೀವನ ಬೇಡ - ಕೆಲವರು ನಾನು ಬಹಳ ಶ್ರೀಮಂತ ಎಂದು ತೋರಿಸಿಕೊಳ್ಳುವುದಕ್ಕೆ 50 ಲಕ್ಷ ರೂ.ನಿಂದ 1 ಕೋಟಿ ರೂ. ಖರ್ಚು ಮಾಡಿ ಮದುವೆ, ಹುಟ್ಟುಹಬ್ಬ ಸೆಲೆಬ್ರೇಷನ್ ಸೇರಿ ಇತರ ಕಾರ್ಯಕ್ರಮ ಮಾಡುತ್ತಾರೆ. ಅದರೆ, ಅದರಲ್ಲಿ ಎಷ್ಟೋ ಜನ ಶ್ರೀಮಂತಿಕೆ ತೋರಿಸಿಕೊಳ್ಳುವುದಕ್ಕೆ ಹೋಗಿ ಸಾಕಷ್ಟು ಖರ್ಚು ಮಾಡಿ ಬಡವರಾಗಿದ್ದಾರೆ. ಹಾಗಾಗಿ ನೀವು ಮದುವೆ, ಹುಟ್ಟುಹಬ್ಬ ಇತರ ಕಾರ್ಯಕ್ರಮಗಳಿಗೆ ಹೆಚ್ಚು ಖರ್ಚು ಮಾಡುವುದಕ್ಕೆ ಹೋಗಬೇಡಿ. ಇನ್ನು ಕೆಲವರಂತೂ ಫೇಸ್​ಬುಕ್, ಇನ್​ಸ್ಟಾಗ್ರಾಂನಲ್ಲಿ ಫೋಟೋ ಅಥವಾ ರೀಲ್ಸ್ ಹಾಕುವುದಕ್ಕಾಗಿ ದೂರದ ಊರಿಗೆ ಟ್ರಾವೆಲಿಂಗ್ ಮಾಡಿ ಅಲ್ಲಿನ ಒಂದು ಫೋಟೋ/ ರೀಲ್ಸ್ ಹಾಕುತ್ತಾರೆ ಇದನ್ನು ನೀವು ಮಾಡುವುದಕ್ಕೆ ಮುಂದಾಗಬೇಡಿ. ಇದರಿಂದ ಹಣ ಮತ್ತು ನಿಮ್ಮ ಸಮಯವೇ ವೇಸ್ಟ್. ಇದರ ಜತೆಗೆ ಇನ್ನಷ್ಟು ಜನ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ದಾನ ಮಾಡುವುದು, ಗಿಫ್ಟ್ ನೀಡುವುದು ಮಾಡುತ್ತಾರೆ ಇದು ಕೂಡ ನಿಮನ್ನು ಬಡವರಾಗಿ ಮಾಡಬಹುದು ಹುಷಾರ್.

5) ಬ್ಯಾಡ್ ಲೋನ್ ಮತ್ತು ಗುಡ್ ಲೋನ್ ಬಗ್ಗೆ ತಿಳಿದುಕೊಳ್ಳಿ- ನೀವು ಯಾವುದೇ ಬಿಸಿನೆಸ್ ಮಾಡುವಾಗ ನಿಮ್ಮ ಎಬಿಲಿಟಿ ಮತ್ತು ಪೋ›ಡಬ್ಯಲಿಟಿ ತಿಳಿದುಕೊಂಡು ಮಾಡಬೇಕು. ಸಾಮಾನ್ಯವಾಗಿ ಬಹಳಷ್ಟು ಜನ ಶ್ರೀಮಂತಿಕೆ ತೋರಿಸಿಕೊಳ್ಳುವುದಕ್ಕೆ ಸಾಲ ಮಾಡಿ ಎಲ್ಲವನ್ನು ಮಾಡುತ್ತಾರೆ. ಕೊನೆಗೆ ಸಾಲ ಕಟ್ಟುವುದಕ್ಕೆ ಸಾಧ್ಯವಾಗದೇ ಹೋಗುತ್ತೆ. ಯಾಕಂದ್ರೆ ಆದಾಯ ಇರುವುದಿಲ್ಲ. ಅಗ ಅವರು ಅದೇ ಸಾಲ ತಿರಿಸುವುದಕ್ಕೆ ಕೊನೆಯದಾಗಿ ಆಸ್ತಿ ಮಾರಬೇಕಾಗುತ್ತೆ ಅಗ ಪುನಃ ಬಡವರಾಗಬೇಕಾಗುತ್ತೆ. ಅದಕ್ಕಾಗಿ ಸಾಲ ಮಾಡುವ ಮೊದಲು ಇದು Bad loan ಅಥವಾ Good loan ಚೆಕ್ ಮಾಡುವುದು ಸೂಕ್ತ. ಇದರಲ್ಲಿ Bad loan ಅಂದರೆ ಮದುವೆ, ಹುಟ್ಟುಹಬ್ಬ ಸೆಲೆಬ್ರೇಷನ್, ಟ್ರಾವೆಲಿಂಗ್​ಗಾಗಿಯೇ ತೆಗದುಕೊಳ್ಳುವ ಸಾಲ. Good loan ಅಂದರೆ ಆಸ್ತಿ ಖರೀದಿ, ಬಿಸಿನೆಸ್ ಅರಂಭಿಸುವುದಕ್ಕೆ ಮಾಡುವ ಸಾಲ. Bad loan ಮತ್ತು Good loan ಅಂದರೆ ಏನು ಎಂಬ ಸಂಪೂರ್ಣ ಮಾಹಿತಿ freedom Appನಲ್ಲಿದೆ, ಈ ಕೋರ್ಸ್ ನೀವು ನೋಡಿ ತಿಳಿದುಕೊಳ್ಳಬಹುದು. ಕೊನೆಯದಾಗಿ ಹೇಳಬೇಕು ಅಂದ್ರೆ ನೀವು ಶ್ರೀಮಂತರಾಗಬೇಕು, ಶ್ರೀಮಂತರಾಗಿ ಇರಬೇಕು ಅಂದರೆ ಶ್ರೀಮಂತಿಕೆ ತೋರಿಸಿ ಕೊಳ್ಳುವುದನ್ನು ಬಿಡಬೇಕು. ನೆನಪಿರಲಿ ಇತಿಹಾಸದಲ್ಲಿ ಬಹಳಷ್ಟು ಜನ ಬಡವರಾಗುವುದಕ್ಕೆ ಕಾರಣವಾಗಿದ್ದೇ ತೋರಿಕೆಯ ಶ್ರೀಮಂತಿಕೆ. ನೀವು ಹಾಗೆ ಮಾಡಬೇಡಿ. ಶ್ರೀಮಂತರಾಗಿ ಬದುಕು ಸಾಗಿಸಿ, ಅಲ್ ದಿ ಬೆಸ್ಟ್.

ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿ!: ಕನ್ನಡದ ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಫ್ರೀಡಂ ಆ್ಯಪ್​ ಸಹಯೋಗದಲ್ಲಿ ನಡೆಸುತ್ತಿರುವ ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ- 9632742525

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net