ಇದು ಎಂಥಾ ಲೋಕವಯ್ಯಾ...: ಸುಂದರಿಯ ಜತೆ ಹಾರಿತು ನಾಯಿ...

SUNDARI
Published on

ಯಾರಾದರೂ ತೀರಾ ಸಂಕಷ್ಟದಲ್ಲಿದ್ದರೆ ‘ನೋಡಿ ಪಾಪ, ಅವರದ್ದು ನಾಯಿಪಾಡು’ ಎನ್ನುತ್ತೇವೆ. ಆದರೆ ಜಪಾನ್ ವಿಮಾನದಲ್ಲಿ ಪ್ರಯಾಣಿಸಿದರೆ ‘ಆಹಾ! ನಮಗೂ ಇಂಥ ನಾಯಿ ಜನ್ಮ ಇರಲಪ್ಪ’ ಎನ್ನುತ್ತೀರಿ. ಹೌದು. ಇಂಥದ್ದೊಂದು ಭಾಗ್ಯವನ್ನು ಜಪಾನ್ ಸರ್ಕಾರ ನಾಯಿಗಳಿಗೆ ಒದಗಿಸಿದೆ.

ವಿಮಾನಯಾನ ಸೇವೆಯನ್ನು ಸಾಕು ಪ್ರಾಣಿಗಳಿಗೂ ನೀಡುವ ‘ಪೆಟ್ ಹಾಲಿಡೇ ಟ್ರಾವಲ್’ ಯೋಜನೆಯನ್ನು ಅಲ್ಲಿ ಜಾರಿಗೊಳಿಸಲಾಗಿದೆ. ಖಾಸಗಿ ಜೆಟ್​ಗಳಲ್ಲಿ ಪುಟ್ಟ ನಾಯಿಗಳನ್ನು ಮಾಲೀಕರು ತಮ್ಮತೊಡೆಯ ಮೇಲೆ ಕೂರಿಸಿಕೊಳ್ಳಬಹುದು.

ಶ್ವಾನಗಳು ದೊಡ್ಡದಾಗಿದ್ದರೆ ಕೆಳಗೆ ಮೇಲೆ ಕೂರಿಸಬಹುದು ಎಂದು ನಿಯಮದಲ್ಲಿ ತಿಳಿಸಲಾಗಿದೆ. ಅಂದಹಾಗೆ ನಾಯಿಗೆ ನೀಡಬೇಕಿರುವ ಶುಲ್ಕ 9 ಸಾವಿರ ಡಾಲರ್ ಅಂದರೆ ಸುಮಾರು 6.44 ಲಕ್ಷ ರೂ.! ಈ ಮೊತ್ತ ಕೇಳಿ ಹುಬ್ಬು ಮೇಲೇರಿಸಿ, ‘ನಾಯಿಗೆ ಇಷ್ಟೊಂದು ದುಡ್ಡನ್ನು ಯಾರು ಖರ್ಚು ಮಾಡುತ್ತಾರೆ’ ಅನ್ನಬೇಡಿ. ಈಚೆಗೆ ಜಿಯೊ ಮ್ಯಾನ್ ಎಂಬ ಸುಂದರಿ ತನ್ನ ಎರಡು ನಾಯಿಗಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಲ್ಲದೇ ಅದಕ್ಕಾಗಿಯೇ ವಿಮಾನದಲ್ಲಿ ಇರುವ ಎಲ್ಲ ಐಷಾರಾಮಿ ಸವಲತ್ತುಗಳನ್ನು ಪಡೆದುಕೊಂಡು ಕನಿಷ್ಠ 20 ಲಕ್ಷ ರೂ. ಖರ್ಚು ಮಾಡಿದಳಂತೆ!

‘ಇವು ನನ್ನ ಮನೆಯ ಸದಸ್ಯರಿದ್ದಂತೆ. ಇವಕ್ಕೆ ಇಷ್ಟಾದರೂ ಖರ್ಚು ಮಾಡದಿದ್ದರೆ ಹೇಗೆ?’ ಎಂದು ಆಕೆ ಪ್ರಶ್ನಿಸಿದ್ದಾಳೆ!

| ಸುಚೇತನಾ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net