

ಸಮಯದಲ್ಲಿ ಅಚಾನಕ್ ಆಗಿ ಒಂದೇ ಶಬ್ದವನ್ನು ಏಕಕಾಲಕ್ಕೆ ಇಬ್ಬರು ಹೇಳಿದರೆ ‘ಒಬ್ಬರ ಮನೆಗೆ ನೆಂಟರು ಬರುತ್ತಾರೆ’ ಎಂದು ನಾವು ಹೇಳುವುದು ಸಾಮಾನ್ಯ. ಇದರ ಹಿಂದಿನ ಮರ್ಮ ಮಾತ್ರ ಗೊತ್ತಿಲ್ಲ. ಇದೇ ರೀತಿಯ ಮಾತು ಇಟಲಿಯಲ್ಲಿಯೂ ಇದೆ. ಅದೇನೆಂದರೆ ಅಲ್ಲಿ ಸ್ನೇಹಿತರಿಬ್ಬರೂ ಏಕಕಾಲಕ್ಕೆ ಒಂದು ಶಬ್ದ ನುಡಿದರೆ ಮೂಗನ್ನು ಹಿಡಿದುಕೊಳ್ಳಬೇಕು.
ಇಲ್ಲದಿದ್ದರೆ ಇಬ್ಬರಲ್ಲಿ ಒಬ್ಬರ ಮದುವೆ ಆಗುವುದೇ ಇಲ್ಲ ಎಂಬ ನಂಬಿಕೆಯಿದೆ. ಮೂಗನ್ನು ಹಿಡಿದುಕೊಳ್ಳದವರ ಮದುವೆ ಆಗದೇ ಇರುವ ಉದಾಹರಣೆಗಳೂ ಇರುವ ಕಾರಣ, ಅವಿವಾಹಿತರು ಭಯದಿಂದ ಕೂಡಲೇ ಮೂಗು ಹಿಡಿದುಕೊಳ್ಳುತ್ತಾರೆ.
| ಸುಚೇತನಾ