

ರಾತ್ರಿ ಎದ್ದು ಬಾತ್ರೂಮ್ೆ ಹೋಗುವ ಅಭ್ಯಾಸ ಕೆಲವರಿಗೆ ಇರುತ್ತದೆ. ಅಂಥವರೇನಾದರೂ ಸ್ವಿಜರ್ಲೆಂಡ್ನ ಅಪಾರ್ಟ್ವೆುಂಟ್ನಲ್ಲಿ ವಾಸವಾದರೆ ಮಾತ್ರ ದೇವರೇ ಗತಿ. ಏಕೆಂದರೆ ಅಲ್ಲಿನ ಕಾನೂನಿನ ಪ್ರಕಾರ, ರಾತ್ರಿ 10 ಗಂಟೆಯ ಮೇಲೆ ಟಾಯ್ಲೆಟ್ ಫ್ಲಷ್ ಅನ್ನು ಬಳಸುವಂತಿಲ್ಲ. ಫ್ಲಷ್ ಶಬ್ದ ಜಾಸ್ತಿ ಇದ್ದರೆ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಆಗುತ್ತದೆ ಎಂಬುದು ಈ ಕಾನೂನಿನ ಹಿಂದಿರುವ ಸತ್ಯವಂತೆ. ಈ ಕಾನೂನು ಮೀರಿದರೆ ದಂಡವೂ ಇದೆ. ಆದರೆ ಫ್ಲಷ್ ಮಾಡಿದ್ದನ್ನು ಕೋರ್ಟ್ನಲ್ಲಿ ಹೇಗೆ ಸಾಬೀತು ಮಾಡುತ್ತಾರೆ ಎನ್ನುವುದೇ ಕುತೂಹಲದ ವಿಷಯ.
ಸುಚೇತನಾ